• ಹುಟ್ಟಿದ ಊರು

    ಸಾಮಾನ್ಯವಾಗಿ ಆಗ ಎಲ್ಲರ ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಒಂದೊಂದು ಸೈಕಲ್ ಕೊಡಿಸಲು ಅಷ್ಟಾಗಿ ಅನುಕೂಲವಿರದ ಕಾಲವಾಗಿತ್ತು. ಆದರೂ ಮಕ್ಕಳಿಗೆ ಸೈಕಲ್ ತುಳಿವುದ ಕಲಿಸಲು ಹೆತ್ತವರು ಬಾಡಿಗೆ ಸೈಕಲ್ ಕೊಂಡು ಹೇಳಿಕೊಡುತ್ತಿದ್ದರು. ಒಂದು ಘಂಟೆಯ ಬಾಡಿಗೆ ಒಂದು ಸೈಕಲ್ ಗೆ ೪-೫ ರೂ ಇದ್ದ ಕಾಲ. ಒಂದು ಘಂಟೆಗೆ ಸೈಕಲ್ ಸಿಕ್ಕರೆ ಮಕ್ಕಳಿಗೆ ಒಂದು ಘಂಟೆಯ ಕಾಲ ಸ್ವರ್ಗಕ್ಕೆ ಕಳಿಸಿಕೊಟ್ಟರೇನೋ ಎನ್ನುವಷ್ಟು ಸಂತಸ. ಹೆಚ್ಚಾಗಿ ಅಂದವಿಲ್ಲದ ಬಾಡಿಗೆ ಸೈಕಲ್ ಗಳಲ್ಲಿ ಅನೇಕ...


  • ತಿಳಿ ನೀಲಿ ಆಗಸ

    ಎಲ್ಲರೂ ಇದ್ದು ಒಂಟಿಯಾಗುವ ಚಂದಕೆ ಬಂಧಗಳನು ಬೆಳೆಸಬೇಕೆ ನನ್ನೊಡನೇಯೆ ಬಾಳುವ ನನಗೆ ಈಗ ಒಂಟಿಯಾಗುವ ಬಯಕೆ, ತಿಳಿನೀಲಿ ಆಗಸದಿ ಹಾರುವ ಒಂಟಿ ಹಕ್ಕಿಯಂತೆ ಈಗ ನಾನು ನನ್ನೆತ್ತರಕೆ ತಾನು ಹಾರಲಾಗದೆಂದು ಸುಮ್ಮನೆ ತೇಲಾಡುತಿದೆ ಬಾನು, ಕೈ ಚಾಚಿ ನಿಂತ ಜನರಿಗೆ ನಾನು ಸಿಗಲಾರದ ದಿಗಂತ ನನ್ನನೇ ದೂಡುತ ಸೇರಿರುವೇ ಈಗ ಯಾರಿಗೂ ಸಿಗದ ಹಂತ, ತಿಳಿನೀಲಿ ಆಗಸದಿ ಹಾರುತಿರುವ ಹಕ್ಕಿ ಈಗ ನಾನು ಯಾರ ಕೈಗೂ ಸಿಗದಂತೆ ಹಾರಾಡುವೆನು! –...


  • ಮರೆತ ಕನಸು

    ಯಾರ ದಾರಿಯ ಹೆಜ್ಜೆ ಗುರುತಿದು ನಾನು ನೋಡುತ ಸಾಗಿರುವೆ ನನ್ನ ಹೆಜ್ಜೆಯ ಪಥವೆ ಇಂದು ನನಗೆ ತಿಳಿಯದೆ ಬದಲಾಗಿವೆ, ದಾರಿಯ ಕೊರೆಯುತ ಸಾಗುವ ಧೈರ್ಯವು ಎತ್ತ ಹೋಯಿತೋ ಏನೊ ಕಾಣದೂರಿನ ಕನಸ ಕಾಣುವ ಇಂಗಿತವೀಗ ಇಲ್ಲವಾಯಿತೇನು, ಅನ್ಯರು ತೋರುವ ಹಾದಿಯಲ್ಲಿ ಇಂದು ಬಾರದಾಗಿದೆ ಸೊಗಸು ಮತ್ತೆ ಇಂದು ನೆನಪಾಗಿದೆ ನನಗೆ ನಾ ಎಂದೋ ಕಂಡ ಕನಸು! -ಆದರ್ಶ


  • ಮೂರು ಮುತ್ತುಗಳು

    ಗುರಿ ಸೇರುವ ತವಕದಲಿ ಗೋರಿ ಕಟ್ಟಿಕೊಂಡಿರುವವರು ನಾವು, ಗುರಿಯು ಕೂಡ ಸತ್ತು ಬಿದ್ದಿದೆ ಪಕ್ಕದ ಗುಂಡಿಯಲಿ, ಮಣ್ಣು ಹಾಕೋನು ದೇವರು. – ದೀಪಕ್ ಬಸ್ರೂರು ಮರೆಯಬೇಕೆಂದರೂ ಮರೆಯಲಾಗದ ನಿನ್ನ ನೆನಪು ಬಿಡದೆ ಕಾಡಿದೆ ಎನ್ನ, ಭಾವನೆಗಳ ಆರ್ಭಟಕೆ ಸಿಲುಕಿ ನಲುಗಿಹೆನು ನಾನು, ಮತ್ತೆಂದೂ ಸಿಗದಿರು ಬಾಳ ಪಯಣದಲಿ, ಮುಗಿಸುವಾಮುನ್ನ ಈ ನನ್ನ ಪಯಣಗಳಲ್ಲಿ. ನಿನ್ನ ಜೊತೆಗೆ ಪಯಣ ಸೇರಿದ ದಾರಿ ಇಂದು ಮೋಹಕ, ನಿನ್ನ ನೆನಪ ನಾನು ಸೇರಿ ಬದುಕು...


  • ಬಯ್ಯೋದಿದ್ರೆ ಅಚ್ಚಕನ್ನಡದಲ್ಲೇ ಬಯ್ದುಬಿಡ್ರಿ…!

    ಇಲ್ಲಿರುವ ಮೂರು ಕಥೆಗಳಿಗೆ ನನ್ನ ಥರಾನೇ ತಲೆ, ಬುಡ ಎರಡೂ ಇಲ್ಲ. ಆದರೂ ನೀವೊಮ್ಮೆ ಓದಬಹುದು. ಅಕಸ್ಮಾತ್ ಓದಿ ನನ್ನನ್ನ ಬೈಬೇಕೆನಿಸಿದರೆ ಅಚ್ಚಕನ್ನಡದಲ್ಲಿ ಬೈದುಬಿಡಿ. ಅಲ್ಲೆಲ್ಲೋ ಅವನ ಫೋನು ನಂಬರ್ ಅವಳ ಕಣ್ಣಿಗೆ ಬಿತ್ತು. ಆಶ್ಚರ್ಯ ಅಂದ್ರೆ ಆ ನಂಬರ್ ನೋಡಿದ ಕೂಡಲೇ ಅವಳಿಗೆ ಅವನ ಮೇಲೆ ಪ್ರೀತಿ ಆಗೋಗತ್ತೆ. ಅವಳು ಅವನಿಗೆ ಫೋನ್ ಮಾಡಿ “ನಿಮ್ಮ ಫೋನ್ ನಂಬರ್ ನೋಡಿದ ಕೂಡಲೇ ನನಗೆ ನಿಮ್ಮ ಮೇಲೆ ಪ್ರೀತಿ ಆಗೋಯ್ತು,...