• ನಾ ಸತ್ತ ದಿನ

  ನಾನು ಒಬ್ಬನೇ ಇರುವ ಒಳ್ಳೆ ಫೋಟೋನ ನೋಡಿದಾಗಲೆಲ್ಲ ಅದೊಂದು ಯೋಚನೆ ಬರುತ್ತೆ. ಅಕಸ್ಮಾತ್ ನಾನ್ ಸತ್ರೆ, ನಮ್ ಮನೆಯವ್ರು ಇದೇ ಫೋಟೋಗೆ ಫ್ರೇಮ್ ಹಾಕಿ, ಹೂ ಹಾರ ಹಾಕ್ಬೋದಾ ಅಂತ. ಫೋಟೋ ಫ್ರೇಮ್ ನ ಉದ್ದ ಎಷ್ಟಿರ್ಬೋದು? ಅಗಲ ಎಷ್ಟಿರ್ಬೋದು? ಬದುಕಿದ್ದಾಗಲೇ ಇವರೆಲ್ಲ ನನ್ನನ್ನ ಸುಟ್ಟಿದ್ದು ಸಾಕು, ಇನ್ನ ಸತ್ತಾಗಲು ಇವರಿಗೆ ಸುಡಲು ಬಿಡಬೇಕಾ, ಸುಮ್ನೆ ವಿದ್ಯುತ್ ಚಿತಾಗಾರದಲ್ಲಿ ಹಾಕಿ ಸುಟ್ಟು ಬೂದಿ ಮಾಡಿ ಅಂತ ವಿಲ್ ಬರೀಬೇಕು ಅನ್ಸುತ್ತೆ.....


 • ನಾಯಿ ಪಾಡು

  ಸಿಕ್ಕಿದ್ದ ತಿನ್ಕಂಡು, ಕಂಡಲ್ಲಿ ಮಲ್ಕಂಡು, ಹಾಡ್ತೀವಿ ನೆಮ್ಮದಿಯ ನೂರು ಹಾಡು, ಸಿಗುವುದೆ ಮನುಜರಿಗಿಂಥ ನಾಯಿ ಪಾಡು? ಇದ್ದಲ್ಲೆ ನಮ್ಮೂರು, ಬೇಕಿಲ್ಲ ಬೇರೂರು, ಅನುದಿನ ಇರುವುದು ನಮಗಿಲ್ಲಿ ಸ್ವರ್ಗ, ಇರುವುದೆ ಮನುಜರಲ್ಲಿ ಇಂಥ ವರ್ಗ? ಜೊತೆಯಲ್ಲಿ ನಾವೆಲ್ಲ, ಜಗಳಗಳು ನಮಗಿಲ್ಲ, ಇರ್ತೀವಿ ನಾವೆಂದಿಗೂ ಕೂಡಿಕೊಂಡು, ಬೆರೆವರೆ ಮನುಜರು ಒಗ್ಗಿಕೊಂಡು? ಹಾದಿ ಜನಜಂಗುಳಿಯೇ ನಮ್ಮಯ ಲಾಲಿ, ಸಂತೆಲ್ಲೂ ನಮಗುಂಟು ಸುಖ ನಿದ್ದಿರೆ ಹಾಡು, ಸಿಗುದು ಮನುಜರಿಗೆಂದಿಗೂ ನಿಜ ನಾಯಿ ಪಾಡು. - ಆದರ್ಶ...


 • ನನ್ನ ಊರು

  ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ, ಇಲ್ಲೇ ತಾನೆ ಇರುವುದು ನನ್ನ ಪುಟ್ಟ ಸಂಸಾರ. ಇಲ್ಲೇ ನಾನು ಹುಟ್ಟಿದ್ದು, ಇಲ್ಲೇ ನಾನು ಬೆಳೆದದ್ದು, ಇಲ್ಲಿ ತಾನೆ ನನಗೆ ಮಣ್ಣಾಗುವ ಆಸೆ ಇದ್ದಿದ್ದು. ಹೇಗೆ ತಾನೆ ಹೋಗಲಿ, ಬಿಟ್ಟು ನನ್ನ ಊರ, ಇಲ್ಲೇ ತಾನೆ ಇರುವುದು ನನ್ನ ಈ ಬಿಡಾರ. ಹೊಸಿಲ ಆಚಿನ ನೆಲವು ಎಶ್ಟು ಹಸಿರಾದರೇನು, ತಲೆಯ ಮೇಲಿನ ಸೂರಿನಶ್ಟು ಬೆಚ್ಚಗಿರುವುದೇನು? ಇಲ್ಲೇ ಅಲ್ಲವೆ ಕಳೆದದ್ದು ಗುಡುಗು ಮಳೆ...


 • ಕೃತಿ ನನ್ನವಳು - ೨

  ಭಾಗ ಒಂದು ಆಗಲೇ ಹೇಳಿದ ಹಾಗೆ, "ನನ್ನ ಜೀವನದ ಜೀವಂತಿಕೆಯೇ, ಅವಳಾಗಿ ಹೋಗಿದ್ಳು". ಮದುವೆ ನಿಶ್ಚಯ ಆಗಿ, ಮದುವೆ ಆಗೋ ಹೊತ್ತಿಗೆ, ಅದೆಷ್ಟೋ ಹುಚ್ಚಾಟಗಳ ಕಥೆಗೆ ಲೇಖನಿ‌ ಹಿಡಿದಿದ್ಲು ಅವಳು. ಎಷ್ಟೋ ಸಲ, ಅವಳ‌ ಕಡೆಯಿಂದ ಕರೆ ಬಂದಾಗ, "ಈ ದಿನ ಅದೇನು ತಲೆಯಲ್ಲಿ ಯೋಜನೆ ಹಾಕಿದ್ದಾಳೋ!", ಅಂತ ದಿಗಿಲು ಬಿದ್ದದ್ದೂ ಇದೆ. ಅದೆ ರೀತಿ, ಇವಳನ್ನ ಅರ್ಥ ಮಾಡಿಕೊಂಡ ಮೇಲೆ, ಇವಳ‌ ಸಾಕಷ್ಟು ಹುಚ್ಚಾಟಗಳ ಭಾಗವಾದ ಮೇಲೆ, "ಇನ್ನೂ...


 • ಮರೆತ ಸ್ಪಂದನೆ

  ಮನಸ್ಸು ಇಂದು ಬಯಸಿದೆ, ನಿಲುಕದ ಒಂದು ದೂರ, ಹೇಗೆ ತಾನೇ ನುಗ್ಗುವುದು ಮುಂದಕ್ಕೆ, ನಿತ್ಯವು ನೂತನ ಘೋರ. ಸುತ್ತುತಿಹುದು ಜೀವನ, ನಿಂತ ಕಡೆಯೇ ಕದಲದೆ; ಗಾಳಿಯು ಬಾರದೇ ಮರವು ತಾನಾಗೆ ಬೀಸುತಲಿರಬಹುದೇ? ನಿಂತ ಭಾವನೆ ಹರಿಯಲಾರದೇ ಮನದೊಳಗೆ ಹೆಪ್ಪುಗಟ್ಟಿದೆ, ಸ್ಪಂದನೆ ಮರೆತ ಮನವು ಈಗ, ನನ್ನ ಒಳಗೆ ಸಿಲುಕಿದೆ. ಹೇಗೆ ತಾನೇ ಸಾಗಬೇಕು ಇನ್ನು, ಎಲ್ಲವನು ಕಳೆದುಕೊಂಡ ಬದುಕು? ಕೈಯ್ಯ ಚಾಚಿ ಬೇಡಿದರೂನು, ಸಿಗದು ಈಗ ಒಲವ ಸರಕು. ಮನಸ್ಸು...