• ಗುಂಪು ಘರ್ಷಣೆ

    ನನ್ನ ಅವಳ ನಡುವೆ ಸಂದಿ ಸಂದಿಗಳಲ್ಲಿ ಗುಂಪುಘರ್ಷಣೆ, ಅನುದಿನವು ಅವಳ ಮೇಲೆ ಹೆಚ್ಚುತ್ತಿದೆ ಆಕರ್ಷಣೆ. ತೆಕ್ಕೆಗೆ ಬಿದ್ದಿದೆ ಈಗ ನೀ ಕೊಟ್ಟ ಒಲವು, ತೋಳಲ್ಲಿ ಹಿಡಿದಾಗ ನಿನ್ನನ್ನ ಮಾಯವಾಯ್ತು ದಣಿವು. ನನ್ನ ಸ್ವರಕೆ ಅವಳ ಸ್ವರ ಸೇರಿದಾಗ ನಮ್ಮ ಗುಣಗಳ ಲೋಪ ಸಂಧಿ, ನನ್ನ ಪ್ರೇಮಕೆ ಅವಳೊಪ್ಪಿಗೆಯು ಸೇರಿದಾಗ ಹೊರಡುವುದು ನಮ್ಮ ಆದೇಶ ಸಂಧಿ; ನನ್ನ ಮನೆಯ ಹೊಸಿಲ ಅವಳು ತುಳಿಯುವ ಘಳಿಗೆಗೆ ನಮ್ಮ ಆಗಮ ಸಂಧಿ, ಅಲ್ಲಿಂದ ಎಂದಿಗೂ...


  • ಬಯಕೆ

    ನಾವಿಲ್ಲಿಗೆ ಬರೋದೆ ಹೋಗೋಕೆ, ಮತ್ತ್ಯಾಕೆ ನಮಗಿಲ್ಲಿನ ಸಾವಿರಾರು ಬಯಕೆ; ಯೋಚನೆಗಳಿಗಿಲ್ಲಿ ಇಲ್ಲ ಯಾವುದೇ ಅಂಕೆ, ನಡೆದು ಹೋಗುವ ದಾರಿಯಲ್ಲಿ ನಮಗೆಲ್ಲ ನಿಲ್ಲುವ ಹರಕೆ. ಇಂದು ಇರದಿದ್ದರೆ ನಾಳೆ ನಾವೇ ಇಲ್ಲ, ನಾವಿಲ್ಲ ಅಂದರೆ ನಾಳೇನೂ ಇರೋದಿಲ್ಲ; ಇಂದು ನಾಳಿನ ನಡುವೆ ಈ ಬಯಕೆಗಳೇ ಎಲ್ಲ, ಬಯಕೆಯ ಬಯಲೊಳಗೆ ತಿರುಗುತಿದೆ ಈ ಜೀವನವೆಲ್ಲ. ಅಳಿಯುವ ಜೀವನದಿ ಉಳಿಯುವ ಯೋಚನೆ, ಬಯಕೆಯ ಬೇಲಿಯೊಳಗೆ ಅನುದಿನವೂ ಯಾತನೆ; ನಾವಿಲ್ಲಿಗೆ ಬರೋದೆ ಮಲಗೋಕೆ, ಮತ್ತ್ಯಾಕೆ ನಮಗೆ...


  • ಹಸಿವು ಮತ್ತು ಹಣಕಾಸು

    ನಮ್ಮ ದೇಶದ ಸದ್ಯದ ಆರ್ಥಿಕ ವಾತಾವರಣದ ಕಡೆ ಒಮ್ಮೆ ಗಮನ ಕೊಟ್ಟು ನೋಡಿದರೆ ಹೆಚ್ಚು ಸುದ್ದಿಯಲ್ಲಿರೋದು ಆಟೋಮೊಬೈಲ್ ಉದ್ಯಮ. ಈ ವಾಹನಗಳ ಉದ್ಯಮದ ಬಗ್ಗೆ ಕಳೆದ ಏಳು ತಿಂಗಳುಗಳಿಂದಾನು ಒಂದಲ್ಲ ಒಂದು ಸುದ್ದಿಯನ್ನು ಕೇಳುತ್ತಲೇ ಬಂದಿದ್ದೇವೆ. ಈ ರೀತಿಯ ಬೆಳವಣಿಗೆಗೆ ಸುಮಾರು ಕಾರಣಗಳಿವೆ. ಸರಕಾರದ ಸುಂಕದಲ್ಲಿ ಏರಿಕೆ. ಹಳೇ ನೋಟುಗಳ ರದ್ದತಿ. ಕಾರು, ಬೈಕುಗಳ ಬೆಲೆ ಏರಿಕೆ (ಎ.ಬಿ.ಎಸ್. ಹಾಗೂ ಇನ್ನಿತರ ತಾಂತ್ರಿಕ ಬದಲಾವಣೆಯಿಂದ). ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ....


  • ಬಿಡುಗಡೆ

    ಮತ್ತೆ ಬಿಡುಗಡೆ ನನ್ನಿಂದ ನನಗೆ, ತಂಗಾಳಿ ಬೀಸಿದೆ ಇಂದು ಸುತ್ತಲೂ ಮಳೆಯಾದಂಗೆ. ಹಾರುವುದ ಕಲಿತಂತೆ ಮರಿ ಹಕ್ಕಿ, ಸಂತಸಕೆ ಅಳುತಿದೆ ಮನವು ಬಿಕ್ಕಿಬಿಕ್ಕಿ. ಯಾವುದು ಸತ್ಯ ಯಾವುದು ಮಿತ್ಯ, ತಿಳಿಯದಂತೆ ಹಿಡಿದಿತ್ತು ನನ್ನದೇ ಸಾಂಗತ್ಯ. ನನ್ನಿಂದ ನನಗೆ ಇಂದು ಬಿಡುಗಡೆ, ಸಿಕ್ಕಿದ ಘಳಿಗೆಗೆ ದೂರದ ಪಯಣ ಹೊರಟಿದೆ ನನ್ನ ನಡೆ. ನನ್ನಿಂದ ನಾನೆ ಇಂದು ಹೊರಟಿರುವೆ ದೂರಕೆ, ಬಂಧನದ ಬದುಕಿನ ಹಿನ್ನೋಟ ನನಗಿನ್ನೇಕೆ? ಮತ್ತೊಮ್ಮೆ ನನಗೆ ನನ್ನಿಂದಲೇ ಬಿಡುಗಡೆ, ಹಳೆಯ...


  • ಆ ಬೆಟ್ಟದಲ್ಲಿ

    ಯಾವುದೇ ಒಂದು ಯೋಚನೆ ಅಂತ ಹಾಕಿಕೊಳ್ಳದೆ, ಮನಸ್ಸಿಗೆ ತೋಚಿದ ದಾರಿಯ ಹಿಡಿದು ಸಿಕ್ಕ ಊರುಗಳನ್ನ ನೋಡಿಕೊಂಡು ಬರೋದು ಅಂತ ನಮ್ಮ ನಡುವೆ ಮಾತಾಯಿತು. ಅದಕ್ಕೆ ಎಲ್ಲರೂ ಒಪ್ಪಿಕೊಂಡರು. ಹೊರಡುವ ದಿನ ಬಂದಿತು. ನಾಲಕ್ಕು ಬೈಕಿನಲ್ಲಿ ಎಂಟು ಹುಡುಗರು ಹೊರಟು ನಿಂತೆವು. ಬೆಂಗಳೂರಿನಿಂದ ಬಿಡುವಾಗಲೂ ಎಲ್ಲಿಗೆ ಹೋಗೋದು ಎನ್ನುವುದು ಗೊತ್ತಾಗಿರಲಿಲ್ಲ. ಆದರೆ ಮೊದಲು ಒಂದು ಕೆಲಸ ಆಗಬೇಕಿತ್ತು. ಬೆಂಗಳೂರಿನಿಂದ ಓಡಿಹೋಗಿ ಗುಡೇಮಾರನಹಳ್ಳಿಯಲ್ಲಿ ಹೊಕ್ಕಿಕೊಂಡಿದ್ದ ನಮ್ಮ ಗೆಳೆಯ ಚೇತನನನ್ನು ಕರೆದುಕೊಂಡು ಹೋಗಲು ನಾವು...