ಬಂದು ಹೋಗೊ ಬಂಧಗಳಲ್ಲಿ ಯಾವುದು ಚರ? ಯಾವುದು ಸ್ಥಿರ?
ಜೊತೆಯಾಗಿ ಸದಾ ಬಳಿಯಿರಲು ನೀನು, ಇನ್ನು ಮುಂದೆ ಎಲ್ಲವೂ ಮಧುರ.

ಬಂದು ಹೋಗೊ ಬಯಕೆಗಳಲ್ಲಿ ಯಾವುದು ಕೆಡಕು? ಯಾವುದು ಒಳಿತು?
ಇನ್ನಾವ ಆಸೆಯೂ ಬೇಡ ನನಗೆ, ನೀನೆ ಬೇಕೆಂಬ ಯೋಚನೆಯ ಹೊರತು.

ಬದಲಾಗುವ ಬಾಳಿನಲ್ಲಿ ಯಾವುದು ಚರ? ಯಾವುದು ಸ್ಥಿರ?
ಬದಲಾಗದಿರಲಿ ನಮ್ಮ ಒಲವು, ಇನ್ನು ಮುಂದೆ ಎಲ್ಲವೂ ಮಧುರ.

- ಆದರ್ಶ