ಯಾರವನು ನಾನು ಯಾರವನು?
ಎಲ್ಲರೊಡನೆ ಇದ್ದರೂ ನಾ ಯಾರವನು?
ಮನದಲ್ಲಿ ಗೊಂದಲ, ನಾ ಯಾರವನು?
ಬದುಕಿಂದು ಚಂಚಲ, ನಾ ಯಾರವನು?

ಆ ಕಡೆಯೂ ಇಲ್ಲ, ನಾ ಈ ಕಡೆಯೂ ಇಲ್ಲ,
ನಡುವಲ್ಲಿ ನಿಂತಿರಲು ಏನೇನು ಇಲ್ಲ.
ಯಾರವನು ನಾ ಯಾರವನು?
ಯಾರೊಡನೆ ಇರದೇ ನಾ ಎಲ್ಲಿಹೆನು?

ಒಂದೆಡೆ ಇದ್ದರೂ ಇನ್ನೊಂದರ ಚಿಂತೆ,
ಎಲ್ಲೆಡೆ ಇರಲಾಗದ ಅಸಹಾಯಕನಂತೆ.
ಯಾರವನು ನಾ ಯಾರವನು?
ಎಲ್ಲಿಯೂ ಇರದ ನಾ ಎಲ್ಲಿಯವನು?

- ಆದರ್ಶ