• ಆತ್ಮಾವಲೋಕನ

  ನನ್ನಿಂದ ನಾನೇ ಹೊರನಿಂತು ನನ್ನನ್ನೇ ನೋಡಿಕೊಳ್ಳುವ ಯೋಚನೆ, ಆಗಾಗ ನನ್ನನ್ನೆ ನಾ ಅರಿಯುವಂತೆ ನೀಡುವುದು ಸೂಚನೆ. ಹೊರಗೆಲ್ಲೂ ಜಗವಿಲ್ಲ, ನನ್ನೊಳಗೇ ಎಲ್ಲವನು ತೋರುವ ಆ ಮನನ, ಜಗತ್ತಿಗೆ ನನ್ನನ್ನ ಪರಿಚಯಿಸುವ, ನನ್ನ ನಿಜದ ಆತ್ಮಾವಲೋಕನ. ಭಾವನೆಗಳ ಒಡೆಯ ಈ ಮನ, ನಿತ್ಯ ನೂತನ ಅಲೆಗಳ ಜನನ, ಎಲ್ಲಕ್ಕೂ ಮೂಲವೊಂದೇ, ಎಲ್ಲಕೂ ಅಂತ್ಯ ನಂದೇ, ಎಂದು ತಿಳಿಸುವುದು ನನ್ನ ನಿಜದ ಆತ್ಮಾವಲೋಕನ. ನನ್ನ ಕರ್ಮದ ಅರಿವು ಹೇಗೆ, ಮನಸ್ಸು ಓಡುವುದು ತಿಳಿದಂಗೆ;...


 • ಬಯಲು

  ಜಗವ ನೋಡಲು ನಾ ಹೊರಗಿಡೆ ಅಂಗಾಲು, ಎತ್ತ ನೋಡಿದರೂ ಬರೀ ಬಯಲು. ನನ್ನೊಳಗಿನ ನೋವು ನಲಿವು ಉಕ್ಕಿ ಹೊರ ಬರಲು, ಆ ಹೊತ್ತಿಗೆ ಜಗದ ಮುಂದೆ ನಾನೇ ಬಯಲು. ದೂರದೂರಕೆ ನೋಟ ಹರಿಸಿದೆಡೆ, ಕಣ್ಣ ತುಂಬುತಿದೆ ಅಗಾಧ ಬಯಲು, ಒಳ ವಿಚಾರಕೆ ನನ್ನ ಮನಸ್ಸು ಕನಲಿದೆ, ಬುದ್ಧಿ ಇದು ನನ್ನದು, ಆ ಘಳಿಗೆಗೆ ಬಯಲು. ಬದುಕಿನ ಬಣ್ಣಗಳಲಿ ನಾ ಮುಳುಗಲು, ಕಾಣದಾಗಿತ್ತು ಎಲ್ಲವ ತೆರೆದಿಟ್ಟ ಬಯಲು. ನಿತ್ಯ ನೂತನ ಅನುಭವಕೆ...


 • ಕೊನೆ ವರುಷ

  ಅಷ್ಟು ಹೊತ್ತಿಗಾಗಲೇ ಸುಮಾರು ಮೂರೂವರೆ ವರುಷಗಳ ಜೊತೆಗೆ, ಮೂರು ಮಳೆಗಾಲವನ್ನೂ ಕಳೆದಿದ್ದೆವು. ಸಿಕ್ಕಿದ ದಿನದಿಂದಲೂ ಜೊತೆಗಿದ್ದು, ಒಟ್ಟಿಗೆ ಊಟ ಮಾಡಿ, ಆಟವಾಡಿಕೊಂಡು ಬೆಳೆದೋರು. ಅದೆಂಥಾ ಕಷ್ಟಾನೇ ಬರಲಿ, ಸಬ್ಜೆಕ್ಟುಗಳ ಮಳೆ ವಿಧಿ ಸುರಿಯೇ, ಒಬ್ಬರಿಗೊಬ್ಬರು ಪಾಠಗಳ ಹೇಳಿಕೊಡುತ್ತಾ, ಎಕ್ಸಾಮಿನಲ್ಲಿ ಉತ್ತರಗಳ ತೋರಿಸುತ್ತಾ ಬೆಲ್ಲ ಸಕ್ಕರೆಯಾಗಿ, ಎಲ್ಲರೊಳಗೊಂದಾಗಿ ಮಂಗಗಳಂತೆ ಇದ್ದೋರು. ಊರು, ಕೇರಿ, ಕಾಡು, ಬೆಟ್ಟಗಳನ್ನೆಲ್ಲ ಒಟ್ಟಿಗೆ ನೋಡಿಕೊಂಡು ಬಂದೋರು. ನಂಬದಿರುವ, ನಂಬಿರುವ ದೇವ – ದೆವ್ವಗಳನ್ನೂ ನೋಡಿ ಒಟ್ಟಿಗೆ ಕೈ...


 • ಧ್ಯಾನ

  ನಿಂತಲ್ಲೆ ನಾನು ಜಗವನ್ನ ಮರೆತು, ನನ್ನೊಳಗಿನ ನನ್ನನ್ನು ನನ್ನಲ್ಲೆ ಅರಿತು, ಆ ಘಳಿಗೆಗೆ ಮನಸ್ಸಿಗೆ ಏನೊ ಸಮಾಧಾನ, ಉಚ್ಚೆ ಹೊಯ್ಯುವುದು ನನಗೊಂದು ದಿವ್ಯ ಧ್ಯಾನ. ಪರಿಸರದ ಅರಿವಿಲ್ಲ, ಹೊತ್ತಿನ ಪರಿವಿಲ್ಲ, ಬದುಕಿನ ತುಂಬೆಲ್ಲ ಬರಿ ಅಜ್ಞಾನ. ಎಲ್ಲವೂ ನಶ್ವರ, ಬೇಕಿಲ್ಲ ಎಚ್ಚರ, ಉಚ್ಚೆ ಹೊಯ್ಯುವುದೇ ನನಗೊಂದು ಪರಮಧ್ಯಾನ. ಸುತ್ತೆಲ್ಲ ತುಂಬಿದೆ ಗಿಜುಗುಡುವ ಜಗವು, ಬೇಕು ನಮಗಂತು ಏಕಾಂತದ ವರವು. ಯಾರ ಜೊತೆಯೂ ಬೇಕಿಲ್ಲ ಎಂಬ ನಿಜದ ಮನನ, ಉಚ್ಚೆ ಹೊಯ್ಯುವುದು...


 • ಯವ್ವನ

  ಚಿಗುರಿತೀಗ ಒಂದು ರಾಗ, ಯವ್ವನದಲ್ಲಿ ಎಂಥ ವೇಗ, ಅನುದಿನವೂ ಮನದಲಿ ಮೂಡಿದೆ ಈಗ, ಯವ್ವನ ತಂದಂಥ ಹೊಸ ಆವೇಗ. ಮನದ ಒಳಗೆ ತುಂಬಿ ಕತ್ತಲೆ, ಬೆಳಕು ಹರಿಯೆ ಎಲ್ಲ ಬೆತ್ತಲೆ, ಹರೆಯವು ಕಾತರದಿ ಬಂದ ಬೆನ್ನಲ್ಲೆ, ಸ್ವರ್ಗ ಕೈಗೆಟಕುವುದು ಕುಂತು ಕುಂತಲ್ಲೆ. ಎದ್ದು ಬಿದ್ದರೂ ಎಲ್ಲ ಸೊಗಸು, ಹಿಡಿದರೂನೂ ತಡೆಯದ ಬಿರುಸು, ಬೇಲಿ ಹಾರೆ ನಲಿವುದು ಈಗ, ಅನುದಿನವೂ ನಮ್ಮ ಮನಸ್ಸು. ಯವ್ವನ ಇದು ತುಂಬಾ ಚುರುಕು, ಚೆಲ್ಲುತಿರುವುದು ನಿತ್ಯ...