ಹಸಿರಿನಿಂದ ನೀಲಿ, ನಮ್ಮ ಕಣ್ಣು ತೇಲಿ,
ಕಂಡ ಕನಸೆಲ್ಲ ಈಗ ನೀಲಿ ಚಿತ್ರಗಳೇ.
ಬಯಕೆ ಎಂಬ ಬೇಲಿ, ಹಾರಿದ ಹೃದಯ ಖಾಲಿ,
ಬೊಗಸೆಯಲ್ಲಿ ತುಂಬಿದೆ ಈಗ ಕಣ್ಣ ಹನಿಗಳೇ.

ಬೇಸಿಗೆಯ ತಂಗಾಳಿ, ನನ್ನನ್ನ ಕೇಳಿ
ತನ್ನೊಂದಿಗೆ ಪರಿಮಳವ ಬೀರಿತೆ,?
ಅವಳ ಮನವ ದಾಟಿ, ನನ್ನ ಮನದ ಬೇಟೆ,
ಪ್ರೀತಿ ಹೇಳಿ ಕೇಳಿ ಬಂದೀತೇ?

ಹಗಲು ಈಗ ಇರುಳು, ಅನಿಸುವಂತೆ ನನ್ನ ಕಂಗಳು,
ಅವಳ ಎದೆಯಲಿ ಅವಿತುಕೊಂಡಿವೆ,
ಎಚ್ಚರಕೂ ಈಗ ಅರುಳು ಮರಳು,
ಹಿಡಿದಾಗ ಅವಳ ಕಿರುಬೆರಳು,
ಸುತ್ತೆಲ್ಲ ಭಾವನೆ ಬೆರಗುಗೊಂಡಿವೆ.

- ಆದರ್ಶ