ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಸಂಲಯನ ಮತ್ತು ವಿದಳನ
ಸಂಲಯನ ಮತ್ತು ವಿದಳನ ಕೇವಲ ಜೀವಿಗಳ ನಡುವೆ ಅಲ್ಲದೆ, ಆಕಾಶ ಕಾಯಗಳಿಂದ ಹಿಡಿದು ಭೂಮಿಯ ಮೇಲಿನ ಮೂಲ ಧಾತುಗಳಲ್ಲೂ ಕಾಣಬಹುದು. ಇವುಗಳು ನಮಗೆ ‘ಪರಮಾಣು ಸಂಲಯನ’ ಮತ್ತು ‘ಪರಮಾಣು ವಿದಳನ’ ಕ್ರಿಯೆಗಳ ರೂಪದಲ್ಲಿ ಸಿಗುತ್ತವೆ. ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬಂದು, ಅತೀ ಜವದಲ್ಲಿ ಅಪ್ಪಳಿಸಿದಾಗ ಹೊಸ ಪರಮಾಣು ಬೀಜವನ್ನು ಸೃಷ್ಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಫೋಟಾನ್) ಆಗಿ ಪರಿವರ್ತನೆಯಾಗುತ್ತದೆ,...
-
ನನ್ನ ಶೃತಿಯ ಶಾರದೆ
ಮನಸ್ಸ ತೊರೆದು ಹೋದಳಿಂದು ನನ್ನ ಶೃತಿಯ ಶಾರದೆ, ನನದೇ ಕೈಯ್ಯ ಹಿಡಿತದಿಂದ ಶಾಂತಿ ಹಾರಿತು ಮರಳದೆ. ಏಕೋ ಸಾಗಿದೆ ನನ್ನ ಪಯಣ ಇನ್ನೂ ಈಗ ನಿಲ್ಲದೆ, ಹೃದಯ ರಾಗದಿ ಕಾಣುತಿಲ್ಲ ಈಗ ನನ್ನ ಶೃತಿಯ ಶಾರದೆ. ರಾಗ - ತಾಳ - ಪದ ಸೇರಬೇಕು ಮೂಡಲು ಸುಂದರ ಹಾಡೊಂದು, ಮೂರಲಿ ಯಾವೊಂದು ಇರದೆ ಹಾಡಲಿ ಸೊಗಸೇ ಇರದು. ಉಳಿಯಬಾರದೆ ದೂರ ಹೋಗದೆ, ಓ ನನ್ನ ಶೃತಿಯ ಶಾರದೆ; ಬಾಳ ಹಾಡಲಿ...
-
ನಾವಿಬ್ಬರು
ನಾನು ಗಟ್ಟಿ, ನೀನು ಮೆದು ಒಟ್ಟಿಗೆ ಬದುಕಲು ಹದವಾದ ಜೀವನ ನಮ್ಮದು, ನೀನು ಹೂವು, ನಾನು ಕಲ್ಲು ಆದರು ಏಕೋ ಬೆಳಿಯಿತು ಬಂಧ ನಮ್ಮ ನಡುವಲ್ಲು. ನಾನು ಬೆಟ್ಟ, ನೀನು ಗಾಳಿ, ಒಬ್ಬರು ಸರಿಯುವವರೆಗೆ ಇನ್ನೊಬ್ಬರು ಇರಬೇಕು ತಾಳಿ. ನಾನು ಹಾಲು, ನೀನು ಜೇನು, ಬೆರೆಯದಿದ್ದರೆ ನಾವು ಈ ಬಾಳಲ್ಲಿ ಉಳಿಯುವುದಾದರೂ ಏನು? ನಾನು ಗಟ್ಟಿ, ನೀನು ಮೃದು, ಒಟ್ಟಿಗೆ ಇರಲು ಹಿತವಾದ ಜೋಡಿ ನಮ್ಮದು. ನಿನ್ನ ಮಾತು, ನನ್ನ...
-
ಪ್ರಶ್ನೆಗಳು
ಆ ಎರಡು ಬಸ್ಸುಗಳು ಎದುರು ಬದುರು ಹೋಗುವಾಗ ಒಂದಕ್ಕೊಂದು ಹಾರನ್ ಶಬ್ದದಲ್ಲೇ ಮಾತಾಡಿಕೊಂಡವು. ಹೊಟ್ಟೆಗೆ ಡೀಸೆಲ್ ಹಾಕ್ಕೊಂಡಾ ಅಂತ ಇದು ಕೇಳಿರಬೇಕು. ಹೊಗೆ ಬಿಡೋದು ಕಡಿಮೆ ಮಾಡು, ಜೀವಕ್ಕೆ ಒಳ್ಳೇದಲ್ಲ ಅಂತ ಇದೂ ಹೇಳಿರಬೇಕು. ಮಾತುಗಳೇ ಅರ್ಥ ಕಳ್ಕೊಂಡಿರುವಾಗ ಬರೀ ಶಬ್ದಕ್ಕೆ, ಮೌನಕ್ಕೆ ಬೆಲೆ ಎಲ್ಲಿದೆ? ಒಟ್ಟಿನಲ್ಲಿ ಆ ಎರಡೂ ಬಸ್ಸಿನ ಡ್ರೈವರ್ಗಳು ಮಾತ್ರ ಮುಗುಳ್ನಕ್ಕು ಹುಬ್ಬು ಹಾರಿಸಿಕೊಂಡಿದ್ದರು. ನಿಜವಾಗಲೂ ಆ ಬಸ್ಸುಗಳು ಮಾತಾಡಿಕೊಂಡಿದ್ದವ? ಮೊದಲೇ ಗಾಜಿನ ಮೇಲೆ ಬಿದ್ದು...
-
ಕರೆಯೋಲೆ
ಹದವಾದ ಜೀವನದಲ್ಲಿ ಮುದ ನೀಡುವ ಬಂಧನಕೆ, ಮದುವೆ ಜೀವನವೇ ಇನ್ನು ಜೋಡಿ ಮನದ ಹರಕೆ! ನಿಮ್ಮ ಆಗಮನವೇ ಚಪ್ಪರ, ಶುಭ ಹರಕೆಯೇ ಮಂಟಪ, ನಿಮ್ಮ ಜೊತೆಯೇ ಸಾಗಬೇಕು ನಮ್ಮ ಮದುವೆಯ ಸಡಗರ! ನಿಮ್ಮ ನಡುವೆಯೇ ಶುರುವಾಗಲಿ ನಮ್ಮ ಹೊಸ ಪಯಣ ಆ ಶುಭ ದಿನಕೆ ಬಯಸಿಹೆವು ನಿಮ್ಮಯ ಆಗಮನ! - ಆದರ್ಶ