ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಹೆದ್ದಾರಿ
ಎಷ್ಟು ನೆತ್ತರ ಹರಿದಿವೆಯೋ ಇಲ್ಲಿ, ಆದರೂ ಒಂದು ಹನಿ ನೀರು ಹನುಕಲಿಲ್ಲ ನಮ್ಮ ಕಣ್ಣಲ್ಲಿ. ಎಷ್ಟೋ ಜೀವ ಹೋಗಿದೆ ಇಲ್ಲಿ, ಸಿಕ್ಕಿಕೊಂಡು ನಮ್ಮದೇ ಗಾಲಿಯ ಅಡಿಯಲ್ಲಿ. ಹೆದ್ದಾರಿಯ ಜೀವನವಿದು, ಒಂದೇ ಕ್ಷಣದ ಬದುಕು, ಕಣ್ಣ ಮಿಟುಕಿಸುವುದರೊಳಗೆ ಆರುವುದು ಜೀವನದ ಬೆಳಕು. ಬೇಕಿರುವ ನಿಧಾನವಿಲ್ಲ ನಮ್ಮಲ್ಲಿ, ನಮ್ಮ ಗಾಲಿಗೆ ಸಿಕ್ಕಿ ಸತ್ತ ಜೀವಕೆ ಹನಿಯೊಂದು ಬರಲಿಲ್ಲ ನಮ್ಮ ಕಣ್ಣಲ್ಲಿ. ಕಪ್ಪೆ, ಕಿರುಬ, ಹಾವು, ನಾಯಿ, ಹಸು, ಹಕ್ಕಿ ಯಾವುದಕ್ಕೂ ನಾವು ನಿಲ್ಲಲಿಲ್ಲ,...
-
ಆ ಊರಿನ ನದಿ
ಅವನ ಊರಿನ ನದಿಯೇ ಅವನಿಗೆ ಸ್ಫೂರ್ತಿ. ಹಳ್ಳ, ದಿಣ್ಣೆಗಳನ್ನೆಲ್ಲಾ ಇಳಿದು, ಅಡ್ಡ ಬಂದ ಬಂಡೆಗಳನ್ನೇಲ್ಲ ದಾಟಿ, ಸಿಕ್ಕ ಅಡಚಣೆಗಳನ್ನೇಲ್ಲ ಮೀರಿ ಅದು ತನ್ನ ಗುರಿಯೆಡೆಗೆ ನುಗ್ಗುತ್ತಿರುವ ರೀತಿಯೇ ಅವನಿಗೆ ಒಂದು ಅಚ್ಚರಿಯಾಗಿತ್ತು. ಮಧ್ಯಮ ವರ್ಗದ ಹುಡುಗ ಅವ್ನು. ಸಾವಿರ ಕನಸುಗಳಿದ್ದವು. ಅವನು, ನದಿಯ ದಡದ ಮೇಲೆ ನಿಂತಾಗಲೆಲ್ಲಾ, ಅವನ ಮನಸ್ಸಿಗೆ ನಾನೂ ಸಹ ಹೀಗೆ ಗುರಿ ಮುಟ್ಟಬೇಕು ಅಂತ ಅನ್ನಿಸ್ತಾ ಇತ್ತು. ಕಷ್ಟಪಟ್ಟು ಓದಿ, ಹೇಗೋ ಒಂದು ಕಂಪನಿ ಸೇರ್ಕೊಂಡ....
-
೨೦ ಕ್ಷಣಗಳು
ನಮ್ಮಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ದೇವಿರಿ ಎಂಬ ಹೆಸರಿಟ್ಟಿದ್ದ ಕಂಡಿದ್ದೆ. ಆದರೆ ಆ ಹೆಸರು ಹೇಗೆ ಬಂದಿರಬಹುದು ಅನ್ನೋ ಜ್ಞಾನ ಇರಲಿಲ್ಲ. ಹೆಸರುಗಳ ಹಿಂದೆ ಏನಾದರು ಒಂದು ಕಾರಣ, ವಿಶೇಷತೆ ಇರುತ್ತೆ ಅನ್ನೋ ಯೋಚನೆ ಮಾಡೋ ಶಕ್ತಿನೂ ಇರಲಿಲ್ಲ. ಇದು ನಾನು ಇಂಜಿನೀರಿಂಗ್ ಗೆ ಸೇರಿದಾಗ ಬದಲಾಯಿತು. ನನ್ನ ಗೆಳೆಯ ನವೀನನಿಂದ ದೇವಿರಮ್ಮ ದೇವಸ್ಥಾನ ಚಿಕ್ಕಮಗಳೂರಲ್ಲಿದೆ ಅಂತ ತಿಳೀತು. ಜೊತೆಗೆ ನನಗೆ ಆಶ್ಚರ್ಯ, “ಹುಡುಗಿಯರಿಗೆ ದೇವಿರಿ ಎಂಬ ಹೆಸರಿಡಲು, ದೇವರೇ...
-
ನನ್ನತನ
ನನ್ನ ಒಳ್ಳೆತನ, ನನ್ನ ಕೆಟ್ಟತನ, ಯಾರಿಗೂ ತಿಳಿಯದ ನಿಗೂಢ ಕಥನ! ಅನ್ಯರ ನೋವಲ್ಲಿ ನಾ ಭಾಗಿಯಲ್ಲ, ಅನ್ಯರ ನಗುವಲ್ಲಿ ನಾನಂತು ಇಲ್ಲ. ನನ್ನ ಒಳ್ಳೆತನ, ನನ್ನ ಕೆಟ್ಟತನ, ಯಾರಿಗೂ ತಿಳಿಯದ ನಿಗೂಢ ಕಥನ! ನನ್ನ ವಿಚಾರಗಳಲ್ಲಿ ನಾನು ಮಗ್ನ, ಅನ್ಯರ ಸನಿಹವೇ ನನ್ನ ಧ್ಯಾನಕ್ಕೆ ಭಗ್ನ. ಯಾರ ಜೊತೆಯಲೂ ಹೋಗದ ನಾನು ಜಗತ್ತಿಗೆ ಎಂದೂ ಒಬ್ಬಂಟಿ, ನನ್ನ ಒಳಗೆ ಇರುವ ನಾನು ಸದಾ ಕಾಲ ನನಗೆ ಜಂಟಿ. ಕೊಡುವುದರಲ್ಲೇ ಸುಖವಿದೆ,...
-
ವೈರಾಗಿ
ನಮ್ಮ ಮೇಲಿದ್ದ ಮೋಡಗಳೆಲ್ಲ ಚದುರಿ ಆ ಅಮಾವಾಸ್ಯೆಯ ಕಗ್ಗತ್ತಲಲ್ಲಿ ಚಂದ್ರನ ಬೆಳಕು ಕಂಡಂತಾಯಿತು. ನಮ್ಮ ಗುಂಪಿನ ಪ್ರಮುಖ ವೈರಾಗಿಯಾಗಿದ್ದ ಚೇತನನಿಗೆ ಯಾವಾಗಲೂ ಯಾವುದೋ ಭಾವನೆ ಆವರಿಸಿರುತ್ತದೆ. ಪ್ರತಿಯೊಂದು ಊರಿಗೆ, ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗಲೂ ಒಬ್ಬನೇ ಹೋಗಿ ಮರದ ನೆರಳಲ್ಲಿ, ಪೊದೆಯ ಮರೆಯಲ್ಲಿ, ಬೆಟ್ಟದ ತುದಿಯಲ್ಲಿ, ಜಲಪಾತದ ಅಡಿಯಲ್ಲಿ, ಊರ ಗಡಿಯಲ್ಲಿ ಸುಮ್ಮನೆ ಕೂತು ಹುಲ್ಲು, ಮಣ್ಣು, ದಿಗಂತ, ನೀರು, ಜಗತ್ತನ್ನು ನೋಡುವ ಚಟ. ಈ ಬಾರಿ ಆ ವೈರಾಗ್ಯ ನೆತ್ತಿಗೇರಿ...