ಹೃದಯ ಮೆದುವಾಗಲಿ,
ಕಲ್ಲಲ್ಲೂ ಹೂವರಳಿ.
ಹಗಲು ಇರುಳು ಮನಸ್ಸು ಹಗುರಾಗಲಿ,
ಹೊಸದಾಗಿ ಒಲವ ಹೂವರಳಿ.

ದೂರದೂರಕೆ ಪಯಣವೇಕೆ,
ಮನದೊಳಕೆ ಬಾ ಮರಳಿ,
ಮನಕೆ ನೀರುಣಿಸಿ ಗಿಡ ನೆಡಬೇಕಿದೆ,
ಕಂಪು ಹರಡಲಿ, ಕಲ್ಲಲ್ಲೂ ಹೂವರಳಿ.

ಮುಗಿಲೆತ್ತರದ ಬೆಟ್ಟವಿರಲಿ,
ಹೂಬಳ್ಳಿ ಅದನ ಮೀರಿ ಬೆಳೆಯಲಿ.
ಮಳೆ, ಬೇಸಿಗೆ ಏನೇ ಇರಲಿ,
ಹೃದಯ ಮೆದುವಾಗಲಿ,
ಕಲ್ಲಲ್ಲೂ ಹೂವರಳಿ.

- ಆದರ್ಶ