• ನಗು ಮುಖ

    ನಗುತಿರುವ ಮೊಗದ ಹಿಂದೆ ಸಾಗುತಿರುವುದು ನೋವಿನ ಮೆರವಣಿಗೆ ವಿಧಿಯೇಕೆ ನಿಲ್ಲಿಸದೆ ನೀನು ನಡೆಸುತಿರುವೆ ನಿನ್ನ ಬರವಣಿಗೆ ಊಹಿಸಲೇ ಆಗದು ನಮಗೆ ಮುಂದಿನ ಹೆಜ್ಜೆಯ ಸಪ್ಪಳವ ಸ್ಬಲ್ಪವಾದರೂ ತಗ್ಗಿಸು ನಮ್ಮ ಮೇಲೆ ಆಗುವ ನಿನ್ನ ಕ್ರೂರ ಪ್ರಭಾವ ಆಗಾಗ ಬಂದು ಕಿರುಕುಳ ಕೊಟ್ಟು ಹೋಗುತ್ತಿದ್ದರೂ ನೋವು ನಗುತಲೇ ನೋವುಗಳ ಮರೆಸುತಿಹುದು ನಮ್ಮ ಮೊಗವು, ಈ ನಮ್ಮ ಮೊಗವು! – ಆದರ್ಶ


  • ಬದಲಾಗುತ್ತಿರುವ ಜಗತ್ತಿನಲ್ಲಿ

    ಕೆಲವು ವರ್ಷಗಳ ಹಿಂದೆ ಹೀಗಿರಲಿಲ್ಲ.. ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯ ನಿಜ ಆದರೆ, ಈ ಹಂತಕ್ಕಲ್ಲ. ಮನುಷ್ಯ ಸಂಘಜೀವಿ, ಒಂಟಿಯಾಗಿ ಬಾಳುವುದು ಕಷ್ಟಸಾಧ್ಯ ಎಂಬ ಮಾತೊಂದಿತ್ತು. ಆ ಮಾತಿಗೆ ವಾಸ್ತವದಲ್ಲಿ ಅರ್ಥವಿಲ್ಲದಂತಾಗಿದೆ. ತಂತ್ರಜ್ಞಾನ ಮುಂದುವರಿದಂತೆಲ್ಲಾ ಸಂಬಂಧಗಳು ಸಡಿಲಾಗಿ ವಸ್ತುಗಳನ್ನು ಅತಿಯಾಗಿ ಪ್ರೀತಿಸಿ, ಪ್ರೀತಿಸಬೇಕಾದ ವ್ಯಕ್ತಿಯನ್ನು ವಸ್ತುವಿನಹಾಗೆ ಉಪಯೋಗಿಸುವ ಕಾಲಕ್ಕೆ ನಾವೆಲ್ಲ ಸಾಕ್ಷಿಯಾದಂತಿದೆ. ಬಾಲ್ಯದ ಆ ದಿನಗಳು ಕೇವಲ ನೆನಪುಗಳಷ್ಟೆ… ಮುಗ್ಧತೆ, ಅನ್ಯೋನ್ಯತೆ, ಎಲ್ಲರೂ ನಮ್ಮವರೆಂಬ ಭಾವ ಕೇವಲ ನೆನಪಷ್ಟೆ… ಬಾಲ್ಯದ...


  • ಆಕರ್ಷಣೆ

    ಇರುಳನು ತಳ್ಳಲು ಬೆಳಕಿದು ಸೋತಿದೆ ಭುವಿಯನು ತೊರೆಯದೆ ಬಾನಿದೂ ಬಾಗಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಮೋಡವೂ ತಾನು ಕರಗಿ ಇಳಿದು ಬಂದಿದೆ ನಿನ್ನನು ಕಂಡಾಗ! ಮೋಡವು ಈಗ ತೇಲಲು ಮರೆತಿದೆ ಸಮಯವೂ ಚಲಿಸದೆ ಸುತ್ತುಲೂ ನಿಂತಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ ಗಾಳಿಗೆ ಈಗ ಭುವಿಯೇ ಮನೆಯು ನಿನ್ನನು ಸೋಕಿ ನಿಂತಾಗ! ಅರಳುತ ಹೂವು ಅರ್ಪಣೆ ನೀಡಿದೆ ಬೆರಗಲಿ ಬೆಳಗು ಮಂತ್ರವ ಪಠಿಸಿದೆ ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ...


  • ಸಾಮಾನ್ಯ ಕನ್ನಡಿಗ

    ಮಲಗಿದ್ದ ಜನರ ಬಡಿದೇಳಿಸುವನು ಸಾಮಾನ್ಯ ಕನ್ನಡಿಗನು ಛಲವಾದಿ, ಹಠವಾದಿ ಹೊಸ ಲೋಕದ ಪ್ರವಾದಿ ಸಾಮಾನ್ಯ ಕನ್ನಡಿಗನು! ಅನ್ಯರ ಕೈ ಹಿಡಿದು ತನ್ನವರ ಮೇಲೆತ್ತುವನು ಸಾಮಾನ್ಯ ಕನ್ನಡಿಗನು ಅನುರಾಗಿ ಅಣಿಯಾಗಿ ಕ್ರಾಂತಿಗೆ ಎಲುಬಾಗುವನು ಸಾಮಾನ್ಯ ಕನ್ನಡಿಗನು! ಪ್ರತಿ ಮನೆಯಲ್ಲಿ ಪ್ರತಿ ಮನಸ್ಸಲ್ಲಿ ಉದಯವಾಗುವನು ಶಿವನು, ಮತ್ತೊಮ್ಮೆ ಎಲ್ಲೆಡೆ ಬಾರಿಸುವ ಕನ್ನಡ ಡಿಂಡಿಮವ ಸಾಮಾನ್ಯ ಕನ್ನಡಿಗನು! - ಆದರ್ಶ


  • ಮನಸ್ಸೇ ನೀ ನನ್ನ ಹಿತಶತ್ರು

    ನನ್ನೊಳಗೇ ಅವಿತಿಹ ನನ್ನನ್ನೇ ಹಿಡಿದಿಹ ನನ್ನ ಮನಸ್ಸೇ ನೀ ನನ್ನ ಹಿತಶತ್ರು ನನ್ನೆಲ್ಲ ಆಸೆಗೆ ನನ್ನೆಲ್ಲ ನಿರಾಸಗೆ ಇಂದು ನೀನಾಗಿಹೆ ಕತೃ, ಮುಗಿಲೆತ್ತರವ ತೋರುವೆ ಕಡಲಾಳಕೆ ನೂಕುವೆ ಹೀಗಿರುವ ನೀ ನನಗೆ ಏಕಾಂತದಲಿ ವರವೆ? ನೀ ಅಳಿಸುವೆ ನೀ ನಗಿಸುವೆ ನಿನ್ನ ನಂಬುವುದಾದರು ಹೇಗೆ ನನ್ನ ಹೀಗೆ ಆಲುಗಾಡಿಸುವ ನೀ ಇರಬೇಕೆ ನನ್ನ ಒಳಗೆ? ಮನಸ್ಸೇ ನೀ ನನ್ನ ಹಿತಶತ್ರು ನಿನ್ನ ಗೆಳೆತನ ನನಗೆ ಸಾಕು ನೀನಾಗೆ ದಯಮಾಡಿ ಈ...