ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಬದುಕು
ಎಲ್ಲಿ ಕಳೆದು ಹೋದೆಯೇ ಬದುಕೆ, ಹುಡುಕುತಿರುವೆ ನಿನ್ನ,. ಕರುಣೆ ತೋರು ಬಾ, ಮತ್ತೆ ಬಿಗಿದಪ್ಪು ನನ್ನ. ಸುತ್ತಲಿರುವ ಗಾಳಿಯಂಗೆ ಇದ್ದರೂ ಸಿಗಲಾರೆ, ಹಿಡಿಯಲಿ ಹೇಗೆ ನಿನ್ನ, ಸರಿದಿರುವೆ ಈ ಕೈಯ್ಯಾರೆ. ಕನಸಂತೆ ನೀನು, ನನಸಾಗು ಬೇಗ, ಅರಿವಿಗೆ ಬರಬೇಕು, ತೆರೆದು ಹಾಕಿರುವ ಬೀಗ. ಎಲ್ಲಿ ಉಳಿದು ಹೋದೆಯೇ ಬದುಕೆ, ಬಂದ ಹಾದಿಯಲ್ಲಿ ನಿನ್ನ ಹುಡುಕಬೇಕೆ? ಅಲೆಸಬೇಡ ನನ್ನ ಮುಗಿಯದ ಬಯಲಲ್ಲಿ, ಬೇಗ ಮಳೆ ಸುರಿಸು ಅಂತರಂಗದಲ್ಲಿ. ಮತ್ತೆ ಬದುಕಬೇಕಿದೆ ಈಗ,...
-
ನಾವು ಗೆಲ್ಲಬೇಕು
ನಡುವಲ್ಲಿ ಒಂದು ಸುಡುಗಾಲ ಬೇಕು! ಬರಗಾಲವೂ ನಮಗೆ ಯುಗಾದಿಯಾಗಬೇಕು. ಕೋಟಿ ಯುಗ ಸೋತಿರುವಲ್ಲಿ ನಾವು ಗೆಲ್ಲಬೇಕು! ಜೀವನದಿ ದಾರಿ ಕವಲೊಡೆದೇ ಸಾಗಬೇಕು ಬರೆದಾಗ ಸ್ನೇಹಗೀತೆಯ ಸ್ವರ್ಣಾಕ್ಷರದಲ್ಲೇ ಇರಬೇಕು. ಕೋಟಿ ಜನ ಬೇರೆಯಾದಲ್ಲಿ ನಾವು ಸೇರಬೇಕು! ಭಿನ್ನತೆ ಏನೇ ಇರಲಿ ಹಗಲು ಇರುಳು ಬೇಕು ಕೊರತೆ ಏನೇ ಇರಲಿ ಒಬ್ಬರಿಗೊಬ್ಬರು ಇರಬೇಕು. ಕೋಟಿ ಯೋಚನೆ ಸೋತಿರುವಲ್ಲಿ ನಾವು ಗೆಲ್ಲಬೇಕು! - ಆದರ್ಶ
-
ಉರಿ
ಬೆಂಕಿಯಿದ್ದಾಗ ಉರಿದುಬಿಡು, ಆರಿದಾಗ ತಣ್ಣಗಿರೋದಿದೆ, ರಭಸವಿದ್ದಾಗ ಹರಿದುಬಿಡು, ಸೆಳೆತ ಕಳೆದಮೇಲೆ ನಿಲ್ಲೋದಿದೆ. ಜಿಗಿದಾಡು, ಒದ್ದಾಡು ಮಣಿಯಲೇಬೇಕು, ಮೆರೆದಾಡು, ಸುಮ್ಮನಿರು, ಅಳಿಯಲೇಬೇಕು. ಒದ್ದಾಡಿ, ಜಿಗಿದಾಡಿ ಮಣಿಬೇಕು ಎಂದಾಗ, ಜಿಗಿದಾಡೇ ಮಣಿಯುವ. ಮೆರೆದಾಡಿದರೂ, ಸುಮ್ಮನಿದ್ದುರೂ ಅಳಿಯಬೇಕು ಎಂದಾಗ, ಮೆರೆದಾಡೇ ಅಳಿಯುವ. ನೇಸರ ಹೊತ್ತಿ ಉರಿದರೂ ಕೊನೆಗೆ ತಂಪು, ಭೂಮಿ ಬಿರುಕಿ ಸಿಡಿದರೂ ಕೊನೆಗೆ ಸಂಪು, ಆಳಾಗು ಅರಸನಾಗು, ಮಣ್ಣಾಗೋದಿದೆ, ಹೊತ್ತಿ ಉರಿದೇಬಿಡು ಇರುವಾಗ, ಏನಿಲ್ಲ ತಪ್ಪು. ಒಳಗೆ ಕಿಡಿ ಇದ್ದಾಗ ಹೊತ್ತಿಕೊಂಡುಬಿಡು. ಎಲ್ಲ...
-
ಹುಡುಕಿ
ಯಾರಾದ್ರು ಹುಡುಕೊಡ್ರಿ, ಎಲ್ಲೋದ್ನೊ ಗೊತ್ತಿಲ್ಲ. ಒಳಗೆಲ್ಲೇ ನೋಡಿರೂ ನಾ ಕೈಗೆ ಸಿಗ್ತಿಲ್ಲ, ಟೈಮೊಂದು ೪೨೦ ಎದ್ದೆದ್ದು ಓಡತೈತೆ, ತಿರುತಿರುಗಿ ನೋಡಿದರೂ ಅಟ್ಟಿಸಿ ಬರತೈತೆ. ಯಾರಾದ್ರೂ ಹೊಡುಕಿಕೊಡ್ರಿ, ನೆರಳೆಲ್ಲೂ ಕಂಡಿಲ್ಲ. ಬಿಸಿಲಾಗೆ ಅಲಿದಾಟ ಇನ್ನೂ ಯಾಕೊ ನಿಂತಿಲ್ಲ. ಊರೊಂದು ಕಾಣದು, ಸುತ್ತೆಲ್ಲ ಬಯಲು, ಎತ್ತೆತ್ತ ನೋಡಿದರೂ ಕಣ್ಣಿಗೆ ಅಮಲು. ಯಾರಾದ್ರು ಹುಡುಕಿಕೊಡ್ರಿ, ಎಲ್ಲಿದ್ದೀನೊ ಗೊತ್ತಿಲ್ಲ. ಹೊರಗೆಲ್ಲಿ ನೋಡಿರೂ ನಾನೇ ಕಾಣ್ತಿಲ್ಲ. ಹೊತ್ತಿದು ಸಿಲುಕಿದೆ, ತನ್ನದೆ ಸುಳಿಯಲ್ಲಿ, ಬದುಕೊಂದು ಬಯಲಾಟ, ನನ್ನದೆ ಕೈಯ್ಯಲ್ಲಿ....
-
ರಕ್ಕಸ
ಒಳಗೊಬ್ಬ ರಕ್ಕಸ ಬಿಗಿಹಿಡಿದು ಕುಳಿತಾನೆ, ಕಾಡೊಳಗೆ ಕುಳಿತಂಗೆ ಗಂಡಾನೆ ನನ್ನೊಳಗೆ, ಸಿಟ್ಟೆಲ್ಲ ಹಿಡಿದಿರುವೆ ನಾನೆ. ಮಳೆ ತುಂಬಿ ಮೋಡ ಕರಗದೆ ನಿಂತಂಗೆ, ಹೊಳೆ ತುಂಬಿದರೂ ನುಗ್ಗಿ ಹರಿಯದಂಗೆ ನನ್ನ, ಭಾವನೆಯಲ್ಲ ಕಟ್ಟಿಟ್ಟ ಸೋಗೆ. ಒಳಗೊಬ್ಬ ರಕ್ಕಸ ಕುಣಿದಾಡುತಾನೆ ತಲೆಮೇಲೆ ಕುಂತಂಗೆ ರುದ್ರ ಇನ್ನು, ಹೊಲದೊಳಗೆ ನುಗ್ಗಲು ಕಾದಂಗೆ ಮದ್ದಾನೆ. - ಆದರ್ಶ