• ದೂರದಿಂದ

    ದೂರದಿಂದ ಚಂದ, ನನ್ನ ನಿನ್ನ ಬಂಧ, ಸಮಯ ನಿಂತು ಬಿಡಲಿ ಇಲ್ಲಿಯೇ, ಹತ್ತಿರ ಬರದಂತೆ ನಮ್ಮಿಬ್ಬರ ಛಾಯೆ. ದೂರದ ಬೆಟ್ಟವೂ ನುಣ್ಣಗೆ ಕಣೆ, ಹತ್ತಿರ ಹೋದಾಗಲೆ ಅದರ ಸ್ವರೂಪ ಬಯಲು, ಮದುವೆ ಬಂಧವೂಂದು ದೊಡ್ಡ ಹೊಣೆ, ಅನುಭವಿಸುವಾಗಲೇ ಇಳಿವುದು ಅದರ ಅಮಲು. ಮೊದಮೊದಲಿಗೆ ಎಲ್ಲರೂ ಒಳ್ಳೆಯವರೇ ನಂತರ ತಿಳಿಯಿತಲ್ಲವ ಎಲ್ಲರ ಆಟ, ಆದರೂ ಒಟ್ಟಿಗಿರುವ ಬಯಕೆ ಯಾಕೆ, ಒಳ್ಳೆಯದಲ್ಲ ಜೊತೆಗಿರುವ ಜನರ ಕೂಟ. ದೂರದಿಂದ ಬೆಂಕಿಯೂ ಚಂದ ಹತ್ತಿರ ಹೋದಾಗಲೇ...


  • ಮಳೆಗಾಲದ ಆರಂಭ

    ಮಳೆಗಾಲದ ಆರಂಭಕ್ಕೆ ಬೆಟ್ಟವು ಬೆಳೆದು ಆಗಸವ ನೋಡ್ತಿತ್ತು, ಮಳೆ ಹನಿಗಳ ಬರಮಾಡಿಕೊಳ್ಳಲು ತಾ ಮುಗಿಲಿಗೆ ನೀಡಿತ್ತು ಮುತ್ತು. ತಣ್ಣನೆಯ ಗಾಳಿ ತೆಂಕಣದಿಂದ ಬಂದಿತ್ತು, ಸುಯ್ಯನೆ ಸುತ್ತಿ ಬೆಟ್ಟವನೆ ಹತ್ತಿ ಹೇಳಿತ್ತು, ಇನ್ಮುಂದೆ ಮಳೆಯು ಬೆಟ್ಟದ ಸ್ವತ್ತು. ಮಣ್ಣ ಗಂಧ ಹೊರಬರುವೆನೆಂದು ಕೈ ಬೀಸಿ ಹೇಳಿತ್ತು, ಮಳೆಯ ಆಗಮನವ ಅರಿತ ಭೂಮಿಯ ಕಣ್ಣೂ ತುಂಬಿತ್ತು, ಮಳೆಗಾಲದ ಆರಂಭಕ್ಕೆ ಈಗ ಕಾಡೆಲ್ಲ ಹಸಿರು, ಕಳೆದ ಯುಗಾದಿಯಿಂದ ಕಾದು ಕುಳಿತಿವೆ ಹೊಚ್ಚ ಹೊಸ ಚಿಗುರು....


  • ನೆನಪಿನಂಗಳದ ಆ ದಿನ

    "ನಾಳೆ ಎಲ್ಲಿ ಸಿಗೋದೆ?", ಪ್ರತಿ ಸಲದಂತೆ ಆ ದಿನದ ಹಿಂದಿನ ದಿವಸ ಫೋನ್ ಮಾಡಿ ಅವಳಿಗೆ ಕೇಳಿದ್ದೆ. "ಪ್ರತಿ ಸಲ ಭೇಟಿ ಆಗೋ ಜಾಗದಲ್ಲೆ ಸಿಗೋಣ, ಯಾಕೋ ಹೊಸ ಜಾಗಗಳನ್ನ ಹುಡುಕಿ ಹೋಗ್ಬೇಕು ಅಂತ ಅನ್ನಿಸ್ತಾ ಇಲ್ಲ ನನಗೆ" ಅಂದಿದ್ಳು. ನಾನು ಪ್ರತಿ ಸಲದ ರೀತಿಯಲ್ಲಿ ಅವಳಿಗೆ ಈ ದಿನವಾದ್ರು ಎಲ್ಲವನ್ನ ಹೇಳಿಬಿಡಬೇಕು ಅಂದ್ಕೊಂಡು, ನಾವು ಸಾಮಾನ್ಯವಾಗಿ ಭೇಟಿಯಾಗೋ ಜಾಗಕ್ಕೆ ಬಂದಿದ್ದೆ. ಯಾವಾಗ್ಲು ಹೇಳಿದ ಸಮಯಕ್ಕೆ ಬಂದು ಬಿಡ್ತಾ ಇದ್ಳು...


  • ಚಲಿಸುವ ರೈಲು ಮತ್ತು ಶ್ರವಣಬೆಳಗೊಳ

    ಜನವರಿ ೨೬ ಗಣರಾಜ್ಯೋತ್ಸವ ದಿನದ ಬೆಳಗ್ಗೆ ೭:೫೦ ಕ್ಕೆ ಸೊಲ್ಲಾಪುರ - ಹಾಸನ ಎಕ್ಸ್ಪ್ರೆಸ್ ರೈಲಿನಲ್ಲಿ ಯಶವಂತಪುರದಿಂದ ಹೋಗುವುದೆಂದು ನಾನು, ಸುಷ್ಮಾ, ಸಿದ್ದು ಶನಿವಾರ ಸಂಜೆ ನಿರ್ಧಾರ ಮಾಡಿದೆವು. ನಾನು ಭಾನುವಾರ ಬೆಳಗ್ಗೆ ೬:೧೫ ಕ್ಕೆ ಬಿಟಿಮ್ ನಿಂದ ಹೊರಡಬೇಕೆಂದುಕೊಂಡರೂ, ಹೊರಡೊ ಅಶ್ಟರಲ್ಲಿ ೬:೪೦ ಆಗಿತ್ತು. ೭ ಗಂಟೆಗೆ ಬನಶಂಕರಿ ಸ್ಟಾಪ್ ನಲ್ಲಿ ಇಳಿದು ಮೆಟ್ರೊ ನಿಲ್ದಾಣಕ್ಕೆ ಅವಸರವಾಗಿ ನಡೆದುಕೊಂಡು ಬಂದು ಪ್ಲಾಟ್ ಫಾರಂ ತಲುಪಿದೆ. ಆದರೆ ಅಷ್ಟರಲ್ಲಾಗಲೇ ರೈಲು...


  • ಕೃತಿ, ನನ್ನವಳು!

    ಕೃತಿ, ನನ್ನವಳ ಹೆಸರು. ಜೀವನದಲ್ಲಿ ಮೊದಲೇ ಲಂಗು ಲಗಾಮು ಇಲ್ಲದೆ, ಹುಚ್ಚು ಹುಚ್ಚಾಗಿ ಆಡ್ತಾ ಇದ್ದ ನಂಗೆ ರೆಕ್ಕೆಯನ್ನ ಕಟ್ಟಿ ಇನ್ನಷ್ಟು ಹುಚ್ಚಾಟಿಕೆಗೆ ಕಾರಣವಾದವಳು ಅವಳು. ಜೀವನದಲ್ಲಿ, ನನ್ನಂಥ ದಾರಿ ತಪ್ಪಿದ ಮಕ್ಕಳನ್ನ ಸರಿ ದಾರಿಗೆ ತರಲೆಂದೆ ಎಷ್ಟೋ ಜನ, ತಂದೆ ತಾಯಿಯರಿಗೆ ಕೊಡೋ ಬಿಟ್ಟಿ ಸಲಹೆಗಳಲ್ಲಿ ಒಂದು, "ನಿಮ್ಮ ಮಗನಿಗೆ ಮೊದಲು ಮದುವೆ ಮಾಡಿಬಿಡಿ" ಅನ್ನೋದು.ಆದ್ರೆ ನಮ್ಮ ಮನೆಯವರೇನಾದ್ರು ಇಂಥ ಸಲಹೆ ತೆಗೆದುಕೊಂಡೇ ನನ್ನ ಮದುವೆ ಮಡಿದ್ದಾಗಿದ್ರೆ, ಈಗ...