ಸ್ನೇಹಕೆ ಸುಂದರ ನೆನಪುಗಳ ತಂದಿರುವೆ, ಕಾಣದ ಯಾವುದೋ ಊರಿಂದ.
ಬಾಳಿಗೆ ಹೊಸ ರೂಪವ ನೀಡಿರುವೆ ನಿಷ್ಕಲ್ಮಶವಾದ ನಿನ್ನ ಸ್ನೇಹದಿಂದ.
ಜೀವನದ ಪ್ರತಿ ಹಂತದಲಿ ನಾನಿರುವೆ, ಭವಿಷ್ಯದ ಭಯವನು ಬಿಟ್ಟುಬಿಡು,
ಸುಮ್ಮನೆ ಏತಕೆ ಚಿಂತೆಯ ಮಾಡುವೆ, ಕೈ ಹಿಡಿದು ನನ್ನೊಡನೆ ಹೆಜ್ಜೆಯನಿಡು.

ಕಣ್ಣೀರ ಹನಿಯು ಒಂಟಿಯಲ್ಲ, ಮನದಾಳದ ದನಿಯು ಒಂಟಿಯಲ್ಲ,
ನಿನ್ನ ಕಣ್ಣೀರು ಹೊರಬಂದು ಬೀಳುವ ಮುನ್ನ, ನನ್ನ ಅಂಗಯ್ಯ ಆಸರೆಯು ದೊರೆಯುವುದು.
ನಿನ್ನ ಮನದಾಳದ ದನಿಯು ಸೊರಗುವ ಮುನ್ನ, ನನ್ನೆದೆಯ ರಾಗವು ಜೋತೆಗೂಡುವುದು.

- ಆದರ್ಶ