ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ,
ಈ ರೀತಿಯ ಉತ್ಸಾಹದಿ ಮನ ತುಂಬಿದೆ ಹೊಸ ಭಾವನೆ.

ಮನವೀಗ ಬಯಕೆಗಳ ಪರಿಚಾರಕವಾಗಿದೆ,
ತುಡಿತಗಳ ಪೂರೈಸಲು ಸಂಚಾರಕೆ ನಡೆದಿದೆ.
ಹಾದೀಲಿ ತಂಗಾಳಿಯು ತೇಲಾಡುತ ಬೀಸಿದೆ,
ಊರಿರುವ ದಿಕ್ಕು ಇಂದು ಮಾಯವಾಗಿದೆ!

ತಲುಪಿದೆ ಮನವು ಕೊನೆಯಿಲ್ಲದ ತೀರವನ್ನು,
ತಣಿಸುತಿದೆ ಇರುಳ ಸಾಗರದಲೆ ಈ ನನ್ನ ಮನವನ್ನು.
ಉರುಳಿದೆ ಈಗ ಮರಳಿನ ಕೋಟೆ,
ಬಿಡುಗಡೆಗೆ ಶುರು ಈಗ ಮನದಲ್ಲಿ ಬೇಟೆ!

ಏಕಾಂಗಿಯ ಸಂಚಾರಕೆ ಏಕಾಂತವೇ ಸಂಭಾವನೆ,
ಎಲ್ಲಕ್ಕೂ ಮಿಗಿಲಾದದ್ದು ನಾನು ಸ್ವತಂತ್ರನೆಂಬ ಭಾವನೆ!

- ಆದರ್ಶ