• ಬಿಡುಗಡೆ

  ಮತ್ತೆ ಬಿಡುಗಡೆ ನನ್ನಿಂದ ನನಗೆ, ತಂಗಾಳಿ ಬೀಸಿದೆ ಇಂದು ಸುತ್ತಲೂ ಮಳೆಯಾದಂಗೆ. ಹಾರುವುದ ಕಲಿತಂತೆ ಮರಿ ಹಕ್ಕಿ, ಸಂತಸಕೆ ಅಳುತಿದೆ ಮನವು ಬಿಕ್ಕಿಬಿಕ್ಕಿ. ಯಾವುದು ಸತ್ಯ ಯಾವುದು ಮಿತ್ಯ, ತಿಳಿಯದಂತೆ ಹಿಡಿದಿತ್ತು ನನ್ನದೇ ಸಾಂಗತ್ಯ. ನನ್ನಿಂದ ನನಗೆ ಇಂದು ಬಿಡುಗಡೆ, ಸಿಕ್ಕಿದ ಘಳಿಗೆಗೆ ದೂರದ ಪಯಣ ಹೊರಟಿದೆ ನನ್ನ ನಡೆ. ನನ್ನಿಂದ ನಾನೆ ಇಂದು ಹೊರಟಿರುವೆ ದೂರಕೆ, ಬಂಧನದ ಬದುಕಿನ ಹಿನ್ನೋಟ ನನಗಿನ್ನೇಕೆ? ಮತ್ತೊಮ್ಮೆ ನನಗೆ ನನ್ನಿಂದಲೇ ಬಿಡುಗಡೆ, ಹಳೆಯ...


 • ಆ ಬೆಟ್ಟದಲ್ಲಿ

  ಯಾವುದೇ ಒಂದು ಯೋಚನೆ ಅಂತ ಹಾಕಿಕೊಳ್ಳದೆ, ಮನಸ್ಸಿಗೆ ತೋಚಿದ ದಾರಿಯ ಹಿಡಿದು ಸಿಕ್ಕ ಊರುಗಳನ್ನ ನೋಡಿಕೊಂಡು ಬರೋದು ಅಂತ ನಮ್ಮ ನಡುವೆ ಮಾತಾಯಿತು. ಅದಕ್ಕೆ ಎಲ್ಲರೂ ಒಪ್ಪಿಕೊಂಡರು. ಹೊರಡುವ ದಿನ ಬಂದಿತು. ನಾಲಕ್ಕು ಬೈಕಿನಲ್ಲಿ ಎಂಟು ಹುಡುಗರು ಹೊರಟು ನಿಂತೆವು. ಬೆಂಗಳೂರಿನಿಂದ ಬಿಡುವಾಗಲೂ ಎಲ್ಲಿಗೆ ಹೋಗೋದು ಎನ್ನುವುದು ಗೊತ್ತಾಗಿರಲಿಲ್ಲ. ಆದರೆ ಮೊದಲು ಒಂದು ಕೆಲಸ ಆಗಬೇಕಿತ್ತು. ಬೆಂಗಳೂರಿನಿಂದ ಓಡಿಹೋಗಿ ಗುಡೇಮಾರನಹಳ್ಳಿಯಲ್ಲಿ ಹೊಕ್ಕಿಕೊಂಡಿದ್ದ ನಮ್ಮ ಗೆಳೆಯ ಚೇತನನನ್ನು ಕರೆದುಕೊಂಡು ಹೋಗಲು ನಾವು...


 • ನನ್ನ ಬಿಡದ ಹುಡುಗಿ

  ನಾ ಬಿಡು ಎಂದರೂ ನನ್ನ ಬಿಡದ ಹುಡುಗಿ, ಪ್ರೀತಿಯ ಅಂತರಂಗದಿ ಇರಿಸಿಹಳು ಹುದುಗಿ. ಕಾಡು ಮೇಡು ಅಲೆಯುತ್ತಿದ್ದ ನಾನು ಒಬ್ಬ ಯೋಗಿ, ಕರೆದು ಒಂದೆಡೆ ಕೂರಿಸಿದಳು ನನ್ನ, ಈಗ ನಾನು ಪ್ರೀತಿ ಬಯಸಿದ ವೈರಾಗಿ. ನಾ ಬೇಡ ಎಂದರೂ ಕೊಡಲು ಬಂದಳಾ ಹುಡುಗಿ, ಹುಚ್ಚು ಮನದಲಿ ತುಂಬಿಸಿಕೊಂಡು ಪ್ರೀತಿಯೆಂಬ ಸುಗ್ಗಿ. ನನ್ನೊಳಗೆ ನನ್ನ ಬಯಸಿ ಅರಸುತ್ತಿದ್ದೆ ನಾನು, ಅಂತರಂಗದಿ ಅವಳು ಹರಿಯೆ ನಾ ಈಗ ಹಸಿರಾದ ಕಾನು. ನಾ ಬಿಡು...


 • ಅರಿವು

  ನಮ್ಮ ಮನೆಗೆ ಬೆಕ್ಕಿನ ಮರಿಯನ್ನು ತಂದಾಗ ಅದಕ್ಕೆ ಸುಮಾರು ಎರಡು ತಿಂಗಳು ಆಗಿತ್ತು. ಅದಕ್ಕೆ ಆರೇಳು ತಿಂಗಳು ತುಂಬಿದಾಗ ಅದೂ ಸಹ ಮರಿ ಹಾಕುವ ಪ್ರಾಯಕ್ಕೆ ಬಂದಿತ್ತು. ಜೊತೆಗೆ ಕೆಲವು ತಿಂಗಳಲ್ಲಿ ಮರಿಗಳನ್ನೂ ಹಾಕಿತು. ಹಾಕಿದ ಮರಿಗಳು ಆರೋಗ್ಯವಾಗಿ ಬೆಳೆದು ತಮ್ಮ ದಾರಿಗಳನ್ನು ನೋಡಿಕೊಂಡವು. ನಮ್ಮ ಮನೆಯ ಬೆಕ್ಕೂ ಸಹ ಮರಿಗಳ ಹಾಕೋದರ ಅನುಭವ ಪಡೆಯಲಾರಂಭಿಸಿತು. ವರ್ಷಕ್ಕೆ ಎರಡು ಬಾರಿ ಮರಿಗಳ ಹಾಕುತ್ತಿತ್ತು. ಹೀಗೆ ಒಂದು ಸರಿ ನಮ್ಮ ಬೆಕ್ಕು...


 • ನೋವಲ್ಲಿ ನಲಿವು

  ನೋವಿನಲ್ಲಿ ಬರೆದ ಕಥೆಯು ನಲಿವಿನಿಂದ ತುಂಬಿದೆ, ನಲಿವಿನಲ್ಲಿ ಬರೆದ ಕಥೆಯು ನೋವಿನಲ್ಲಿ ಮುಗಿದಿದೆ. ಎತ್ತ ಹೋದರೂ ಬದುಕು ಒಂದೇ, ನೋವು ನಲಿವಿನ ಸಾಗರ, ಹೇಗೇ ಇದ್ದರೂ ಸಾಲದು ನಮಗೆ, ಬೇರೆ ಬಯಕೆಗಳೇ ನಮಗೆ ಸಡಗರ. ಒಳಗೊಳಗೆ ನೋವು ನಗುತಲಿದ್ದರೂ ಹೊರಗೆಲ್ಲೂ ಯಾರಿಗೂ ತೋರೆವು ನಾವು, ಹೊರಗೆಲ್ಲ ನಲಿವು ಹರಡಿದ್ದರೂ ನಮ್ಮ ಒಳಗೆಲ್ಲೊ ಅಳುಕುತ್ತಿರುವುದು ಮನವು. ಎತ್ತ ಹೋದರೂ ಭಾವನೆ ಒಂದೆ ಏನೂ ಅರಿಯದ ಪಯಣ, ಹೇಗೇ ಇದ್ದರೂ ಸಾಲದು ಮನಕೆ...