ನನ್ನ ಒಳ್ಳೆತನ, ನನ್ನ ಕೆಟ್ಟತನ,
ಯಾರಿಗೂ ತಿಳಿಯದ ನಿಗೂಢ ಕಥನ!
ಅನ್ಯರ ನೋವಲ್ಲಿ ನಾ ಭಾಗಿಯಲ್ಲ,
ಅನ್ಯರ ನಗುವಲ್ಲಿ ನಾನಂತು ಇಲ್ಲ.
ನನ್ನ ಒಳ್ಳೆತನ, ನನ್ನ ಕೆಟ್ಟತನ,
ಯಾರಿಗೂ ತಿಳಿಯದ ನಿಗೂಢ ಕಥನ!

ನನ್ನ ವಿಚಾರಗಳಲ್ಲಿ ನಾನು ಮಗ್ನ,
ಅನ್ಯರ ಸನಿಹವೇ ನನ್ನ ಧ್ಯಾನಕ್ಕೆ ಭಗ್ನ.
ಯಾರ ಜೊತೆಯಲೂ ಹೋಗದ ನಾನು ಜಗತ್ತಿಗೆ ಎಂದೂ ಒಬ್ಬಂಟಿ,
ನನ್ನ ಒಳಗೆ ಇರುವ ನಾನು ಸದಾ ಕಾಲ ನನಗೆ ಜಂಟಿ.

ಕೊಡುವುದರಲ್ಲೇ ಸುಖವಿದೆ,
ಯಾರ ಪ್ರೀತಿಯೂ ನನಗೆ ಬೇಡ,
ಏಕಾಂತವೇ ಸ್ವರ್ಗ ನನಗೆ,
ಏಕಾಂಗಿಯಾಗಿಯೇ ನಾ ಇರುವೆ ನೋಡ.
ನನ್ನ ಒಳ್ಳೆತನ, ನನ್ನ ಕೆಟ್ಟತನ,
ಯಾರಿಗೂ ತಿಳಿಯದ ನಿಗೂಢ ಕಥನ!

- ಆದರ್ಶ