ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ನಾನ್ಯಾರು
ಇಲ್ಲಿ ಹುಟ್ಟೋ ಪ್ರಾಣಿಗಳಿಗೆ ಸಮಯ, ಜಗತ್ತು, ವಾತಾವರಣ, ಹಸಿವು ಜೀವನವನ್ನ - ಬದುಕುವುದನ್ನ, ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಲಿಸುತ್ತವೆ. ಪ್ರತಿಯೊಂದು ಪ್ರಾಣಿಯೂ ಅವುಗಳ ಶಕ್ತಿಗೆ ಅನುಸಾರವಾಗಿ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ. ಪ್ರಕೃತಿಯ ಬದಲಾವಣೆಗೆ ಹೊಂದಿಕೊಳ್ಳದೆ, ಇತರೆ ಪ್ರಾಣಿಗಳೊಂದಿಗಿನ ಪೈಪೋಟಿಯಲ್ಲಿ ಸೋತರೆ, ಕೊನೆಗೆ ಸೊರಗಿ ಸಾಯಲೇಬೇಕು. ಇದು ಸಹಜ ಧರ್ಮ. ಈಗ ಹತ್ತು ತಿಂಗಳ ಹಿಂದೆ ನಮ್ಮ ಮನೆಗೆ ಒಂದು ಬೆಕ್ಕಿನ ಮರಿಯನ್ನು ತಂದೆ. ಆಗ ಅದಕ್ಕೆ ಎರಡು ತಿಂಗಳಷ್ಟು ವಯಸ್ಸಾಗಿತ್ತು. ಅಲ್ಲಿಯವರೆಗೆ...
-
ನಶ್ವರ
ಯಾರ ಜೀವನ ಇಲ್ಲಿ ಶಾಶ್ವತ, ಮುನ್ನಡೆಯಲೇ ಬೇಕು ನಾವು ಎಲ್ಲವ ತೊರೆಯುತ. ಅಪರೂಪವಲ್ಲ ಈಗ ಜೀವನದಲ್ಲಿ ಯಾವದೇ ಘಟನೆ ಅನುಭವಿಸುತ ಅವನೆಲ್ಲ ಸಾಗುತಿರಬೇಕು ಸುಮ್ಮನೆ, ಹರಿಯುತ್ತಿರುವ ನದಿಯ ಮೇಲೆ ಯಾವುದು ಉಳಿವುದು ನಿಲ್ಲುತಾ? ಯಾರ ಜೀವನದಲ್ಲಿ ಏನು ಉಳಿವುದು? ಏನೂ ಅಲ್ಲ ಇಲ್ಲಿ ಶಾಶ್ವತ. ಯಾವ ಪಯಣದಲ್ಲಿ ಯಾರು ಜೊತೆ ಬರುವರೊ? ಯಾವ ಗುರಿಯಲ್ಲಿ ಯಾರು ನಮ್ಮ ಸೇರುವರೊ? ಯಾರೂ ಜೊತೆಯಲ್ಲ ನಿನಗೆ, ಎಂದಿಗೂ ನೀನು ವಿವಿಕ್ತ ಯಾವ ದಾರಿಯಲ್ಲಿ...
-
ನಾಲ್ಕು ಕಥೆಗಳು
೧. ಅವನು ಜನರ ಕುಡಿತ ಬಿಡಿಸುವ ಸಲುವಾಗಿ ಒಂದು ಸಂಸ್ಥೆ ಹುಟ್ಟಿ ಹಾಕಿದ್ದ. ಊರು ಊರಿಗೆ ಹೋಗಿ ತಾನೇ ಸ್ವತಃ ಕುಡಿತದ ದುಷ್ಪರಿಣಾಮದ ಬಗ್ಗೆ ಹೇಳುತ್ತಿದ್ದ. ಅಲ್ಲದೇ, ಅವರು ಕುಡಿದಾಗ ಹೇಗೆ ಆಡುತ್ತಾರೆ ಎಂದು ತಾನೆ ನಟಿಸಿ ತೋರಿಸುತ್ತಿದ್ದ. ಆದರೆ ಆ ನಟನೆಯಲ್ಲಿ ನೈಜತೆ ಇಲ್ಲ ಅಂತ ಅವನಿಗೆ ಅನಿಸಿತು. ನೈಜತೆ ಬರಲಿ ಎಂದು ಒಂದು ೩೦ ಎಂ ಎಲ್ ಎಣ್ಣೆಗೆ ೩೦೦ ಎಂ ಎಲ್ ನೀರು ಬೆರೆಸಿ ಕುಡಿದು...
-
ಮುಕ್ತ
ಹರಿದಾಗ ನೀನು ನನ್ನ ಸುತ್ತ,ಏಳು ಬೀಳು ಇರದೆ ಆಗುವೆನು ಮುಕ್ತ! ಬಯಕೆಗಳೇ ಬೇಡ, ಹಾಡುವೆ ಮನದ ಹಾಡ, ಜೊತೆಯಾಗಿ ನೀ ಬರಲು. ಬರುವೆನು ಮನಸಾರೆ, ಪಿಸುದನಿಯಲೂ ನೀ ಕರೆದರೆ, ಅನುರಾಗಿ ನಾನಾಗಲು! ಹರಿದಾಗ ನೀನು ನನ್ನ ಸುತ್ತ,ಆಸೆಗಳ ತೊರೆದು ಆಗುವೆನು ಮುಕ್ತ! ದಿನಗಳು ಈಗ ಕ್ಷಣವಾಗಿವೆ, ಅಂತ್ಯವೂ ಈಗ ಆರಂಭವೇ, ಹೊಸದಾಗಿ ನೀ ಸಿಗಲು. ನವಜೀವನ ಹೊಸ್ತಿಲಲ್ಲೇ, ನೀ ಹೆಜ್ಜೆಯನಿಟ್ಟಲ್ಲೇ, ನನ್ನಲ್ಲೇ ನೀ ನೆಲೆಸಲು! ಹರಿದಾಗ ನೀನು ನನ್ನ ಸುತ್ತ,ಮನದಾಳದ...
-
ಕಾಡಿಗೆ
ಬರುವಾಗಲೆ ಬೆಳಕಾಗಿಯೇ ಬರುವ ನೀ ಚಂದ ಅತಿಯಾಗಿಯೇ ಕನಸಾಗುವ ನಿನ್ನಿಂದ ಆನಂದ ರೂಪವ ತೋರುತ ಬೆಳಗುವ ಕಣ್ಣಿಗೆ ತಂಪನು ನೀಡುತ ಕೂತಿದೆ ಕಾಡಿಗೆ, ನಿನ್ನ ಕಂಗಳ ಕಪ್ಪಿನ ಮೋಹಕೆ ಬಲಿಯಾಗಿ ಪಡುವಣಕೆ ತಿರುಗಿದೆ ಈ ಸೂರ್ಯನ ನಡಿಗೆ! ನನ್ನೆಲ್ಲ ತತ್ವಗಳ ಅಲುಗಾಡಿಸಿದ ರೇಜಿಗೆಗೆ ನುಗ್ಗುತಿದೆ ನನ್ನ ಮನವು ಅನುಕ್ಷಣವೂ ನಿನ್ನ ಬಳಿಗೆ ಆಕರ್ಷಣೆಯ ಕೇಂದ್ರ ಬಿಂದುವಾಯಿತು ಈಗ ನಿನ್ನ ಕಣ್ಣ ಕಾಡಿಗೆ ನಿನ್ನ ಸುತ್ತವಷ್ಟೆ ಸಾಗುವುದು ಇನ್ನು ಮೇಲೆ ಈ...