• ಬಾರ್ ಗರ್ಲ್

    ಕೆಲಸ ಹುಡುಕಿಕೊಂಡು ಬಂದ ಅವನಿಗೆ ಸಿಕ್ಕಿದ್ದು ಬಾರ್ ಗರ್ಲ್ ಗಳನ್ನು ಗಾಡಿಯಲ್ಲಿ ಸಂಜೆ ೪ರ ಸುಮಾರಿಗೆ ಕರೆ ತಂದು, ಅವರ ಕೆಲಸ ಮುಗಿದ ಮೇಲೆ ಮತ್ತೆ ವಾಪಸ್ ಕರೆದುಕೊಂಡು ಹೋಗಿ ಬಿಡುವ ಕೆಲಸ. ಎಲ್ಲಾ ಬಾರ್ ಗರ್ಲ್ ಗಳು ಒಂದೇ ಬಿಲ್ಡಿಂಗ್ ನಲ್ಲಿ ಇದ್ದ ಕಾರಣ ಅವನು ಸಂಜೆ ೪ರ ಸುಮಾರಿಗೆ ತನ್ನ ಟಿಟಿ ಯನ್ನು ಆ ಬಿಲ್ಡಿಂಗ್ ಮುಂದೆ ತಂದು ನಿಲ್ಲಿಸಿದ. ಒಬ್ಬೊಬ್ಬರೇ ಹುಡುಗೀಯರು ಗಾಡಿಯನ್ನು ಹತ್ತ ತೋಡಗಿದರು....


  • ಮಳೆಯಲಿ

    ಮಿಂದುಬಿಡಲೇ ಈ ದಿನ ತುಂಬಿ ಬಂದ ಮಳೆಯಲಿ, ಇನ್ನೆಷ್ಟು ಕಾಲ ಕಳೆಯಬೇಕು ನಾನು, ದಿನನಿತ್ಯದ ಕೊಳೆಯಲಿ. ಇತ್ತ ಬಂತು ಮಲೆಯ ಮಾರುತ, ತುಂಬಿಕೊಂಡು ತನ್ನ ಒಡಲ, ಹೊಸಿಲ ದಾಟಿ ಓಡುವೆ ಹೊರಕ್ಕೆ, ಸೇರುವಂತೆ ಹೊಳೆಯು ಕಡಲ. ಜಡವಾದ ಬದುಕು ಏಕೆ, ಹಕ್ಕಿಯು ಇದ್ದಲ್ಲೇ ಉಳಿಯುವುದೇ, ಬಡಿಯದಂತೆ ತನ್ನ ರೆಕ್ಕೆ? ಅಂತರಂಗದಿ ಬಂದ ಅಲೆಯು ತೇಲಿಸುತಿದೆ ನನ್ನನು, ಮನೆಯ ಹೊರಗೆ ಬಿದ್ದ ಮಳೆಯು ಚಿಗುರಿಸುತಿದೆ ಇಳೆಯನು. ಮಿಂದುಬಿಡಲೇ ಈ ದಿನ ತುಂಬಿ...


  • ಯಾವುದು?

    ಅನ್ನ ನೀಡುವ ಕೈ ಯಾವುದೊ? ನನಗೆ ಪ್ರೀತಿ ನೀಡುವ ಮನಸ್ಸಾವುದೊ? ಅನ್ನ ಪ್ರೀತಿ ಎರಡೂ ಸಿಗುವ ಆ ಸುಂದರ ಸೊಬಗ ಬದುಕಾವುದೊ? ಏರು ಯಾವುದೊ, ಇಳಿಜಾರು ಯಾವುದೊ, ಕಣಿವೆಯ ನಡುವಲಿ ನಡೆವಾಗ ನೆರಳಂತೆ ನಡೆವ ಆ ಧೀರತನದ ಮನಸ್ಸಾವುದೊ? ಸುಳ್ಳಾವುದೊ ನನ್ನ ನಿಜಯಾವುದೊ, ನನ್ನ ನಿಜದ ಸುಳ್ಳಿನೊಡನೆ ಉಳಿಯುವ ಆ ನನ್ನ ಕನಸಾವುದೊ? ಮೂಡಣ ಯಾವುದೊ, ಬಡಗ ಯಾವುದೊ, ದಿಕ್ಕು ಮರೆತು ಅಲೆವಾಗ ಜೊತೆಗಿರುವ ಆ ಮೂರ್ತ ಚುಕ್ಕಿಯಾವುದು? ಕಿರಿ...


  • ಸಂತೆ ನಡುವೆ

    ಸಂತೆಯ ನಡುವಿದೆ ನನ್ನ ಮನೆ, ಸದ್ದು ಮಾಡದಿರುವುದೆ ಜಗವು ಎಲ್ಲವ ಬಿಟ್ಟು ಸುಮ್ಮನೆ. ಸುತ್ತ ಜನರು ಸುಳಿವರು, ಕೇಕೆ ಹಾಕಿ ಕುಣಿವರು, ಧ್ಯಾನಕ್ಕೆಂದು ನಾ ಕೂರಲು, ಶಪಥಗೈವರು ಸುತ್ತ ಎಲ್ಲರು, ಆಗಸವನೇ ಧರಗೆಳಿಸಲು. ಅಲ್ಲೊಬ್ಬನ ಅಳು, ಇಲ್ಲೊಬ್ಬಳ ನಗು, ಹುಚ್ಚೆದ್ದು ಓಡುವುದು ಯಾರದ್ದೋ ಮಗು, ಇಲ್ಲೊಂದು ನಾಯಿ, ಅಲ್ಲೊಂದು ದನ ಇವೆಡರ ನಡುವೆ ಘೋರ ಕದನ. ಸಂತೆಯ ನಡುವಿದೆ ನನ್ನ ಮನೆ, ಸದ್ದು ಮಾಡದೆ ಇರುವರೆ ಎಲ್ಲರಿಲ್ಲಿ ಸುಮ್ಮನೆ. ಮೋಡದಲು...


  • ಹೋಗ್ಲಿ ಬಿಡು

    ಗೊತ್ತಿರದವರಿಗೆ ಗೌರವ ಕೊಡು, ಗೊತ್ತಿರುವವರಿಗೆ ಒಲವ ಕೊಡು, ಬರುವವರಿಗೆ ನಿನ್ನೊಳ್ಳೆ ಮನಸ್ಸೇ ಗೂಡು, ಬಂದು ಹೋಗುವವರು ಸುಮ್ಮನೆ ಹೋಗ್ಲಿ ಬಿಡು. ಎತ್ತ ಬಿದ್ದರೂ ಎದ್ದು ಬಿಡು, ಏಳದಿದ್ದರೂ ಉರುಳಿ ನಲಿದಾಡು, ಸರಳ ಜೀವನದ ಸುತ್ತ ದಟ್ಟ ಕಾಡು, ಅತ್ತಿತ್ತ ನೋಡದೆ ಜೀವನವು ನೆಟ್ಟಗೆ ಹೋಗ್ಲಿ ಬಿಡು. ಜೀವನವಿಹುದು ಆದಿ ಅಂತ್ಯದ ನಡುವೆ, ನೆಮ್ಮದಿಯೊಂದೆ ಎಂದಿಗೂ ಅದರ ಒಡವೆ, ಅಗಾಧ ಆಗಸಕೆ ಮನವನ್ನ ತೆರೆದಿಡು, ಯೋಚನೆಗಳು ದಿಗಂತದೆಡೆಗೆ ಹಾರಿ ಹೋಗ್ಲಿ ಬಿಡು....