ಮುಕುಳಿ ನೋವು ಸುಮ್ನೆ ಕುಂತರೆ,
ಕಾಲು ನೋವು ಎದ್ದು ನಿಂತರೆ,
ಅರವತ್ತರವರೆಗೆ ಕಾಯೋರು ಯಾರು?
ಬಂದು ನೋಡಿ ಇಲ್ಲಿ,
ನಾವು ಮೂವತ್ತಕ್ಕೆ ಮುದುಕರು.

ಎದ್ದು ಕೆಲಸ ಮಾಡೋರಲ್ಲ,
ಹೊಸಿಲ ದಾಟಿ ಹೋಗೋರಲ್ಲ.
ಇಡೀ ದಿನ ಕುಂತು ಹೊಟ್ಟೆ ಬಂದೋರು,
ಇಲ್ಲಿ ನೋಡಿ, ನಾವು ಮೂವತ್ತಕ್ಕೆ ಮುದುಕರು.

ಇರುಳಲ್ಲಿ ನಿದ್ದೆಯಿಲ್ಲ ನಮಗೆ,
ಹಗಲೂ ಕಳೆಯೋದಿಲ್ಲ.
ಗಂಟೆಗಟ್ಟಲೆ ಕೂತು ಗುಡ್ಡೆ ಹಾಕೋರ್ಯಾರು?
ಇಗೋ! ಇಲ್ಲಿ ನೋಡಿ, ನಾವೇ ಮೂವತ್ತರ ಮುದುಕರು.

- ಆದರ್ಶ