ನನ್ನೊಳಗೇ ಅವಿತಿಹ ನನ್ನನ್ನೇ ಹಿಡಿದಿಹ ನನ್ನ ಮನಸ್ಸೇ ನೀ ನನ್ನ ಹಿತಶತ್ರು
ನನ್ನೆಲ್ಲ ಆಸೆಗೆ ನನ್ನೆಲ್ಲ ನಿರಾಸಗೆ ಇಂದು ನೀನಾಗಿಹೆ ಕತೃ,
ಮುಗಿಲೆತ್ತರವ ತೋರುವೆ ಕಡಲಾಳಕೆ ನೂಕುವೆ
ಹೀಗಿರುವ ನೀ ನನಗೆ ಏಕಾಂತದಲಿ ವರವೆ?
ನೀ ಅಳಿಸುವೆ ನೀ ನಗಿಸುವೆ ನಿನ್ನ ನಂಬುವುದಾದರು ಹೇಗೆ
ನನ್ನ ಹೀಗೆ ಆಲುಗಾಡಿಸುವ ನೀ ಇರಬೇಕೆ ನನ್ನ ಒಳಗೆ?
ಮನಸ್ಸೇ ನೀ ನನ್ನ ಹಿತಶತ್ರು ನಿನ್ನ ಗೆಳೆತನ ನನಗೆ ಸಾಕು
ನೀನಾಗೆ ದಯಮಾಡಿ ಈ ಬಂಧಕೆ ಹಾಲು-ತುಪ್ಪವ ಹಾಕು!

- ಆದರ್ಶ