ಅತ್ತುಬಿಡಲೇ ಈ ದಿನ, ನನ್ನ ಒಳಗೆ ನಾನು,
ಯಾರಿಗೂ ತೋರದೆ ವಿಧಿಯ ಈ ಸಂಚನ್ನು.
ಕರಗಿ ಹೋಗಲಿ ನೋವೆಲ್ಲ ನನ್ನೊಳಗೆ,
ತೇಲಿಬರುವ ಮುನ್ನ, ಮತ್ತೊಮ್ಮೆ ಮುಗುಳುನಗೆ.

ರಾಗವೆಲ್ಲಿ ಈಗ, ಹೊಮ್ಮುತ್ತಿಲ್ಲ ನನ್ನ ಸ್ವರದಲ್ಲಿ,
ಕೂಗಲೂ ದನಿಯಿಲ್ಲ, ಹೇಗೆ ನಾ ಅಳಲಿ.
ಅತ್ತುಬಿಡಲೇ ನಾನು, ಈ ದಿನ ನನ್ನೊಳಗೆ,
ತಲುಪುವ ಮುನ್ನ, ನನ್ನ ನೋವು ಮೌನದ ಬಳಿಗೆ.

ಮರುದನಿಯೂ ಸೋತಿದೆ ನನ್ನನ್ನು ತಲುಪಲು,
ಸಂತೈಸಲು, ನನ್ನ ಬಿಗಿದಪ್ಪಿಕೊಳ್ಳಲು.
ಅತ್ತುಬಿಡಲೇ ನಾನು, ಈ ದಿನ ನನ್ನೊಳಗೆ,
ಬೇಸರವ ಬಡಿದೋಡಿಸಿ, ಬರುವ ಮುನ್ನ ಮುಗುಳುನಗೆ.

- ಆದರ್ಶ