• ಆ ನಗು

  ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ, ಎಲ್ಲೇ ಹೋದರೂ, ಯಾರನ್ನೇ ಕಂಡರು, ಹಿಂದೆಂದೂ ಕಂಡಿರಲಿಲ್ಲ ಇಂಥಾದ್ದೊಂದು ಧಾಟಿ. ಅರಳಿದ ಕಣ್ಣಿಗೆ ಕನ್ನಡಿ ಅದು, ಅವಳ ಮನದ ಮುನ್ನುಡಿ, ಯಾವ ಭಾಷೆಯ ಯಾವ ಪದವು ವಿವರಿಸಲಾರದು ಅವಳ ನಗುವ ನುಡಿ. ಆ ನಗು, ಅದೇ ನಗು, ಅದಕ್ಕೆ ಯಾವಾಗಲೂ ಅದೇ ಸಾಟಿ, ಎಲ್ಲೂ ಕಾಣದ, ಎಂದೂ ಕೇಳದ ಅವಳ ನಗುವು ಬಹಳ ಚೂಟಿ. ಸ್ಪಟಿಕದ ಹೊಳಪು, ಮರಳ...


 • ಬಲಿ

  ನನ್ನ ಸ್ವಾರ್ಥಕ್ಕೆ ಅವಳ ಬಲಿ ಪಡೆದು ಅವಳ ಜೊತೆಗೆ ಹೇಗೆ ಇರಲಿ! ಆದರೂ ಅವಳು ನನ್ನ ಮಡದಿ, ಅವಳ ಬಲಿಯ ಮೇಲೆ ನಡೆವ ಜೀವನ ತರುವುದೇ ಮನಕೆ ನೆಮ್ಮದಿ? ನನ್ನ ಸ್ವಾರ್ಥಕ್ಕೆ ಅವಳ ಬಲಿ, ಪಡೆದು ಅವಳ ಜೊತೆಗೆ ಹೇಗೆ ಇರಲಿ! ತೇಲೋ ಮೇಘ ಅವಳು, ತಿರುಗೋ ಭೂಮಿ ನಾನು, ಹೇಗೆ ತಾನೆ ಆಗುವುದು ಮಿಲನ? ಉರಿಯ ಬೆಂಕಿ ನಾನು, ತಣಿಸೋ ನೀರು ಅವಳು, ನಡೆಯದಿರದೆ ನಮ್ಮ ನಡುವೆ ಸಣ್ಣದೊಂದು...


 • ವೈರಿ

  ಮನಸ್ಸಿನ ನೂರು ಕಾರ್ಯವೈಖರಿ ಎಲ್ಲಕ್ಕೂ ನಮ್ಮ ಹೃದಯವೇ ವೈರಿ ಹೋದರೆ ಮನಸ್ಸು ನಮ್ಮ ಹಿಡಿತವ ಮೀರಿ, ಆಗುವವು ನಮಗೆ ನಮ್ಮ ಭಾವನೆಗಳೇ ವೈರಿ. ಉದರದಲ್ಲೀಗ ನಿಲ್ಲದ ಯೋಚನಾ ಲಹರಿ, ಭಾವನೆಗಳೇ ನಡೆಸಿವೆ ಈಗ ಮಹಾಯುದ್ಧದ ತಯಾರಿ. ಮಾಡುವ ಕೆಲಸಕ್ಕೆ ಅಡೆತಡೆ ಸಾವಿರ, ಮಾಡುವ ಮೊದಲು ಯೋಚನೆಗಳ ಅಬ್ಬರ. ಹಿಡಿತವೇ ಇಲ್ಲದ ಮನದಲ್ಲಿ ನಮ್ಮ ಯೋಚನೆಗಳೇ ನಮಗೆ ಪ್ರಹರಿ, ಎಲ್ಲವೂ ನಮ್ಮ ಭಾವನೆಗಳ ಕಾರ್ಯವೈಖರಿ! ಮನಸ್ಸಿಗೆ ಎಂದಿಗೂ ನೂರಾರು ದಾರಿ, ಎಲ್ಲಕ್ಕೂ...


 • ಗೆಳೆಯ

  ಸ್ನೇಹಕೆ ಸುಂದರ ನೆನಪುಗಳ ತಂದಿರುವೆ, ಕಾಣದ ಯಾವುದೋ ಊರಿಂದ. ಬಾಳಿಗೆ ಹೊಸ ರೂಪವ ನೀಡಿರುವೆ ನಿಷ್ಕಲ್ಮಶವಾದ ನಿನ್ನ ಸ್ನೇಹದಿಂದ. ಜೀವನದ ಪ್ರತಿ ಹಂತದಲಿ ನಾನಿರುವೆ, ಭವಿಷ್ಯದ ಭಯವನು ಬಿಟ್ಟುಬಿಡು, ಸುಮ್ಮನೆ ಏತಕೆ ಚಿಂತೆಯ ಮಾಡುವೆ, ಕೈ ಹಿಡಿದು ನನ್ನೊಡನೆ ಹೆಜ್ಜೆಯನಿಡು. ಕಣ್ಣೀರ ಹನಿಯು ಒಂಟಿಯಲ್ಲ, ಮನದಾಳದ ದನಿಯು ಒಂಟಿಯಲ್ಲ, ನಿನ್ನ ಕಣ್ಣೀರು ಹೊರಬಂದು ಬೀಳುವ ಮುನ್ನ, ನನ್ನ ಅಂಗಯ್ಯ ಆಸರೆಯು ದೊರೆಯುವುದು. ನಿನ್ನ ಮನದಾಳದ ದನಿಯು ಸೊರಗುವ ಮುನ್ನ, ನನ್ನೆದೆಯ...


 • ನಾ ಯಾರವ?

  ಯಾರವನು ನಾನು ಯಾರವನು? ಎಲ್ಲರೊಡನೆ ಇದ್ದರೂ ನಾ ಯಾರವನು? ಮನದಲ್ಲಿ ಗೊಂದಲ, ನಾ ಯಾರವನು? ಬದುಕಿಂದು ಚಂಚಲ, ನಾ ಯಾರವನು? ಆ ಕಡೆಯೂ ಇಲ್ಲ, ನಾ ಈ ಕಡೆಯೂ ಇಲ್ಲ, ನಡುವಲ್ಲಿ ನಿಂತಿರಲು ಏನೇನು ಇಲ್ಲ. ಯಾರವನು ನಾ ಯಾರವನು? ಯಾರೊಡನೆ ಇರದೇ ನಾ ಎಲ್ಲಿಹೆನು? ಒಂದೆಡೆ ಇದ್ದರೂ ಇನ್ನೊಂದರ ಚಿಂತೆ, ಎಲ್ಲೆಡೆ ಇರಲಾಗದ ಅಸಹಾಯಕನಂತೆ. ಯಾರವನು ನಾ ಯಾರವನು? ಎಲ್ಲಿಯೂ ಇರದ ನಾ ಎಲ್ಲಿಯವನು? - ಆದರ್ಶ