• ಗೆಳೆಯ

  ಸ್ನೇಹಕೆ ಸುಂದರ ನೆನಪುಗಳ ತಂದಿರುವೆ, ಕಾಣದ ಯಾವುದೋ ಊರಿಂದ. ಬಾಳಿಗೆ ಹೊಸ ರೂಪವ ನೀಡಿರುವೆ ನಿಷ್ಕಲ್ಮಶವಾದ ನಿನ್ನ ಸ್ನೇಹದಿಂದ. ಜೀವನದ ಪ್ರತಿ ಹಂತದಲಿ ನಾನಿರುವೆ, ಭವಿಷ್ಯದ ಭಯವನು ಬಿಟ್ಟುಬಿಡು, ಸುಮ್ಮನೆ ಏತಕೆ ಚಿಂತೆಯ ಮಾಡುವೆ, ಕೈ ಹಿಡಿದು ನನ್ನೊಡನೆ ಹೆಜ್ಜೆಯನಿಡು. ಕಣ್ಣೀರ ಹನಿಯು ಒಂಟಿಯಲ್ಲ, ಮನದಾಳದ ದನಿಯು ಒಂಟಿಯಲ್ಲ, ನಿನ್ನ ಕಣ್ಣೀರು ಹೊರಬಂದು ಬೀಳುವ ಮುನ್ನ, ನನ್ನ ಅಂಗಯ್ಯ ಆಸರೆಯು ದೊರೆಯುವುದು. ನಿನ್ನ ಮನದಾಳದ ದನಿಯು ಸೊರಗುವ ಮುನ್ನ, ನನ್ನೆದೆಯ...


 • ನಾ ಯಾರವ?

  ಯಾರವನು ನಾನು ಯಾರವನು? ಎಲ್ಲರೊಡನೆ ಇದ್ದರೂ ನಾ ಯಾರವನು? ಮನದಲ್ಲಿ ಗೊಂದಲ, ನಾ ಯಾರವನು? ಬದುಕಿಂದು ಚಂಚಲ, ನಾ ಯಾರವನು? ಆ ಕಡೆಯೂ ಇಲ್ಲ, ನಾ ಈ ಕಡೆಯೂ ಇಲ್ಲ, ನಡುವಲ್ಲಿ ನಿಂತಿರಲು ಏನೇನು ಇಲ್ಲ. ಯಾರವನು ನಾ ಯಾರವನು? ಯಾರೊಡನೆ ಇರದೇ ನಾ ಎಲ್ಲಿಹೆನು? ಒಂದೆಡೆ ಇದ್ದರೂ ಇನ್ನೊಂದರ ಚಿಂತೆ, ಎಲ್ಲೆಡೆ ಇರಲಾಗದ ಅಸಹಾಯಕನಂತೆ. ಯಾರವನು ನಾ ಯಾರವನು? ಎಲ್ಲಿಯೂ ಇರದ ನಾ ಎಲ್ಲಿಯವನು? - ಆದರ್ಶ


 • ಉಳಿದ ಭಾವನೆ

  ಮಾತನಾಡದೆ ಉಳಿದ ಭಾವನೆಗಳು ನೂರು, ವ್ಯಕ್ತಪಡಿಸದಂತೆ ನನ್ನ ತಡೆದು ಹಿಡಿದೋರು ಯಾರು? ಹರಿಯುವ ನದಿಗೆ ಒಡ್ಡನ್ನು ಯಾರೋ ಕಟ್ಟುವರು, ನನ್ನ ಮನವ ಹಿಡಿದು ಕಟ್ಟಿದ ಮೌನಕೆ ನಿನ್ನದೇ ಹೆಸರು. ಕಾಡದೆ ಉಳಿಯುವ ನೆನಪುಗಳು ನೂರು, ದಾರಿಯಲ್ಲಿಯೇ ಮರೆಯಾಗುವವು ಹರುಷಗಳ ಊರು. ಕನಸಲ್ಲಿ ನನ್ನ ಕಾಡುವ ಕಲ್ಪನೆಯೇ ನೀನು, ಸರಾಗವಾಗಿ ನಿನ್ನ ರೂಪವ ಸೃಷ್ಟಿಸಿದವನು ನಾನು. ನನ್ನ ದಾರಿಯಲ್ಲಿ ಈಗ ಭಾವನೆಗಳು ನೂರು, ಎಲ್ಲಕ್ಕೂ ನಿನ್ನಯ ಹೃದಯವೇ ತೇರು. ತಲುಪದೇ ಇರದೇ...


 • ಸಂಲಯನ ಮತ್ತು ವಿದಳನ

  ಸಂಲಯನ ಮತ್ತು ವಿದಳನ ಕೇವಲ ಜೀವಿಗಳ ನಡುವೆ ಅಲ್ಲದೆ, ಆಕಾಶ ಕಾಯಗಳಿಂದ ಹಿಡಿದು ಭೂಮಿಯ ಮೇಲಿನ ಮೂಲ ಧಾತುಗಳಲ್ಲೂ ಕಾಣಬಹುದು. ಇವುಗಳು ನಮಗೆ ‘ಪರಮಾಣು ಸಂಲಯನ’ ಮತ್ತು ‘ಪರಮಾಣು ವಿದಳನ’ ಕ್ರಿಯೆಗಳ ರೂಪದಲ್ಲಿ ಸಿಗುತ್ತವೆ. ಎರಡಕ್ಕಿಂತ ಹೆಚ್ಚು ಪರಮಾಣು ಬೀಜಗಳು ಅತೀ ಸಮೀಪಕ್ಕೆ ಬಂದು, ಅತೀ ಜವದಲ್ಲಿ ಅಪ್ಪಳಿಸಿದಾಗ ಹೊಸ ಪರಮಾಣು ಬೀಜವನ್ನು ಸೃಷ್ಟಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದ್ರವ್ಯವು ಸಂರಕ್ಷಿಸಲ್ಪಡದೇ ಸ್ವಲ್ಪ ಪ್ರಮಾಣದ ದ್ರವ್ಯವು ಬೆಳಕಟ್ಟು (ಫೋಟಾನ್) ಆಗಿ ಪರಿವರ್ತನೆಯಾಗುತ್ತದೆ,...


 • ನನ್ನ ಶೃತಿಯ ಶಾರದೆ

  ಮನಸ್ಸ ತೊರೆದು ಹೋದಳಿಂದು ನನ್ನ ಶೃತಿಯ ಶಾರದೆ, ನನದೇ ಕೈಯ್ಯ ಹಿಡಿತದಿಂದ ಶಾಂತಿ ಹಾರಿತು ಮರಳದೆ. ಏಕೋ ಸಾಗಿದೆ ನನ್ನ ಪಯಣ ಇನ್ನೂ ಈಗ ನಿಲ್ಲದೆ, ಹೃದಯ ರಾಗದಿ ಕಾಣುತಿಲ್ಲ ಈಗ ನನ್ನ ಶೃತಿಯ ಶಾರದೆ. ರಾಗ - ತಾಳ - ಪದ ಸೇರಬೇಕು ಮೂಡಲು ಸುಂದರ ಹಾಡೊಂದು, ಮೂರಲಿ ಯಾವೊಂದು ಇರದೆ ಹಾಡಲಿ ಸೊಗಸೇ ಇರದು. ಉಳಿಯಬಾರದೆ ದೂರ ಹೋಗದೆ, ಓ ನನ್ನ ಶೃತಿಯ ಶಾರದೆ; ಬಾಳ ಹಾಡಲಿ...