ಅನುಭವ
by Adarsha
ಬೀಜ ಇಟ್ಟು, ಗೊಬ್ಬರ ಹಾಕಿ,
ಮಣ್ಣು ಮುಚ್ಚಿ, ನೀರ ಬಿಡಿ,
ಗಿಡ ಹುಟ್ಟಿದಮೇಲೆ ಅದನ್ನ, ಅದರ ಅನುಭವಕೆ ಬಿಡಿ.
ಪ್ರಾಣಿ, ಹಕ್ಕಿ, ಹುಳು ತಿನ್ನಲಿ,
ಬೆಳೆಯದಂಗೆ ಸೊರಗಲಿ,
ಅದರ ಜೀವ ಅದರದು, ತಾನೇ ಹೋರಾಡಲು ಬಿಡಿ.
ಬೆಳೆದು ನಿಂತು ಹೆಮ್ಮರವಾಗಲಿ,
ನಿತ್ಯ ನೂರು ಹಣ್ಣು ಬಿಡಲಿ,
ಅದರ ಹಣೆಬರಹ ಅದರದು, ಅದರ ಅನುಭಕೆ ಬಿಡಿ.
ಬೆಳೆದ ಮರ ಬಾಗದು,
ಜೋತು ಬಿದ್ದರೂ ಹಣ್ಣು ಕೊಡದು,
ಕಾಲ ಬಂದಾಗ ಬರುವುದು, ಬದುಕ ಅನುಭವಿಸಲು ಬಿಡಿ.
- ಆದರ್ಶ