ಮನದ ಮೂಲೆಯಲ್ಲಿ ನಿಂತು,
ಎಲ್ಲದಕ್ಕೂ ಅಂತು ಅಸ್ತು,
ಒಳ್ಳೆದು ಕೆಟ್ಟದ್ದು ಏನೆ ಬರಲಿ,
ಒಪ್ಪಿಕೊಂಡಿತ್ತು ನನ್ನ ಮನದ ವಾಸ್ತು.

ಏರಿದಂತೆ ಎದೆಯ ಬಡಿತ,
ಏರುಪೇರಾಯ್ತು ಕಾಲ ಕುಣಿತ.
ನೂರು ನಡುಕ ಒಳಕ್ಕೆ ಬಂತು,
ಎಲ್ಲ ಒಳ್ಳೆದಕ್ಕಂತು, ನನ್ನ ಮನದ ವಾಸ್ತು.

ನೂರು ಜನರ ಒಲುಮೆ ಇರಲಿ,
ನೂರು ಜನ ಬೈದು ಬಿಡಲಿ,
ಎಲ್ಲವೂ ಒಂದೆ ಯಾವತ್ತು.
ನಿನ್ನ ಪಾಡಿಗೆ ನೀನಿರು, ಅನ್ನೋದು ಈ ಮನದ ವಾಸ್ತು.

- ಆದರ್ಶ