ಮರಳಿ ಮಣ್ಣಿನೆಡೆಗೆ ಪಯಣವು ಸಾಗಿದೆ, ಬದುಕಿನ ಎಲ್ಲ ಹಂತಗಳನ್ನು ದಾಟುತ.
ಮರಳಿ ಮಣ್ಣಿನೆಡೆಗೆ ಪಯಣವು ಸಾಗುತಿದೆ ಬದುಕೇ ಅಂಬೆಗಾಲಿಡುತ!

ಮಣ್ಣಿಂದಲೇ ಜನನ, ಮಣ್ಣಿಂದಲೇ ಎಲ್ಲ ಜೀವಗಳ ಚಲನ.
ಮಣ್ಣಿಂದಲೇ ಈ ಲೋಕದ ಎಲ್ಲ ಜೀವಿಗಳಲಿ ಚಿಮ್ಮುತಿದೆ ಜೀವನ.

ಮರಳಿ ಮಣ್ಣಿಗೆ ಪಯಣ ಸಾಗಿದೆ ಎಲ್ಲ ಬಂಧಗಳ ತೊರೆದು,
ಮರಳಿ ಮಣ್ಣಿಗೆ ಪಯಣ ಸಾಗಿದೆ ಎಲ್ಲ ಋಣಗಳು ಮುಗಿದು...!

- ಆದರ್ಶ