ಮನಸ್ಸಿನ ನೂರು ಕಾರ್ಯವೈಖರಿ
ಎಲ್ಲಕ್ಕೂ ನಮ್ಮ ಹೃದಯವೇ ವೈರಿ

ಹೋದರೆ ಮನಸ್ಸು ನಮ್ಮ ಹಿಡಿತವ ಮೀರಿ,
ಆಗುವವು ನಮಗೆ ನಮ್ಮ ಭಾವನೆಗಳೇ ವೈರಿ.
ಉದರದಲ್ಲೀಗ ನಿಲ್ಲದ ಯೋಚನಾ ಲಹರಿ,
ಭಾವನೆಗಳೇ ನಡೆಸಿವೆ ಈಗ ಮಹಾಯುದ್ಧದ ತಯಾರಿ.

ಮಾಡುವ ಕೆಲಸಕ್ಕೆ ಅಡೆತಡೆ ಸಾವಿರ,
ಮಾಡುವ ಮೊದಲು ಯೋಚನೆಗಳ ಅಬ್ಬರ.
ಹಿಡಿತವೇ ಇಲ್ಲದ ಮನದಲ್ಲಿ ನಮ್ಮ ಯೋಚನೆಗಳೇ ನಮಗೆ ಪ್ರಹರಿ,
ಎಲ್ಲವೂ ನಮ್ಮ ಭಾವನೆಗಳ ಕಾರ್ಯವೈಖರಿ!

ಮನಸ್ಸಿಗೆ ಎಂದಿಗೂ ನೂರಾರು ದಾರಿ,
ಎಲ್ಲಕ್ಕೂ ಎಂದಿಗೂ ನಮ್ಮ ಭಾವನೆಗಳೇ ವೈರಿ.

- ಆದರ್ಶ