ಅತಿಶಯ ಮನದ ವಿಷಯಾರಾಧನೆ,
ದೂರ ಇರುವ ಕಾಲದಿ ಅನುಕ್ಷಣವೂ ಆಪಾದನೆ.
ಪ್ರೇಮವು ಈಗ ಎಲ್ಲೆಡೆ ಹರಡಿದ ಕಲ್ಪನೆ,
ಬಿಗುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ!

ಅರಳುವ ಮುನ್ನವೇ ನಿನ್ನ ಗಂಧವು ಹರಿದಿದೆ,
ಅನುಭವಿಸದೆ ಇನ್ನು ನನಗೆ, ಬೇರೆ ದಾರಿ ಎಲ್ಲಿದೆ.
ಕಾಲವೂ ಈಗ ನಿನ್ನ ಸ್ಪರ್ಶಕೆ ನಿಂತಂತ ಸೂಚನೆ,
ಅನುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ.

ಅತಿರೇಕವೇ ಅಲ್ಲ, ನಿನ್ನ ಕಾದು ನಾ ಕುಂತರೆ,
ಏರಿಳಿತವೆಲ್ಲ ಒಮ್ಮೆಗೆ, ನೀನು ಬಳಿ ಬರದೇ ಹೋದರೆ.
ಹವಾಮಾನವೂ ಸ್ವಾಗತ ಕೋರಿದೆ, ತೋರುತ ಎಲ್ಲ ಭಾವನೆ,
ನಮ್ಮ ಸಂಧಾನವಾಗಬೇಕಿದೆ ಬಾ, ನನ್ನ ಹೃದಯವೇ ಈಗ ನಿನ್ನ ಮನೆ!

- ಆದರ್ಶ