ಇರುಳನು ತಳ್ಳಲು ಬೆಳಕಿದು ಸೋತಿದೆ
ಭುವಿಯನು ತೊರೆಯದೆ ಬಾನಿದೂ ಬಾಗಿದೆ
ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ
ಮೋಡವೂ ತಾನು ಕರಗಿ ಇಳಿದು ಬಂದಿದೆ ನಿನ್ನನು ಕಂಡಾಗ!

ಮೋಡವು ಈಗ ತೇಲಲು ಮರೆತಿದೆ
ಸಮಯವೂ ಚಲಿಸದೆ ಸುತ್ತುಲೂ ನಿಂತಿದೆ
ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ
ಗಾಳಿಗೆ ಈಗ ಭುವಿಯೇ ಮನೆಯು ನಿನ್ನನು ಸೋಕಿ ನಿಂತಾಗ!

ಅರಳುತ ಹೂವು ಅರ್ಪಣೆ ನೀಡಿದೆ
ಬೆರಗಲಿ ಬೆಳಗು ಮಂತ್ರವ ಪಠಿಸಿದೆ
ಆಕರ್ಷಣೆ ಏನಿದ್ದರೂ ನಿನ್ನದೇ ಈಗೀಗ
ದಿನಗಳಿಗೂ ಉರುಳುವ ಮನವೇ ಇಲ್ಲ ನಿನ್ನ ಜೊತೆ ಇದ್ದಾಗ!


- ಆದರ್ಶ