ಕೆಲವು ವರ್ಷಗಳ ಹಿಂದೆ ಹೀಗಿರಲಿಲ್ಲ..

ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾವಣೆ ಅನಿವಾರ್ಯ ನಿಜ ಆದರೆ, ಈ ಹಂತಕ್ಕಲ್ಲ. ಮನುಷ್ಯ ಸಂಘಜೀವಿ, ಒಂಟಿಯಾಗಿ ಬಾಳುವುದು ಕಷ್ಟಸಾಧ್ಯ ಎಂಬ ಮಾತೊಂದಿತ್ತು. ಆ ಮಾತಿಗೆ ವಾಸ್ತವದಲ್ಲಿ ಅರ್ಥವಿಲ್ಲದಂತಾಗಿದೆ. ತಂತ್ರಜ್ಞಾನ ಮುಂದುವರಿದಂತೆಲ್ಲಾ ಸಂಬಂಧಗಳು ಸಡಿಲಾಗಿ ವಸ್ತುಗಳನ್ನು ಅತಿಯಾಗಿ ಪ್ರೀತಿಸಿ, ಪ್ರೀತಿಸಬೇಕಾದ ವ್ಯಕ್ತಿಯನ್ನು ವಸ್ತುವಿನಹಾಗೆ ಉಪಯೋಗಿಸುವ ಕಾಲಕ್ಕೆ ನಾವೆಲ್ಲ ಸಾಕ್ಷಿಯಾದಂತಿದೆ. ಬಾಲ್ಯದ ಆ ದಿನಗಳು ಕೇವಲ ನೆನಪುಗಳಷ್ಟೆ… ಮುಗ್ಧತೆ, ಅನ್ಯೋನ್ಯತೆ, ಎಲ್ಲರೂ ನಮ್ಮವರೆಂಬ ಭಾವ ಕೇವಲ ನೆನಪಷ್ಟೆ…

ಬಾಲ್ಯದ ನೆನಪುಗಳು ಕಾಡಿವೆ ನನ್ನ ನೆನಪಿಸುತ ನನ್ನೊಳಗಿರುವ ಮಗುವ ಹೋಗಬಯಸಿದೆ ಮನವು ಅಂದು ಬೇಡವಾಗಿದ್ದ ಶಾಲೆಗೆ ಇಂದು ಕಾಲಗತಿಸಿದೆ ಎಲ್ಲ ಹೊಸತಾಗಿದೆ ಮತ್ತೆ ಜೀವಸಾಗಿದೆ ತಾ ಹೇಳುತ, ಕಳೆದು ಹೋದ ಕಾಲ ಮತ್ತೆಂದೂ ಸಿಗದೆಂದು

– ಸಿ ಎಸ್ ಎಂ