• ಮರೆವು

    ಅಪ್ಪಿದಾಗ ನನ್ನ, ಬಾಳ ನೂರು ನೋವು, ಕಾಪಾಡಲು ಬರುವ, ನಗುವ ಘಳಿಗೆ ಹಲವು. ನನ್ನ ಒಳಗೆ ಇರುವ, ನನ್ನ ಕಾಳಜಿ ಮಾಡುವ ಒಲವು, ಹೊಚ್ಚಹೊಸ ನೆನಪುಗಳಿಗೆ ದಾರಿಕೊಡುವ ಮರೆವು. ಒಂದೇ ದಾರಿ ನನಗೇಕೆ, ಇರಲಿ ನೂರು ತಿರುವು, ಪ್ರತಿ ದಾರಿಯ ಕೊನೆಗೆ, ಸಿಕ್ಕ ಸೊಗಸು ಹೊಸವು. ಒಳಗೆ ಇರುವ ನನ್ನ ದಣಿವ, ಮರೆಸೊ ನನ್ನ ವರವು, ಹೊಚ್ಚಹೊಸದಾಗಿ ಊರ ಕಾಣೆಂದು, ನೆನಪನಳಿಸೊ ಮರೆವು. ಅಪ್ಪಿಕೊಂಡಿರಲಿ ಅನುಘಳಿಗೆ, ಚಳಿಯೇರಿಸೊ ರಾವು, ಜೊತೆಗಿರುವುದು...


  • ಮೂವತ್ತರ ಮುದುಕರು

    ಮುಕುಳಿ ನೋವು ಸುಮ್ನೆ ಕುಂತರೆ, ಕಾಲು ನೋವು ಎದ್ದು ನಿಂತರೆ, ಅರವತ್ತರವರೆಗೆ ಕಾಯೋರು ಯಾರು? ಬಂದು ನೋಡಿ ಇಲ್ಲಿ, ನಾವು ಮೂವತ್ತಕ್ಕೆ ಮುದುಕರು. ಎದ್ದು ಕೆಲಸ ಮಾಡೋರಲ್ಲ, ಹೊಸಿಲ ದಾಟಿ ಹೋಗೋರಲ್ಲ. ಇಡೀ ದಿನ ಕುಂತು ಹೊಟ್ಟೆ ಬಂದೋರು, ಇಲ್ಲಿ ನೋಡಿ, ನಾವು ಮೂವತ್ತಕ್ಕೆ ಮುದುಕರು. ಇರುಳಲ್ಲಿ ನಿದ್ದೆಯಿಲ್ಲ ನಮಗೆ, ಹಗಲೂ ಕಳೆಯೋದಿಲ್ಲ. ಗಂಟೆಗಟ್ಟಲೆ ಕೂತು ಗುಡ್ಡೆ ಹಾಕೋರ್ಯಾರು? ಇಗೋ! ಇಲ್ಲಿ ನೋಡಿ, ನಾವೇ ಮೂವತ್ತರ ಮುದುಕರು. - ಆದರ್ಶ...


  • ಹೃದಯ ಮೆದುವಾಗಲಿ

    ಹೃದಯ ಮೆದುವಾಗಲಿ, ಕಲ್ಲಲ್ಲೂ ಹೂವರಳಿ. ಹಗಲು ಇರುಳು ಮನಸ್ಸು ಹಗುರಾಗಲಿ, ಹೊಸದಾಗಿ ಒಲವ ಹೂವರಳಿ. ದೂರದೂರಕೆ ಪಯಣವೇಕೆ, ಮನದೊಳಕೆ ಬಾ ಮರಳಿ, ಮನಕೆ ನೀರುಣಿಸಿ ಗಿಡ ನೆಡಬೇಕಿದೆ, ಕಂಪು ಹರಡಲಿ, ಕಲ್ಲಲ್ಲೂ ಹೂವರಳಿ. ಮುಗಿಲೆತ್ತರದ ಬೆಟ್ಟವಿರಲಿ, ಹೂಬಳ್ಳಿ ಅದನ ಮೀರಿ ಬೆಳೆಯಲಿ. ಮಳೆ, ಬೇಸಿಗೆ ಏನೇ ಇರಲಿ, ಹೃದಯ ಮೆದುವಾಗಲಿ, ಕಲ್ಲಲ್ಲೂ ಹೂವರಳಿ. - ಆದರ್ಶ


  • ಅತ್ತುಬಿಡು

    ಅತ್ತುಬಿಡಲೇ ಈ ದಿನ, ನನ್ನ ಒಳಗೆ ನಾನು, ಯಾರಿಗೂ ತೋರದೆ ವಿಧಿಯ ಈ ಸಂಚನ್ನು. ಕರಗಿ ಹೋಗಲಿ ನೋವೆಲ್ಲ ನನ್ನೊಳಗೆ, ತೇಲಿಬರುವ ಮುನ್ನ, ಮತ್ತೊಮ್ಮೆ ಮುಗುಳುನಗೆ. ರಾಗವೆಲ್ಲಿ ಈಗ, ಹೊಮ್ಮುತ್ತಿಲ್ಲ ನನ್ನ ಸ್ವರದಲ್ಲಿ, ಕೂಗಲೂ ದನಿಯಿಲ್ಲ, ಹೇಗೆ ನಾ ಅಳಲಿ. ಅತ್ತುಬಿಡಲೇ ನಾನು, ಈ ದಿನ ನನ್ನೊಳಗೆ, ತಲುಪುವ ಮುನ್ನ, ನನ್ನ ನೋವು ಮೌನದ ಬಳಿಗೆ. ಮರುದನಿಯೂ ಸೋತಿದೆ ನನ್ನನ್ನು ತಲುಪಲು, ಸಂತೈಸಲು, ನನ್ನ ಬಿಗಿದಪ್ಪಿಕೊಳ್ಳಲು. ಅತ್ತುಬಿಡಲೇ ನಾನು, ಈ...


  • ಹಣೆಬರಹ

    ಬರುವ ಲಕ್ಷ್ಮಿಯ ಬೇಡವೆಂದು, ಹೇಳಲಿ ನಾನು ಏಕೆ ಇಂದು, ಭಾಗ್ಯವು ಬರುವುದು ಮಳೆಯಂತೆ, ಎಲ್ಲವೂ ಹಣೆಯ ಬರಹವಂತೆ. ಅಳುವು ನಗವು ಇಲ್ಲಿ ಹಲವು, ಹತ್ತಿರ ಇದ್ದರೂ ಸಿಗದು ಸಾವು, ಅನುಕ್ಷಣವೂ ಇಲ್ಲಿ ಅನುಭವವಂತೆ, ಎಲ್ಲವೂ ಹಣೆಯ ಬರಹವಂತೆ. ದಿಕ್ಕು ಯಾವುದು ಗುರಿಯ ಕಡೆ, ನಿತ್ಯ ಇಲ್ಲಿ ನೂರು ತಡೆ, ಜೀವನ ತೇಲುವುದು ಗಾಳಿ ಮೇಲಂತೆ, ಎಲ್ಲವೂ ಹಣೆಯ ಬರಹವಂತೆ. - ಆದರ್ಶ