• ಬಯ್ಯೋದಿದ್ರೆ ಅಚ್ಚಕನ್ನಡದಲ್ಲೇ ಬಯ್ದುಬಿಡ್ರಿ…!

    ಇಲ್ಲಿರುವ ಮೂರು ಕಥೆಗಳಿಗೆ ನನ್ನ ಥರಾನೇ ತಲೆ, ಬುಡ ಎರಡೂ ಇಲ್ಲ. ಆದರೂ ನೀವೊಮ್ಮೆ ಓದಬಹುದು. ಅಕಸ್ಮಾತ್ ಓದಿ ನನ್ನನ್ನ ಬೈಬೇಕೆನಿಸಿದರೆ ಅಚ್ಚಕನ್ನಡದಲ್ಲಿ ಬೈದುಬಿಡಿ. ಅಲ್ಲೆಲ್ಲೋ ಅವನ ಫೋನು ನಂಬರ್ ಅವಳ ಕಣ್ಣಿಗೆ ಬಿತ್ತು. ಆಶ್ಚರ್ಯ ಅಂದ್ರೆ ಆ ನಂಬರ್ ನೋಡಿದ ಕೂಡಲೇ ಅವಳಿಗೆ ಅವನ ಮೇಲೆ ಪ್ರೀತಿ ಆಗೋಗತ್ತೆ. ಅವಳು ಅವನಿಗೆ ಫೋನ್ ಮಾಡಿ “ನಿಮ್ಮ ಫೋನ್ ನಂಬರ್ ನೋಡಿದ ಕೂಡಲೇ ನನಗೆ ನಿಮ್ಮ ಮೇಲೆ ಪ್ರೀತಿ ಆಗೋಯ್ತು,...


  • ಹಸಿವು ಹಾಗು ಸಭ್ಯಸ್ಥರು

    ಮೊನ್ನೆ ಹೀಗೆ ಒಂದು ಸಣ್ಣ ಮಟ್ಟದ ಕಂಪನಿಯ ಅದಕ್ಕಿಂತ ದೊಡ್ಡ ಮಟ್ಟದ ಕಂಪನಿಯು ಸಾಕಷ್ಟು ಹಣ ನೀಡಿ ಕೊಂಡಿತ್ತು, ಕೊಂಡದ್ದಕ್ಕೆ ದೊಡ್ಡ ಕಂಪನಿಯು ಸುಮ್ಮನಿರಲಾದೀತೆ? ತನ್ನ ಶಕ್ತಿ ಪ್ರದರ್ಶನವನ್ನು ತನ್ನ ಅಂತಸ್ತಿನ ಮಟ್ಟಕ್ಕೆ ನಡೆಸಿತು! ಸಣ್ಣ ಕಂಪನಿಯ ಹೆಸರನ್ನ ಇತಿಹಾಸದ ಪುಟಗಳಿಂದ ಅಳಿಸೋಕೆ ಬೇಕಾದ ಎಲ್ಲ ಭರ್ಜರಿ ತಯಾರಿಯನ್ನು ನಡೆಸಿ, ಸಣ್ಣ ಕಂಪನಿಯ ಹೊಸಕಿದ ಸಂತಸಕ್ಕೆ ತನ್ನ ಕಂಪನಿ ಹಾಗು ತನ್ನ ಹೊಸದಾಗಿ ಕೊಂಡ ಸಣ್ಣ ಕಂಪನಿ, ಎಲ್ಲ ಜನರ...


  • ಕಡೆ ಸಾಲಿನ ಹುಡುಗರು

    ಕಡೆ ಸಾಲಿನ ಹುಡುಗರು ಯಾವ್ದಕ್ಕು ನಡುಗರು ಊರ್ ಮೇಲೆ ಊರ್ ಬಿದ್ರು ತಲೆ ಕೆಡಿಸಿಕೊಳ್ಳರು; ಕಡೆ ಸಾಲಿನ ಹುಡುಗರು ಪಾಠಾನೇ ಕೇಳರು ಆದ್ರೂನು ಎಕ್ಸಾಮಲ್ ಹಾಳೆ ತುಂಬ ಬರೆವರು; ಕಡೆ ಸಾಲಿನ ಹುಡುಗರು ತುಂಬಾನೆ ಮುಗ್ಧರು ಆದ್ರೂನು ಮಾತಲ್ಲಿ ಸಂಸ್ಕೃತಾನೇ ಬಳಸುವರು; ಕಡೆ ಸಾಲಿನ ಹುಡುಗರು ಕೊನೆಯಲ್ಲೇ ಕೂತರೂ ಬಾಳಲ್ಲಿ ಮುಂದೊಮ್ಮೆ ಉದ್ಧಾರ ಆಗುವರು! - ಆದರ್ಶ


  • ಸೋಲು ಗೆಲುವು

    ಸೋಲು ಗೆಲುವಿನ ನಡುವೆ ಈ ಪ್ರಪಂಚದ ಸುತ್ತ ಒಂದು ಸಣ್ಣ ಪಯಣ. ಮನುಷ್ಯ ಉಗಮವಾದಾಗಿನಿಂದಲೂ ಪ್ರತಿ ಹಂತ ಹಂತದಲ್ಲೂ ಈ ಎರಡು ಮುಖಗಳ ಮಧ್ಯೆ ಜೀವಿಸುತ್ತಾನೆ. ಇವೆರಡು ಪದಗಳು ಯುಗ ಯುಗಾಂತರಗಳಿಂದ ಬಂದಿರುವಂತದ್ದು ನಿಜವೆ. ತ್ರೇತ್ರಾಯುಗದಲ್ಲಿ ರಾಮ ರಾವಣನ ನಡುವೆ,ದ್ವಾಪರಯುಗದಲ್ಲಿ ಪಾಂಡವ ಕೌರವರ ನಡುವೆ, ಇನ್ನು ಕಲಿ ಯುಗದಲ್ಲಿ ಸಾವಿರಾರು ಮಂದಿಗಳ ನಡುವೆ ಅಟ-ಪರಿಪಾಟ ನಡೆದಿತ್ತು. ಹಾಗಾದರೆ ಗೆದ್ದವರ ಪ್ರಾಣ ಉಳಿಯಿತೆ,ಸೋತವರ ಪ್ರಾಣ ಚಿಗುರಿತೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದರೂ...


  • ಶ್ರೀ ಚೊಂಬೇಶ್ವರ ಕೃಪೆ

    ಪಿಯುಸಿ ಫಲಿತಾಂಶ ಬಂದ ದಿನಗಳವು. ಎರಡು ವಿಷಯ ಫೇಲ್ ಆಗಿತ್ತು. ಆ ಹಳ್ಳಿಯಲ್ಲಿ ಫೇಲ್ ಆದರೆ, ಪಾಸ್ ಆದೊರಿಗಿಂತ ಫೇಲ್ ಅದವರೇ ಹೆಚ್ಚು ಪ್ರಸಿದ್ಧ ಆಗ್ತಿದ್ರು. ನಮ್ಮ ಮನೆಯವರಿಗೆ, ಅಕ್ಕ ಪಕ್ಕದ ಮನೆಯವರಿಗೆಲ್ಲ ತಲೆಬಿಸಿ, ನಾನು ಫೇಲ್ ಆಗಿದ್ದಕ್ಕೆ. ಆದರೆ ನನಗೆ ಆಶ್ಚರ್ಯ. ಎರಡು ಫೇಲ್ ಹೇಗಾಯ್ತು ಅಂತ ಅಲ್ಲ, ಮಿಕ್ಕ ನಾಲಕ್ಕು ಪಾಸ್ ಹೇಗಾಯ್ತು ಅಂತ!!! ಫೇಲ್ ಆಗಿ ತಣ್ಣಗೆ ಮನೆಯಲ್ಲಿ ಕೂತಿದ್ದೆ. ಪಕ್ಕದ ಮನೆಯ ಅಂಕಲ್, ಅವರ...