ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಅತ್ತುಬಿಡು
ಅತ್ತುಬಿಡಲೇ ಈ ದಿನ, ನನ್ನ ಒಳಗೆ ನಾನು, ಯಾರಿಗೂ ತೋರದೆ ವಿಧಿಯ ಈ ಸಂಚನ್ನು. ಕರಗಿ ಹೋಗಲಿ ನೋವೆಲ್ಲ ನನ್ನೊಳಗೆ, ತೇಲಿಬರುವ ಮುನ್ನ, ಮತ್ತೊಮ್ಮೆ ಮುಗುಳುನಗೆ. ರಾಗವೆಲ್ಲಿ ಈಗ, ಹೊಮ್ಮುತ್ತಿಲ್ಲ ನನ್ನ ಸ್ವರದಲ್ಲಿ, ಕೂಗಲೂ ದನಿಯಿಲ್ಲ, ಹೇಗೆ ನಾ ಅಳಲಿ. ಅತ್ತುಬಿಡಲೇ ನಾನು, ಈ ದಿನ ನನ್ನೊಳಗೆ, ತಲುಪುವ ಮುನ್ನ, ನನ್ನ ನೋವು ಮೌನದ ಬಳಿಗೆ. ಮರುದನಿಯೂ ಸೋತಿದೆ ನನ್ನನ್ನು ತಲುಪಲು, ಸಂತೈಸಲು, ನನ್ನ ಬಿಗಿದಪ್ಪಿಕೊಳ್ಳಲು. ಅತ್ತುಬಿಡಲೇ ನಾನು, ಈ...
-
ಹಣೆಬರಹ
ಬರುವ ಲಕ್ಷ್ಮಿಯ ಬೇಡವೆಂದು, ಹೇಳಲಿ ನಾನು ಏಕೆ ಇಂದು, ಭಾಗ್ಯವು ಬರುವುದು ಮಳೆಯಂತೆ, ಎಲ್ಲವೂ ಹಣೆಯ ಬರಹವಂತೆ. ಅಳುವು ನಗವು ಇಲ್ಲಿ ಹಲವು, ಹತ್ತಿರ ಇದ್ದರೂ ಸಿಗದು ಸಾವು, ಅನುಕ್ಷಣವೂ ಇಲ್ಲಿ ಅನುಭವವಂತೆ, ಎಲ್ಲವೂ ಹಣೆಯ ಬರಹವಂತೆ. ದಿಕ್ಕು ಯಾವುದು ಗುರಿಯ ಕಡೆ, ನಿತ್ಯ ಇಲ್ಲಿ ನೂರು ತಡೆ, ಜೀವನ ತೇಲುವುದು ಗಾಳಿ ಮೇಲಂತೆ, ಎಲ್ಲವೂ ಹಣೆಯ ಬರಹವಂತೆ. - ಆದರ್ಶ
-
ವಾಸ್ತು
ಮನದ ಮೂಲೆಯಲ್ಲಿ ನಿಂತು, ಎಲ್ಲದಕ್ಕೂ ಅಂತು ಅಸ್ತು, ಒಳ್ಳೆದು ಕೆಟ್ಟದ್ದು ಏನೆ ಬರಲಿ, ಒಪ್ಪಿಕೊಂಡಿತ್ತು ನನ್ನ ಮನದ ವಾಸ್ತು. ಏರಿದಂತೆ ಎದೆಯ ಬಡಿತ, ಏರುಪೇರಾಯ್ತು ಕಾಲ ಕುಣಿತ. ನೂರು ನಡುಕ ಒಳಕ್ಕೆ ಬಂತು, ಎಲ್ಲ ಒಳ್ಳೆದಕ್ಕಂತು, ನನ್ನ ಮನದ ವಾಸ್ತು. ನೂರು ಜನರ ಒಲುಮೆ ಇರಲಿ, ನೂರು ಜನ ಬೈದು ಬಿಡಲಿ, ಎಲ್ಲವೂ ಒಂದೆ ಯಾವತ್ತು. ನಿನ್ನ ಪಾಡಿಗೆ ನೀನಿರು, ಅನ್ನೋದು ಈ ಮನದ ವಾಸ್ತು. - ಆದರ್ಶ
-
ಮಾನವನಾಗಬೇಡ
ಕಮ್ಮಾರನಾಗಬೇಡ ನೀ, ಕುಂಬಾರನಾಗಬೇಡ, ಕತ್ತಿ ಹಿಡಿಯಬೇಡ ನೀ, ಕ್ಷತ್ರಿಯನಾಗಬೇಡ, ದುಡಿದು ಗಳಿಸಿ ನಿನ್ನೊಲವಿನಂತಾಗಬೇಡ. ಏನೂ ಆಗಬೇಡ ನೀ, ಕೊನೆಗೆ ಮಾನವನಾಗಬೇಡ. ಬುದ್ಧಿ ಓಡಿಸಬೇಡ ನೀ, ಬೊಮ್ಮನಾಗಬೇಡ, ಚಪ್ಪಲಿ ಹೊಲಿಬೇಡ ನೀ, ಚಮ್ಮಾರನಾಗಬೇಡ. ಬಟ್ಟೆ ಬೇಡ, ವ್ಯಾಪಾರ ಬೇಡ, ಏನೂ ಆಗಬೇಡ ನೀ, ಬಯಸಿದಂತಾಗಬೇಡ. ಕೊನೆಗೆ ಮಾನವನಾಗಬೇಡ. ಮೋಸ ಬೇಡ, ದಾನ ಬೇಡ, ಧರ್ಮ ಬೇಡ, ನಿನ್ನ ನೀತಿ ನಿಯಮ ಬೇಡ. ಹಿಂದು, ಮುಸ್ಲಿಮ್, ಬೌದ್ಧ, ಕ್ರೈಸ್ತ, ಏನೂ ಆಗಬೇಡ ನೀ,...
-
ಪ್ರಕೃತಿಯಲ್ಲಿನ ವಿರೋಧಾಭಾಸ
ಇವತ್ತಿಗೆ ಭೂಮಿಯ ಮೇಲೆ ಜನರ ಸೇರಿಸಿ ಇತರೆ ಎಲ್ಲ ಪ್ರಾಣಿಗಳಿಗೂ ಬಹಳ ರೀತಿಯಲ್ಲಿ ಕೆಟ್ಟ ಪರಿಣಾಮಗಳಾಗ್ತಿವೆ. ಇದಕ್ಕೆ ಮಾನವನೇ ಮುಖ್ಯ ಕಾರಣ. ಜನರು ತಾವು ಕಂಡುಹಿಡಿದ ಅದೆಷ್ಟೋ ಲೆಕ್ಕವಿಲ್ಲದ ಆವಿಷ್ಕಾರಗಳು, ಕಂಡುಕೊಂಡ ಪ್ರಕೃತಿಯ ಚಮತ್ಕಾರಗಳು, ಕಲೆ, ಕಟ್ಟಡ ಕಟ್ಟುವ ಪದ್ಧತಿ, ಗಣಿಗಾರಿಕೆ, ಔಷಧಗಳ ಆವಿಷ್ಕಾರ ಇವೆಲ್ಲವೂ ನಮಗೆ ಸಹಾಯ ಮಾಡುವುದಕ್ಕಿಂತ ಹೆಚ್ಚಿಗೆ ಅಪಾಯಗಳನ್ನೇ ತಂದುಕೊಟ್ಟಿವೆ. ಪ್ರಕೃತಿಯಲ್ಲಿ ಬೇರೆ ಪ್ರಾಣಿಗಳಲ್ಲಿ ಕಾಣದ ಬುದ್ಧಿವಂತಿಕೆ, ರೀತಿ-ನೀತಿಗಳು, ಕಲಿಕೆ ಹಾಗೂ ತಿಳಿದ ವಿಷಯವನ್ನು ಮುಂದಿನ...