ನೆನಪಿಟ್ಕಂಡು ಏನ್ ಮಾಡ್ತಿ ಹುಚ್ಚ,
ನಡೆದಿದ್ನೆಲ್ಲ ಮರ್ತೋಗು.
ಗಾಯಗಳ ಪೆಟ್ಟು ನೂರಾರು ಬಿದ್ದೋಗ್ಲಿ,
ಹರಿದು ಆವಿಯಾಗೊ ನೀರಾಗು.
ಹಳೆದಾರಿ ಹಿಂದಾಕಿ ಊರ್ಬಿಟ್ಟು ಓಡೋಗು,
ನೆನಪುಗಳ್ನೆಲ್ಲ ತಿರುವಾಕಿ ಏನ್ ಮಾಡ್ತಿ,
ಬರೆದ ಪತ್ರಗಳೆಲ್ಲ ಹರಿದಾಕು.

ನೆನಪಿದು ಬಿಳಿಮಂಜು, ಬಿದ್ದಂಗೆ ಕರಗಲಿ,
ಅದೆಷ್ಟೆ ನೋವಿರಲಿ, ಅಳು ಬಂದು ನಿಂತೋಗಲಿ.
ಗುಡಿಲಿರುವ ದೇವರು ಕುಂತಂಗೆ ನೀನಾಗು,
ಊರೆಲ್ಲ ನೋಡಿ ಬಂದು ಸಿಕ್ಕ ನೋವ ಮರೆತೋಗು.

ನೆನಪಿಟ್ಕಂಡು ಏನ್ ಮಾಡ್ತಿ ಹುಚ್ಚ,
ಅನ್ಸ್ಕಂಡಿದ್ನೆಲ್ಲ ಮರ್ತೋಗು.
ಅವಮಾನ ಯಾರಮನೆದೊ, ಅದನ್ನಲ್ಲೆ ನೀ ಕೊಡವು.
ಗಾಳಿ ಬಂದು ಬೀಸಲಿ, ಅದ್ರಂಗೆ ನೀನಾಗು,
ಅಂಟಿಕೊಂಡಿರಲಿ ನೂರು ವಾಸನೆ, ನಿಲ್ಲದಂಗೆ ಸಾಗಿದರೆ ನಿಂಗ್ ಬಿಡುವು.

- ಆದರ್ಶ