ನಾಯಿ ಪಾಡು
by Adarsha
ಸಿಕ್ಕಿದ್ದ ತಿನ್ಕಂಡು,
ಕಂಡಲ್ಲಿ ಮಲ್ಕಂಡು,
ಹಾಡ್ತೀವಿ ನೆಮ್ಮದಿಯ ನೂರು ಹಾಡು,
ಸಿಗುವುದೆ ಮನುಜರಿಗಿಂಥ ನಾಯಿ ಪಾಡು?
ಇದ್ದಲ್ಲೆ ನಮ್ಮೂರು,
ಬೇಕಿಲ್ಲ ಬೇರೂರು,
ಅನುದಿನ ಇರುವುದು ನಮಗಿಲ್ಲಿ ಸ್ವರ್ಗ,
ಇರುವುದೆ ಮನುಜರಲ್ಲಿ ಇಂಥ ವರ್ಗ?
ಜೊತೆಯಲ್ಲಿ ನಾವೆಲ್ಲ,
ಜಗಳಗಳು ನಮಗಿಲ್ಲ,
ಇರ್ತೀವಿ ನಾವೆಂದಿಗೂ ಕೂಡಿಕೊಂಡು,
ಬೆರೆವರೆ ಮನುಜರು ಒಗ್ಗಿಕೊಂಡು?
ಹಾದಿ ಜನಜಂಗುಳಿಯೇ ನಮ್ಮಯ ಲಾಲಿ,
ಸಂತೆಲ್ಲೂ ನಮಗುಂಟು ಸುಖ ನಿದ್ದಿರೆ ಹಾಡು,
ಸಿಗುದು ಮನುಜರಿಗೆಂದಿಗೂ ನಿಜ ನಾಯಿ ಪಾಡು.
- ಆದರ್ಶ