ಕರಗು
by Adarsha
ಕರಗದಿರುವ ಮನಸ್ಸು ಉಂಟೆ,
ನೀರು ಬಿದ್ದ ಕಲ್ಲು ಒರಟೆ?
ಬದುಕನಿಂದ ಕಲಿತ ಮನಕೆ, ಯಾವುದರಿಂದ ಏನು ತಂಟೆ.
ಸಾವಿರ ತಿರುವು ಬಂದಾಗ ನಿತ್ಯ ಕಾಲ ಬಳಿಗೆ,
ಸಾವಿರ ಭಾವ ಬಡಿದಾಗ ಮನಕೆ ಒಂದೇ ಸರಿಗೆ,
ಒಡನಾಟದಿ ಕಲೆವ ಮನವು, ಓಗೊಡದೆ ಇರುವುದೆ ಮತ್ತೊಬ್ಬರ ಗೋಳಿಗೆ.
ಕರಗಿಬಿಡಲಿ ಎಲ್ಲ ಬೇಗುದಿ,
ಎದೆಯ ತುಂಬುತಾ ನಿತ್ಯ ನೆಮ್ಮದಿ,
ಎಲ್ಲ ಮನ್ನಿಸಿ ಕರಗಿಬಿಡು, ಹಿಡಿದು ನಡೆ ನೀ ಹೊಸದೊಂದು ಹಾದಿ.
- ಆದರ್ಶ