ಮಲಗಿದ್ದ ಜನರ ಬಡಿದೇಳಿಸುವನು ಸಾಮಾನ್ಯ ಕನ್ನಡಿಗನು
ಛಲವಾದಿ, ಹಠವಾದಿ ಹೊಸ ಲೋಕದ ಪ್ರವಾದಿ ಸಾಮಾನ್ಯ ಕನ್ನಡಿಗನು!

ಅನ್ಯರ ಕೈ ಹಿಡಿದು ತನ್ನವರ ಮೇಲೆತ್ತುವನು ಸಾಮಾನ್ಯ ಕನ್ನಡಿಗನು
ಅನುರಾಗಿ ಅಣಿಯಾಗಿ ಕ್ರಾಂತಿಗೆ ಎಲುಬಾಗುವನು ಸಾಮಾನ್ಯ ಕನ್ನಡಿಗನು!

ಪ್ರತಿ ಮನೆಯಲ್ಲಿ ಪ್ರತಿ ಮನಸ್ಸಲ್ಲಿ ಉದಯವಾಗುವನು ಶಿವನು,
ಮತ್ತೊಮ್ಮೆ ಎಲ್ಲೆಡೆ ಬಾರಿಸುವ ಕನ್ನಡ ಡಿಂಡಿಮವ ಸಾಮಾನ್ಯ ಕನ್ನಡಿಗನು!

- ಆದರ್ಶ