ಗುರಿ ಸೇರುವ ತವಕದಲಿ ಗೋರಿ ಕಟ್ಟಿಕೊಂಡಿರುವವರು ನಾವು,
ಗುರಿಯು ಕೂಡ ಸತ್ತು ಬಿದ್ದಿದೆ ಪಕ್ಕದ ಗುಂಡಿಯಲಿ,
ಮಣ್ಣು ಹಾಕೋನು ದೇವರು.

– ದೀಪಕ್ ಬಸ್ರೂರುಮರೆಯಬೇಕೆಂದರೂ ಮರೆಯಲಾಗದ ನಿನ್ನ ನೆನಪು ಬಿಡದೆ ಕಾಡಿದೆ ಎನ್ನ,
ಭಾವನೆಗಳ ಆರ್ಭಟಕೆ ಸಿಲುಕಿ ನಲುಗಿಹೆನು ನಾನು,
ಮತ್ತೆಂದೂ ಸಿಗದಿರು ಬಾಳ ಪಯಣದಲಿ,
ಮುಗಿಸುವಾಮುನ್ನ ಈ ನನ್ನ ಪಯಣಗಳಲ್ಲಿ.
ನಿನ್ನ ಜೊತೆಗೆ ಪಯಣ ಸೇರಿದ ದಾರಿ ಇಂದು ಮೋಹಕ,
ನಿನ್ನ ನೆನಪ ನಾನು ಸೇರಿ ಬದುಕು ಇನ್ನು ಭಾವುಕ!

-ಆದರ್ಶ