• ಕೇಳದ ಶಬ್ಧ

    ಕೇಳಿಸದ ಶಬ್ಧಗಳು ಸೇರಿಕೊಂಡಿವೆ ನಗರಗಳಿಂದ ದೂರ, ನಗರಗಳು ಈಗ ಆದಂತಿವೆ ಈ ಭೂಮಿಗೆ ಭಾರ. ಮೌನವೂ ಈಗ ನಗರದಲ್ಲಿ ಮೌನಾಚರಣೆಗೆ ಇಳಿದಿದೆ, ಕೇಳದ ಶಬ್ಧಗಳೆಲ್ಲವೂ ಈಗ ನಗರಗಳಿಂದ ದೂರವೇ ಉಳಿದಿದೆ. ಸರಾಗವಲ್ಲ ಈಗ ಮೌನದ ಪಯಣ, ನಗರಗಳಲ್ಲೀಗ ಉಳಿದಿವೆ ಕೆಲವೇ ಶಬ್ಧಗಳ ದಿಬ್ಬಣ. ಕೇಳದ ಶಬ್ಧಗಳೆಲ್ಲ ಈಗ ಹಳ್ಳಿಗಳ ಪಾಲು, ನಗರಗಳಲ್ಲಿ ಉಳಿದಿರೋದು ಇನ್ನು ಬರೀ ಸದ್ದಿನ ಧೂಳು. ಹಳ್ಳಿಗಳಲಿ ಮರ, ಗಾಳಿ, ಎಲೆಗಳು ನುಡಿದಿವೆ, ತೆನೆ, ನೀರು, ಬೆಳಕು...


  • ಹಸಿರಿನಿಂದ ನೀಲಿ

    ಹಸಿರಿನಿಂದ ನೀಲಿ, ನಮ್ಮ ಕಣ್ಣು ತೇಲಿ, ಕಂಡ ಕನಸೆಲ್ಲ ಈಗ ನೀಲಿ ಚಿತ್ರಗಳೇ. ಬಯಕೆ ಎಂಬ ಬೇಲಿ, ಹಾರಿದ ಹೃದಯ ಖಾಲಿ, ಬೊಗಸೆಯಲ್ಲಿ ತುಂಬಿದೆ ಈಗ ಕಣ್ಣ ಹನಿಗಳೇ. ಬೇಸಿಗೆಯ ತಂಗಾಳಿ, ನನ್ನನ್ನ ಕೇಳಿ ತನ್ನೊಂದಿಗೆ ಪರಿಮಳವ ಬೀರಿತೆ,? ಅವಳ ಮನವ ದಾಟಿ, ನನ್ನ ಮನದ ಬೇಟೆ, ಪ್ರೀತಿ ಹೇಳಿ ಕೇಳಿ ಬಂದೀತೇ? ಹಗಲು ಈಗ ಇರುಳು, ಅನಿಸುವಂತೆ ನನ್ನ ಕಂಗಳು, ಅವಳ ಎದೆಯಲಿ ಅವಿತುಕೊಂಡಿವೆ, ಎಚ್ಚರಕೂ ಈಗ ಅರುಳು...


  • ಗಹನ

    ತುಂಬಾ ಗಹನ ನನ್ನ ಪ್ರೀತಿ, ಜಗತ್ತಿನ ಕೊನೆಯ ದಾರಿಯ ರೀತಿ. ಆಚೀಚೆ ನೋಡುವ ಅವಕಾಶವಿಲ್ಲ, ತಾನಾಗೆ ಆವರಿಸಿ ನಿಂತಿದೆ ಪ್ರೀತಿಯು ನನ್ನ ಸುತ್ತೆಲ್ಲ. ಹಾಸ್ಯವೇ ಇಲ್ಲದ ಹಸನಾದ ಪ್ರೀತಿ, ಹುರುಪಲಿ ಹರಿಯುವುದೆಂಬ ನಯವಾದ ಭೀತಿ. ಮೀಟುತಿಹುದು ಹೃದಯದಿ ಭಾವನಾ ತಂತಿ, ತುಂಬಾ ಗಹನವಾದದ್ದು ನನ್ನ ಪ್ರೀತಿ. ಅಚ್ಚರಿಯೇ ಇಲ್ಲ ಅಚ್ಚಳಿಯದಿದು, ಮನದಾವರಣದಿ ಅಂಕುಷಕ್ಕೆ ಸಿಲುಕದ್ದು. ಬದಲಾವಣೆಗೆ ಬಾರದು ನನ್ನ ಪ್ರೀತಿ, ಎಲ್ಲಕ್ಕೂ ಗಹನವಾದ ವಿಷಯದ ರೀತಿ. - ಆದರ್ಶ


  • ನೆನಪುಗಳ ಮಾತು ಮಧುರ

    ಅವಳ ನೆನಪುಗಳೆ ಹಾಗೆ, ಹುಣಸೆಹಣ್ಣಿಗೆ ಉಪ್ಪು ಹುಳಿ ಕಾರದ ಜೊತೆ ಸವಿಯಾಗಿರೋಕೆ ಬೆಲ್ಲದ ಜೊತೆ ಕುಟ್ಟುಣುಸೆ ಮಾಡಿ ತಿಂದಶ್ಟೆ ಚೆಂದ. ಮದುವೆಯಾಗಿ ವರ್ಶಗಳು ಉರುಳಿವೆ, ಅದೆಶ್ಟು ಸೊಗಸಾದ ನೆನಪುಗಳು ಬಿತ್ತಿದ್ದಾವೆ. ನೆನೆದ ಪ್ರತಿ ಕ್ಶಣ, ಮುದ, ಮುಕದ ಮೇಲೆ ನಗು. ಪಕ್ಕ ಕೂತವ್ನು ಮುಕ ನೋಡಿದ್ರೆ ಯಾವೋನೊ ತಿಕ್ಲ ಅಂದ್ಕೊಬೇಕು, ಹಾಗೆ. ನಾವಿಬ್ಬರು ಪ್ರೇಮದಿಂದ ನಂಟಸ್ತಿಕೆ ಬೆಳೆಸಿದ್ದು, ಮದುವೆಯ ಮುಂಚೆ ಈಗಿನ ಕಾಲದವರ ಹಾಗೇನೆ. ಗಂಟೆಗಟ್ಟಲೆ ಮಾತುಕತೆ, ಊರಿನ ಉಸಾಬರಿ...


  • ಸುಮಧುರ

    ನಿನ್ನ ಕಂಕಳಿನ ಬೆವರು, ನನ್ನ ಭುಜದ ಮೇಲೆ.. ಹಿಮ್ಮಡಿ ಮೇಲೆ ಮಾಡಿ, ಹೆಬ್ಬೆರಳ ಮೇಲೆ ನೀ ನಿಂತೆ, ಕಣ್ಣುಗಳು ಸೇರುವ ಮೊದಲೇ, ತುಟಿಗಳಿಗೆ ಒಂದಾಗುವ ಚಿಂತೆ.. ಅದಲು ಬದಲು ಆಗಬೇಕಿರುವುದು, ಮನಸ್ಸೊಂದೇನಾ ಸದ್ಯಕ್ಕೆ?, ಹಸಿದು ಕುಂತವನ ಮುಂದೆ ವೇದಾಂತ ಯಾತಕೆ?.. ಕಣ್ಣಲ್ಲೇ ಮಾತು ಸಾಕು, ಸ್ವಲ್ಪ ನಾವು ಮುಂದುವರೆಯಬೇಕು, ಬರೀ ಕೈ ಕಿರುಬೆರಳುಗಳಲ್ಲ, ಎರಡೆರಡು ಕೈಗಳು ಒಂದಾಗಬೇಕು..! ನಾನೇ ಸೋತೆ, ನೀನೇ ಗೆದ್ದೆ, ಕತ್ತಲಲ್ಲಿ ಮೊಳಗಲಿ ನಿನ್ನ ಕೈ ಬಳೆ,...