ಮಾತೇ ಬಾರದೆ ನುಡಿಮುತ್ತು ಸುರಿವಾಗ,
ಕಥೆಯೇ ಇರದೇ ಸ್ವಾರಸ್ಯ ಸಿಗುವಾಗ,
ಅರಿವು ಇರದೇ ಪ್ರೀತಿ ಇರುವಾಗ,
ನಾನೊಂದು ತೀರ, ನೀನೊಂದು ತೀರ!

ಕಲ್ಪನೆ ಇರದೇ ಕನಸೊಂದು ಕಂಡಾಗ,
ಕಾರಣ ಇರದೇ ಭಾವುಕಳಾದಾಗ,
ನನ್ನನ್ನೇ ಮರೆತು ನಿನ್ನನ್ನು ನೆನೆದಾಗ,
ನಾನೊಂದು ತೀರ, ನೀನೊಂದು ತೀರ!

ನಿನ್ನ ನೆನಪಾಗಿ ನಾನು ಕಣ್ಣೀರು ಇಡುವಾಗ,
ನನ್ನ ನೆನಪೇ ಇರದೇ ನೀನಿಂದು ಇರುವಾಗ,
ನಿನ್ನ ದಾರಿ ಕಾಣುತ ನಾ ಕಲ್ಲಂತೆ ನಿಂತಾಗ,
ನಾನೊಂದು ತೀರ, ನೀನೊಂದು ತೀರಾ!

- ಆದರ್ಶ