ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಪದ್ಯ
ಮನವು ಯೋಚನೆಗಳಲಿ ಮಿಂದು, ಪದಗಳನು ತಿದ್ದಿ ತೇಯ್ದು, ಚಂದ ಮಾಡಿ ಬರೆದಾಗಲೇನೆ, ಸೊಗಸಾದ ಕವನವೆಂದು ಹೇಳೋದು. ಒಳಗಿನದ್ದೆಲ್ಲ ಹೊರಕ್ಕೆ ಹಾಕಿ, ಹೊರಗಿನದ್ದೆಲ್ಲ ಒಳಕ್ಕೆ ತುಂಬಿ, ಅರ್ಥ ನೀಡಿ ಬರೆದಾಗಲೇನೆ, ಹಿರಿದಾಗ ಕವನವೆಂದು ಹಾಡೋದು. ನೂರು ದಾರಿ ಸವೆಸಿ ಬಂದ, ನೂರು ಸಾರಿ ಬದುಕಿ ತಂದ, ತುಂಬು ಅನುಭವ ನೀಡುವುದಕೆ, ಜೊತೆಯಾದ ಕವನವನ್ನ ಓದೋದು. - ಆದರ್ಶ
-
ಗಬ್ಬು
ಜಗವಿದು ಎಚ್ಚರದ ಭ್ರಮೆಯಲ್ಲಿ ಮುಳುಗಿ, ಉಳಿದಿಹದು ಕತ್ತಲೆಯ ಕೋಣೆಯಲ್ಲಿ ಮಲಗಿ. ಎಲ್ಲಿಯೊ ಯಾವುದೊ ಹೊಸ ದಿನದೆಣಿಕೆಯ ಹುರುಪು, ಇಲ್ಲಿಹುದು ಅದರ ಸುಳ್ಳಿನ ಹೊಳಪು. ಬಿತ್ತರಿಸು ಲೋಕವೇ ನಿನ್ನೊಳಗಿನ ಗಾರುಡಿ, ಬಿಗಿಹಿಡಿ ಜನ ನೋಡುವ ದಾರಿಗೆ ಕನ್ನಡಿ . ಎಲ್ಲಿಯೊ ಯಾವುದೋ ಊರಿನ ಅಣಕು, ಇಲ್ಲಿಹುದು ಅದರ ಸುಳ್ಳಿನ ತುಣುಕು. ಜಗವಿದು ಹುಚ್ಚಿನ ಅಲೆಯಲ್ಲಿ ಮುಳುಗಿ, ಉಳಿದಿಹದು ಹರಿದ ಬಟ್ಟೆ ತೊಟ್ಟು ತಾನಾಗಿ. ಎಲ್ಲಿಯೊ ಯಾವುದೋ ಹೊಸ ಯುಗದ ಮಬ್ಬು, ಇಲ್ಲಿಹುದು...
-
ಹುಚ್ಚು
ಹೃದಯ ಇಲ್ಲಿದೆ, ಬೆಂಕಿ ಹಚ್ಚು, ಪ್ರೀತಿಯಲ್ಲಿದೆ ಎಲ್ಲ ಹುಚ್ಚು. ಮನದಲ್ಲಿ ಕವನ ಬಂದಂತೆ ಗೀಚು, ಪ್ರೀತಿಲಿ ತೇಲಾಡುವ ಗೀಳೇ ಹೆಚ್ಚು. ಊರು ಯಾವುದು, ಹೋಗು ಹೊರಗೆ, ಮನವು ನಿಂತಲ್ಲಿನ ಜನರೂ ಓರೆಗೆ. ದಿಕ್ಕು ಯಾವು ಮನದ ಒಲವಿಗೆ, ಕನಸು ಬೀಳುವುದೆ ಕೇಳಿದ ಆ ಕಣಿಗೆ? ಕಾಡು ಇದು ಮನದ ಹುಚ್ಚು, ತಿರುಗಿ ನೋಡದೆ ಬೆಂಕಿ ಹಚ್ಚು. ಒಲವು ಗೆಲ್ಲಲಿ, ಮನವು ಸೋಲಲಿ, ಬರಡು ಮನದಲ್ಲಿ ಸದಾ ಕರುಣೆ ತುಂಬಿರಲಿ. -...
-
ಗೆಲ್ಲು
ಒಂದು ಕಡೆ ಸೋತರೂ ಇನ್ನೊಂದು ಕಡೆ ಗೆಲ್ಲು, ಒಂದೇ ಹಾದಿ ಇರುವ ಊರು, ಸಿಗದು ಇಲ್ಲಿ ಎಲ್ಲು. ಎದುರು ಬರಲಿ ಎಡಬಿಡದೆ ಸಾವಿರಾರು ಕಲ್ಲು, ಅವುಗಳ ಮೇಲೆ ಬೀಳದೆ, ಧೃಡವಾಗಿ ನೀನು ನಿಲ್ಲು. ನಿತ್ಯವೂ ನೂತನ ನೋವು ಬರಲಿ, ಅದುವೇ ಬದುಕಿನ ಕೊನೆಯೇ ಇರಲಿ, ಕಡೆಯ ಯತ್ನವ ನಿಲ್ಲಿಸದೇ ಕೈಚೆಲ್ಲಿ, ಅಲ್ಲೆ ನಿಲ್ಲಬೇಕಿದೆ, ಧೃಡವಾಗಿ ನಿನ್ನಲ್ಲಿ. ನೂರು ಕಡೆ ಸೋತರೂ ಮತ್ತೊಂದು ಕಡೆ ನಿಲ್ಲು, ಸಮವಾಗಿ ಇರುವ ಹಾದಿ ಸಿಗದು...
-
ಮರೆವು
ಅಪ್ಪಿದಾಗ ನನ್ನ, ಬಾಳ ನೂರು ನೋವು, ಕಾಪಾಡಲು ಬರುವ, ನಗುವ ಘಳಿಗೆ ಹಲವು. ನನ್ನ ಒಳಗೆ ಇರುವ, ನನ್ನ ಕಾಳಜಿ ಮಾಡುವ ಒಲವು, ಹೊಚ್ಚಹೊಸ ನೆನಪುಗಳಿಗೆ ದಾರಿಕೊಡುವ ಮರೆವು. ಒಂದೇ ದಾರಿ ನನಗೇಕೆ, ಇರಲಿ ನೂರು ತಿರುವು, ಪ್ರತಿ ದಾರಿಯ ಕೊನೆಗೆ, ಸಿಕ್ಕ ಸೊಗಸು ಹೊಸವು. ಒಳಗೆ ಇರುವ ನನ್ನ ದಣಿವ, ಮರೆಸೊ ನನ್ನ ವರವು, ಹೊಚ್ಚಹೊಸದಾಗಿ ಊರ ಕಾಣೆಂದು, ನೆನಪನಳಿಸೊ ಮರೆವು. ಅಪ್ಪಿಕೊಂಡಿರಲಿ ಅನುಘಳಿಗೆ, ಚಳಿಯೇರಿಸೊ ರಾವು, ಜೊತೆಗಿರುವುದು...