• ನನ್ನ ಬಿಡದ ಹುಡುಗಿ

    ನಾ ಬಿಡು ಎಂದರೂ ನನ್ನ ಬಿಡದ ಹುಡುಗಿ, ಪ್ರೀತಿಯ ಅಂತರಂಗದಿ ಇರಿಸಿಹಳು ಹುದುಗಿ. ಕಾಡು ಮೇಡು ಅಲೆಯುತ್ತಿದ್ದ ನಾನು ಒಬ್ಬ ಯೋಗಿ, ಕರೆದು ಒಂದೆಡೆ ಕೂರಿಸಿದಳು ನನ್ನ, ಈಗ ನಾನು ಪ್ರೀತಿ ಬಯಸಿದ ವೈರಾಗಿ. ನಾ ಬೇಡ ಎಂದರೂ ಕೊಡಲು ಬಂದಳಾ ಹುಡುಗಿ, ಹುಚ್ಚು ಮನದಲಿ ತುಂಬಿಸಿಕೊಂಡು ಪ್ರೀತಿಯೆಂಬ ಸುಗ್ಗಿ. ನನ್ನೊಳಗೆ ನನ್ನ ಬಯಸಿ ಅರಸುತ್ತಿದ್ದೆ ನಾನು, ಅಂತರಂಗದಿ ಅವಳು ಹರಿಯೆ ನಾ ಈಗ ಹಸಿರಾದ ಕಾನು. ನಾ ಬಿಡು...


  • ಅರಿವು

    ನಮ್ಮ ಮನೆಗೆ ಬೆಕ್ಕಿನ ಮರಿಯನ್ನು ತಂದಾಗ ಅದಕ್ಕೆ ಸುಮಾರು ಎರಡು ತಿಂಗಳು ಆಗಿತ್ತು. ಅದಕ್ಕೆ ಆರೇಳು ತಿಂಗಳು ತುಂಬಿದಾಗ ಅದೂ ಸಹ ಮರಿ ಹಾಕುವ ಪ್ರಾಯಕ್ಕೆ ಬಂದಿತ್ತು. ಜೊತೆಗೆ ಕೆಲವು ತಿಂಗಳಲ್ಲಿ ಮರಿಗಳನ್ನೂ ಹಾಕಿತು. ಹಾಕಿದ ಮರಿಗಳು ಆರೋಗ್ಯವಾಗಿ ಬೆಳೆದು ತಮ್ಮ ದಾರಿಗಳನ್ನು ನೋಡಿಕೊಂಡವು. ನಮ್ಮ ಮನೆಯ ಬೆಕ್ಕೂ ಸಹ ಮರಿಗಳ ಹಾಕೋದರ ಅನುಭವ ಪಡೆಯಲಾರಂಭಿಸಿತು. ವರ್ಷಕ್ಕೆ ಎರಡು ಬಾರಿ ಮರಿಗಳ ಹಾಕುತ್ತಿತ್ತು. ಹೀಗೆ ಒಂದು ಸರಿ ನಮ್ಮ ಬೆಕ್ಕು...


  • ನೋವಲ್ಲಿ ನಲಿವು

    ನೋವಿನಲ್ಲಿ ಬರೆದ ಕಥೆಯು ನಲಿವಿನಿಂದ ತುಂಬಿದೆ, ನಲಿವಿನಲ್ಲಿ ಬರೆದ ಕಥೆಯು ನೋವಿನಲ್ಲಿ ಮುಗಿದಿದೆ. ಎತ್ತ ಹೋದರೂ ಬದುಕು ಒಂದೇ, ನೋವು ನಲಿವಿನ ಸಾಗರ, ಹೇಗೇ ಇದ್ದರೂ ಸಾಲದು ನಮಗೆ, ಬೇರೆ ಬಯಕೆಗಳೇ ನಮಗೆ ಸಡಗರ. ಒಳಗೊಳಗೆ ನೋವು ನಗುತಲಿದ್ದರೂ ಹೊರಗೆಲ್ಲೂ ಯಾರಿಗೂ ತೋರೆವು ನಾವು, ಹೊರಗೆಲ್ಲ ನಲಿವು ಹರಡಿದ್ದರೂ ನಮ್ಮ ಒಳಗೆಲ್ಲೊ ಅಳುಕುತ್ತಿರುವುದು ಮನವು. ಎತ್ತ ಹೋದರೂ ಭಾವನೆ ಒಂದೆ ಏನೂ ಅರಿಯದ ಪಯಣ, ಹೇಗೇ ಇದ್ದರೂ ಸಾಲದು ಮನಕೆ...


  • ಮೂಗುತಿ ಹುಡುಗಿ

    ಪದಗಳೆಲ್ಲ ಕೈಯ್ಯ ತುದಿಯಲ್ಲಿ ಕುಣಿತಾ ಇದ್ವು. ಏನಾದರೂ ಒಂದು ವಿಷಯ ತಲೆಗೆ ಬಂದ್ರೆ, ಅದು ಹಾಗೆ ನನ್ನನ್ನು ಎಳೆದುಕೊಂಡು ಹೋಗಿ ಬರೆಯಿಸಿಕೊಳ್ಳುತ್ತಾ ಇತ್ತು. ಈಗ ನಾನೇ ಬೇಕು ಅಂತ ಕೂತುಕೊಂಡು ನಿನ್ನ ಬಗ್ಗೆ ಬರೆಯಬೇಕು ಅಂದ್ರೆ, ಪದಗಳೆಲ್ಲ ಕೈ ಕೊಟ್ಟಿವೆ. ಎಂಥೆಂಥ ಪದಗಳನ್ನೆಲ್ಲ ಜೋಡಿಸಿ, ತಿದ್ದಿ ತೀಡಿ ಮಾಡಿದ ವಾಕ್ಯಗಳೂ ಕೂಡ ಸಪ್ಪೆಯಾಗಿದೆ ಅನ್ಸುತ್ತೆ. ಎಲ್ಲಾ ಹೇಳಿದ್ರೂ ಹೇಳಿದ್ದು ಸರಿ ಇಲ್ಲ ಅನ್ಸುತ್ತೆ, ಇಲ್ಲಾ ಇನ್ನೂ ಏನೋ ಉಳಿದಿದೆ ಅನ್ಸುತ್ತೆ....


  • ಹೃದಯ ರೋಗ

    ಯಾವ ಸೀಮೆಯ ಹೃದಯ ರೋಗ ಬಂದು ಕುಂತಿದೆ ನನ್ನಲ್ಲಿ ಈಗ. ಅನುಗಾಲ ಈಗ ಒಂದೇ ರಾಗ, ಭಾವನೆಗಳಿಗೆ ಹಾಕಿದಂತೆ ಯಾವುದೋ ಬೀಗ. ಪದಗಳು ಸೋತಿವೆ ಈಗ ತಲುಪಿಸಲು ಮನದಾಳದ ಮಾತು, ಮೌನದ ದನಿಯೂ ಸೊರಗಿದೆ ಈಗ ತನ್ನದೇ ದುಖಃಕ್ಕೆ ಆತು. ಅರಿವಿಗೆ ಬಾರದಾಗಿದೆ ಮನದ ಯಾವ ಭಾವನೆಯು ಈಗ, ಬಂದು ಕುಂತಂತಿದೆ ನನ್ನಲ್ಲಿ ಇಂದು ಯಾವುದೋ ಸೀಮೆಯ ಹೃದಯ ರೋಗ. ಅರಳುವುದೇ ಮತ್ತೆ ಭಾವನೆಗಳಲ್ಲಿ ಮನವು? ಹರಡುವುದೇ ಮತ್ತೆ ತನ್ನ...