ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಬೇಸಿಗೆ
ಮತ್ತೆ ಬಂದಿದೆ ಬೇಸಿಗೆ, ನಮ್ಮ ಬಾಳ ಹೊಸಿಲಿಗೆ, ಹಸಿರು ಹುಲ್ಲು ಒಣಗಿ, ಹಳದಿ ಬಣ್ಣಕೆ ತಿರುಗಿ, ಮರದ ಎಲೆಗಳು ಉದುರಿ, ಹೊಸ ಜೀವಗಳು ಚಿಗುರಿ, ಮೆರಿತಿದ್ದ ಚಳಿಗೆ, ಬಿರುಸು ಮುಟ್ಟಿಸುತಾ ಹೊರಟು ಬಂದಿದೆ ಬೇಸಿಗೆ. ಹೊಲ ಗದ್ದೆಗಳಲಿ ಕೆಲಸವಿಲ್ಲ, ಏನು ಮಾಡುವುದೊ ಬದುಕಿಗೆ? ಯಕ್ಷಗಾನ, ಬಯಲಾಟ, ನಾಟಕ ತಿರುಗಾಟ ತಂದಿತು ತನ್ನೊಡನೆ ಬೇಸಿಗೆ. ಮುದುಡಿ ಮಲಗುವ ಕಾಲವಲ್ಲ, ಮಕ್ಕಳು ಇಳಿವರು ಬೀದಿಗೆ, ಒಂದಾದಮೇಲೊಂದು ಆಟದ ಹರಕೆ, ನಿಜ ಮಾಡುತ ಬಂದಿತು...
-
ನನ್ನ ಓಲೆ
ಸಾಗರದಲೆಗಳ ಮೇಲೆ ತೇಲಿಬಂದು ತಲುಪಿದೆ ನನ್ನ ಓಲೆ, ಮಿತಿಮೀರಿ ನಿಂತಿದೆ ಇಂದು, ಮನದ ಬಯಕೆಗಳ ಲೀಲೆ, ಹಾದಿಗೊಂದು ತಿರುವಿದೆ, ನಿಂತು ನೋಡುವ ಇಂದು, ದೂರದೂರಲಿ ನಿಂತು ಕರೆದಿದೆ ಬದುಕ ಗುರಿಯ ಬಿಂದು. ಎಂದೋ ಹುಟ್ಟಿಕೊಂಡಿತು ಎಲ್ಲವ ಮೀರುವ ನಿಲುವು, ಹೊಸ ದಾರಿಯ ಹುಡುಕಿ ಕೊಟ್ಟಿದೆ, ಬದುಕ ನಿತ್ಯ ತಿರುವು. ನಾಳೆಯ ಬಯಕೆಯಲಿ ಆಚರಿಸುವೆ ನಾನು ಈ ದಿನದ ಹಬ್ಬ, ನಿತ್ಯ ಜೀವನದ ಹೋರಾಟದಲಿ ಗೆಲ್ಲುವ ತವಕದಲಿ ನಾನು ಒಬ್ಬ. ನಿತ್ಯದ...
-
ಇದು ನಿಜವಾದ ಕಥೆ
ಬಾತ್ರೂಮಿನಲ್ಲಿ ಕೂತಿದ್ದಾಗ ಅವನಿಗೆ ಒಂದು ಪ್ರಶ್ನೆ ಕಾಡೋಕೆ ಶುರು ಆಯ್ತು.. ಅಷ್ಟಕ್ಕೂ ಯಾರಿಗೋಸ್ಕರ ನಾನು ಬದುಕಿರ್ಬೇಕು.. ಯಾರು ನಿಜವಾಗಲೂ ನನ್ನ ಪ್ರೀತಿಸ್ತಾ ಇದ್ದಾರೆ.. ನಾನ್ ಬದ್ಕೋದು ಯಾರಿಗೆ ಬೇಕು ಎಂದು.. ಮೊನ್ನೆ ಮೊನ್ನೆ ಕೆಲ್ಸ ಸಿಗೋವರ್ಗೂ ಬರೇ ಮನೆಯಲ್ಲಲ್ಲ.. ಬೀದಿ ತುಂಬಾ ಅಪ್ಪ ಅಮ್ಮ ಓಡಾಡಿಸಿಕೊಂಡು ಹೊಡೆದಿದ್ದರು. ತಿಂಗಳ ಸಂಬಳ ಅನ್ನೋದೊಂದು ಬರೋವರೆಗೂ ತಂಗಳೇ ಗಟ್ಟಿಯಾಗಿತ್ತು. ಈಗ ಒಮ್ಮೆಲೇ "ನಿನ್ನನ್ನು ಸಾಕಿ ದೊಡ್ಡವನಾಗಿ ಮಾಡಲು ನಾವು ಸಾಲ ಗೀಲ ಮಾಡಿ...
-
ಯುದ್ಧ ನೆಲೆ
ಕಾಡುವ ನಿನ್ನ ಕಣ್ಣುಗಳ ಕಡುಗಪ್ಪು ಕತ್ತಲೆ, ನನ್ನ ಮನದ ಆಂತರ್ಯದ ನಿತ್ಯ ಯುದ್ಧ ನೆಲೆ; ನಿನ್ನ ಗೆಳೆತನವೇ ಈಗ ನನ್ನ ಜೀವನದ ನೌಕೆ, ನಿನ್ನ ಸೇರಿದಾಗ ಮುಗಿಲಿಗೆ ಹಾರಿಸುವೆ ನನ್ನ ಯುದ್ಧ ಪತಾಕೆ. ನಿನ್ನ ಮುಂದೆ ಮಂಡಿಯೂರಿ ಕುಳಿತ ನನ್ನ ಭಾವನೆಗಳೆಲ್ಲ ಈ ದಿನ ಬೆತ್ತಲೆ, ಹುಚ್ಚೆದ್ದು ಕುಣಿಯುವೆನು ನಾನು, ಎದುರುಬದುರಿಗೆ ನೀನು ಬರುತ್ತಲೆ; ಎದುರೇ ನಿಲ್ಲುವೆನು ಈಗ ಇಡೀ ಜಗತ್ತು ಒಟ್ಟಾಗಿ ಬರಲಿ, ನಿನಗಾಗಿ ಗೆಳತಿ ಹೇಳಿಬಿಡುವೆನು, ಊರಲ್ಲಿ...
-
ಎಡಬಿಡಂಗಿ ಜೀವನ
ದೊಡ್ಡೋರ ಮಾತ ನಾವು ಕೇಳಂಗಿಲ್ಲ, ನಮ್ಮ ಮಾತು ಕೂಡ ನಮಗಾಗಲ್ಲ; ಹಂಗೊ ಹಿಂಗೊ ನಮ್ಮದೊಂದು ಗಾಯನ, ನಡೆದುಕೊಂಡು ಸಾಗಿದೆ ಈ ಎಡಬಿಡಂಗಿ ಜೀವನ. ಸೂರ್ಯ ಮುಳುಗ್ತಾನೆ, ಚಂದ್ರ ಹುಟ್ತಾನೆ, ಆ ನಡುವೆ ನಡೆಯುತ್ತೆ ನಮ್ಮ ಹುಚ್ಚು ಕುಣಿತ; ಒಂದಕ್ಕೆ ಒಂದು ಕೂಡಲ್ಲ, ಒಬ್ಬರ ಜೊತೆಗೂ ಸೇರಲ್ಲ, ಹಿಂಗೈತೆ ನಮ್ಮ ಬಾಳ ಗಣಿತ. ಸೊಟ್ಟಗಿರೋದೆಲ್ಲ ನೆಟ್ಟಗೆ, ನೆಟ್ಟಗಿರೋದೆಲ್ಲ ಸೊಟ್ಟಗೆ, ಎಡಬಿಡಂಗಿ ನಮ್ಮ ಅಂತಃಕರಣ; ಯಾರೋ ಹಾಕಿಕೊಟ್ಟ ದಾರಿ ಸವಿ ಅಲ್ಲ ನಮಗೆ,...