• ನಾವಿಬ್ಬರು

  ನಾನು ಗಟ್ಟಿ, ನೀನು ಮೆದು ಒಟ್ಟಿಗೆ ಬದುಕಲು ಹದವಾದ ಜೀವನ ನಮ್ಮದು, ನೀನು ಹೂವು, ನಾನು ಕಲ್ಲು ಆದರು ಏಕೋ ಬೆಳಿಯಿತು ಬಂಧ ನಮ್ಮ ನಡುವಲ್ಲು. ನಾನು ಬೆಟ್ಟ, ನೀನು ಗಾಳಿ, ಒಬ್ಬರು ಸರಿಯುವವರೆಗೆ ಇನ್ನೊಬ್ಬರು ಇರಬೇಕು ತಾಳಿ. ನಾನು ಹಾಲು, ನೀನು ಜೇನು, ಬೆರೆಯದಿದ್ದರೆ ನಾವು ಈ ಬಾಳಲ್ಲಿ ಉಳಿಯುವುದಾದರೂ ಏನು? ನಾನು ಗಟ್ಟಿ, ನೀನು ಮೃದು, ಒಟ್ಟಿಗೆ ಇರಲು ಹಿತವಾದ ಜೋಡಿ ನಮ್ಮದು. ನಿನ್ನ ಮಾತು, ನನ್ನ...


 • ಪ್ರಶ್ನೆಗಳು

  ಆ ಎರಡು ಬಸ್ಸುಗಳು ಎದುರು ಬದುರು ಹೋಗುವಾಗ ಒಂದಕ್ಕೊಂದು ಹಾರನ್ ಶಬ್ದದಲ್ಲೇ ಮಾತಾಡಿಕೊಂಡವು. ಹೊಟ್ಟೆಗೆ ಡೀಸೆಲ್ ಹಾಕ್ಕೊಂಡಾ ಅಂತ ಇದು ಕೇಳಿರಬೇಕು. ಹೊಗೆ ಬಿಡೋದು ಕಡಿಮೆ ಮಾಡು, ಜೀವಕ್ಕೆ ಒಳ್ಳೇದಲ್ಲ ಅಂತ ಇದೂ ಹೇಳಿರಬೇಕು. ಮಾತುಗಳೇ ಅರ್ಥ ಕಳ್ಕೊಂಡಿರುವಾಗ ಬರೀ ಶಬ್ದಕ್ಕೆ, ಮೌನಕ್ಕೆ ಬೆಲೆ ಎಲ್ಲಿದೆ? ಒಟ್ಟಿನಲ್ಲಿ ಆ ಎರಡೂ ಬಸ್ಸಿನ ಡ್ರೈವರ್ಗಳು ಮಾತ್ರ ಮುಗುಳ್ನಕ್ಕು ಹುಬ್ಬು ಹಾರಿಸಿಕೊಂಡಿದ್ದರು. ನಿಜವಾಗಲೂ ಆ ಬಸ್ಸುಗಳು ಮಾತಾಡಿಕೊಂಡಿದ್ದವ? ಮೊದಲೇ ಗಾಜಿನ ಮೇಲೆ ಬಿದ್ದು...


 • ಕರೆಯೋಲೆ

  ಹದವಾದ ಜೀವನದಲ್ಲಿ ಮುದ ನೀಡುವ ಬಂಧನಕೆ, ಮದುವೆ ಜೀವನವೇ ಇನ್ನು ಜೋಡಿ ಮನದ ಹರಕೆ! ನಿಮ್ಮ ಆಗಮನವೇ ಚಪ್ಪರ, ಶುಭ ಹರಕೆಯೇ ಮಂಟಪ, ನಿಮ್ಮ ಜೊತೆಯೇ ಸಾಗಬೇಕು ನಮ್ಮ ಮದುವೆಯ ಸಡಗರ! ನಿಮ್ಮ ನಡುವೆಯೇ ಶುರುವಾಗಲಿ ನಮ್ಮ ಹೊಸ ಪಯಣ ಆ ಶುಭ ದಿನಕೆ ಬಯಸಿಹೆವು ನಿಮ್ಮಯ ಆಗಮನ! - ಆದರ್ಶ


 • ಹಕ್ಕಿಗಳು

  ಬೆನ್ನು ಕೊಟ್ಟು ತಿರುಗಿ ಕುಳಿತ ಹಕ್ಕಿಗಳು ಈಗ ಅಲೆಮಾರಿ, ಮನಸ್ಸಿನ ಆಟದಲ್ಲಿ ಎರಡೂ ಸಿಲುಕಿವೆ ಎಲ್ಲವ ತಿಳಿದೂ ಯಾಮಾರಿ ಅಂಟಿಕೊಂಡ ಬೆನ್ನಿನಲಿ ಬರೆದಿವೆ ತುಂಬಿ ಬಂದ ಮಾತುಗಳ, ತಿರುಗಿ ಓದದೆ ಮುಖಪುಟವನು, ಬರಿ ನೀಲಾಕಾಶವೇ ತುಂಬಿದೆ ಕಂಗಳ. ಒಂದೇ ಎತ್ತರದಿ ಹಾರಲು ಬಾರದೆ ಕಾಣುತಿದೆ ಶೂನ್ಯವು ಎರಡರ ನಡುವಲಿ, ಒಂದೇ ಬಾರಿಗೆ ರೆಕ್ಕೆಯ ಬಡಿಯದೆ ಉಳಿದವು ಎರಡೂ ಅಂತರದಲಿ. ಬೆನ್ನು ಮಾಡಿ ಕುಳಿತ ಹಕ್ಕಿಗಳು ಈಗ ಒಂಥರಾ ಅಲೆಮಾರಿ, ಸಮರಸವಿರದೆ...


 • ಗುಟ್ಟು

  ಎಲ್ಲರಿಂದ ಜೋಪಾನವಾಗಿ ಬಚ್ಚಿಟ್ಟ ಗುಟ್ಟು, ಇರುವುದಾದರೂ ಹೇಗೆ ನಾನು ನಿನ್ನನು ಕೊಟ್ಟು? ಹಳೆಯ ಪೋಲಿ ಕನಸೆಲ್ಲ ಹಿತ್ತಲಲ್ಲೇ ಬಿಟ್ಟು, ಹಿಡಿದಿರುವೆ ಬರಿಯ ನಿನ್ನ, ಸಮಯವ ಬದಿಗಿಟ್ಟು! ಜಾತ್ರೆಯಲಿ ಕಿರುಚಿದರೂ ಕೇಳದ ಮಾತಿಗೆ ಬಂದಂತಿದೆ ಈಗ ಮಾರ್ದನಿಯ ಮುತ್ತಿಗೆ, ನಡುರಾತ್ರಿ ಸುತ್ತಲೂ ಯಾರೂ ಇರದ ಹೊತ್ತಿಗೆ ಗಾಳಿಯೇ ಮೌನವಾಗಿದೆ ನೀ ಹೇಳುವ ಗುಟ್ಟಿಗೆ! ಯಾರಿಗೂ ಹೇಳದೆ ಬಂದ ಪ್ರೀತಿಗೆ ಗುಟ್ಟಾಗಿ ನೀಡಿರುವೆ ಮುದ್ದಾದ ದೇಣಿಗೆ, ನನಗೂ ಸಿಗದಂತೆ ಉಳಿದಿರುವ ಗುಟ್ಟು ನೀನಾಗಿರು...