ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ,
ಎಲ್ಲೇ ಹೋದರೂ, ಯಾರನ್ನೇ ಕಂಡರು, ಹಿಂದೆಂದೂ ಕಂಡಿರಲಿಲ್ಲ ಇಂಥಾದ್ದೊಂದು ಧಾಟಿ.
ಅರಳಿದ ಕಣ್ಣಿಗೆ ಕನ್ನಡಿ ಅದು, ಅವಳ ಮನದ ಮುನ್ನುಡಿ,
ಯಾವ ಭಾಷೆಯ ಯಾವ ಪದವು ವಿವರಿಸಲಾರದು ಅವಳ ನಗುವ ನುಡಿ.

ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ,
ಎಲ್ಲೂ ಕಾಣದ, ಎಂದೂ ಕೇಳದ ಅವಳ ನಗುವು ಬಹಳ ಚೂಟಿ.
ಸ್ಪಟಿಕದ ಹೊಳಪು, ಮರಳ ನುಣುಪು ತುಂಬಿದಂತ ಆ ನಗು,
ಪ್ರತಿ ಬಾರಿ ಕಂಡಾಗಲೂ ಬೆರಗಾಗುವುದು ಮನವು ಕಂಡಂತೆ ಯಾವುದೋ ಸುಂದರ ಸೊಬಗು.

ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ,
ಯಾರು ಹೇಗೇ ನಕ್ಕರು, ಯಾರೂ ಹೇಗೇ ನಲಿದರೂ,
ಸಮನಾಗಿ ನಿಲ್ಲಲಾಗದಂಥದ್ದು, ಅದರ ಧಾಟಿ.

- ಆದರ್ಶ