ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಅವಳಿಲ್ಲದ ಹಾದಿ
ಅಂದು ಇಬ್ಬರೂ ಬೈಕಿನಲ್ಲಿ ಟ್ರಿಪ್ ಹೋಗುವಾಗ ಆ ದಾರಿ ಎಷ್ಟು ಸೊಗಸಗಿತ್ತು. ಮಧ್ಯಾಹ್ನದ ಬಿಸಿಲಿತ್ತು. ಆದರೆ ನೀ ಜೊತೆಗಿದ್ದೆ. ಅದಕ್ಕೆ ವಾತಾವರಣ ತಣ್ಣಗಿತ್ತು. ಹಚ್ಚ ಹಸಿರು, ಶಬ್ದವೇ ಇಲ್ಲದ ಜಾಗ, ಪರಿಶುದ್ಧ ಗಾಳಿ.. ಎಲ್ಲಕ್ಕಿಂತ, ಹಿಂದೆಯಿಂದ ಬಿಗಿದಪ್ಪಿರುವ ನೀನು.. ಆ ದಾರಿಯಲ್ಲಿ ಏನೋ ಶಕ್ತಿ ಇದೆ, ನೋವನ್ನು ಮರೆಸೋ ಶಕ್ತಿ, ನೆಮ್ಮದಿಯನ್ನು ಕೊಡೋ ಶಕ್ತಿ... ಆದರೆ ಇವತ್ತು ಅದೇ ದಾರಿಯಲ್ಲಿ ಹೋಗುತ್ತಿದ್ದೇನೆ, ಜೊತೆ ನೀ ಇಲ್ಲ.. ಉಳಿದಿರುವುದು ನಿನ್ನ ನೆನಪು...
-
ಕಡೇ ಜಾತ್ರೆ
ಸಾವು ಬಳಿ ಬಂದಾಗ ಹೊಯ್ದಾಟ ಜೋರು, ಒಟ್ಟಾಗಿ ಸೇರಿಕೊಂಡು ನಲಿದಾಡಿದೆ ಊರು; ಬಿಗಿಯಾಗಿ ಗಾಳಿ ಬೀಸಿದರೆ ಬೆಂಕಿಯೇ ಆರುವುದು, ನೀರ ಮೇಲಿನ ಜೀವನ ಅದೆಶ್ಟು ದಿನ ಉಳಿವುದು; ನಲಿದಾಡು ಕುಣಿದಾಡು ಹುಚ್ಚೆದ್ದು ಓಡು, ಇನ್ಮುಂದೆ ಜಗವೆಲ್ಲ ಮರಣದ ಬೀಡು; ಎದೆಯಲ್ಲಿ ಉಸಿರೇ ನಿಲ್ಲುತ್ತಿಲ್ಲ ಈಗ, ಬದುಕಿನ ಕೊನೆಗೆ ಅರ್ಪಣೆ ಈ ಸಂಧ್ಯಾರಾಗ; ಸಾವಿಂದು ನಡೆಸಿದೆ ಊರಲ್ಲಿ ಜಾತ್ರೆ, ಜನರೇ ಎಳೆಯುತ್ತಿರುವರು ಅದರ ತೇರು; ಮುಗಿಯಲು ಜಾತ್ರೆ ಮುಗಿವುದು ಯಾತ್ರೆ, ಶಾಂತಿಯಿಂದ...
-
ತರ್ಕ
ಸಕಲವೂ ಅವನಿಂದ ಅಂತಾದರೆ, ಸಕಲವೂ ಅವನ ಇಶ್ಟ ಅಂತಾದರೆ, ನಾ ಮಾಡೋ ಪಾಪಗಳು ಕೂಡ ಅವನಿಂದ ಅಂತಲ್ವ? ನಾ ಬರಿ ಪಾತ್ರದಾರಿ, ಅವನೇ ಸೂತ್ರದಾರಿಯಾದರೆ, ನಾ ಮಾಡೋ ಕೆಲಸಗಳಿಗೆಲ್ಲ ಅವನೇ ಕಾರಣ ಅಂತಲ್ವ? ನಾ ಮಾಡೋ ಊಟಕ್ಕೂ ಅವನೇ ಕಾರಣ, ನಾ ನೋಡೋ ನೋಟಕ್ಕೂ ಸಹ... ಹೀಗಿದ್ದಾಗ ನಾನು ಮಾಡಿದ್ದು ಪಾಪ ಅಂತ ಹೇಳೋದು ಯಾಕೆ?? ಇದು ದೇವರು ನನ್ನಿಂದ ಮಾಡಿಸಿದ್ದು, ಅಂತ ಹೇಳಬಹುದಲ್ವ? ಅವನಿಗೆ ಮಾಡಬೇಕು ಅನಿಸಿದನ್ನ, ನನ್ನಿಂದ...
-
ಬೇಸಿಗೆ
ಮತ್ತೆ ಬಂದಿದೆ ಬೇಸಿಗೆ, ನಮ್ಮ ಬಾಳ ಹೊಸಿಲಿಗೆ, ಹಸಿರು ಹುಲ್ಲು ಒಣಗಿ, ಹಳದಿ ಬಣ್ಣಕೆ ತಿರುಗಿ, ಮರದ ಎಲೆಗಳು ಉದುರಿ, ಹೊಸ ಜೀವಗಳು ಚಿಗುರಿ, ಮೆರಿತಿದ್ದ ಚಳಿಗೆ, ಬಿರುಸು ಮುಟ್ಟಿಸುತಾ ಹೊರಟು ಬಂದಿದೆ ಬೇಸಿಗೆ. ಹೊಲ ಗದ್ದೆಗಳಲಿ ಕೆಲಸವಿಲ್ಲ, ಏನು ಮಾಡುವುದೊ ಬದುಕಿಗೆ? ಯಕ್ಷಗಾನ, ಬಯಲಾಟ, ನಾಟಕ ತಿರುಗಾಟ ತಂದಿತು ತನ್ನೊಡನೆ ಬೇಸಿಗೆ. ಮುದುಡಿ ಮಲಗುವ ಕಾಲವಲ್ಲ, ಮಕ್ಕಳು ಇಳಿವರು ಬೀದಿಗೆ, ಒಂದಾದಮೇಲೊಂದು ಆಟದ ಹರಕೆ, ನಿಜ ಮಾಡುತ ಬಂದಿತು...
-
ನನ್ನ ಓಲೆ
ಸಾಗರದಲೆಗಳ ಮೇಲೆ ತೇಲಿಬಂದು ತಲುಪಿದೆ ನನ್ನ ಓಲೆ, ಮಿತಿಮೀರಿ ನಿಂತಿದೆ ಇಂದು, ಮನದ ಬಯಕೆಗಳ ಲೀಲೆ, ಹಾದಿಗೊಂದು ತಿರುವಿದೆ, ನಿಂತು ನೋಡುವ ಇಂದು, ದೂರದೂರಲಿ ನಿಂತು ಕರೆದಿದೆ ಬದುಕ ಗುರಿಯ ಬಿಂದು. ಎಂದೋ ಹುಟ್ಟಿಕೊಂಡಿತು ಎಲ್ಲವ ಮೀರುವ ನಿಲುವು, ಹೊಸ ದಾರಿಯ ಹುಡುಕಿ ಕೊಟ್ಟಿದೆ, ಬದುಕ ನಿತ್ಯ ತಿರುವು. ನಾಳೆಯ ಬಯಕೆಯಲಿ ಆಚರಿಸುವೆ ನಾನು ಈ ದಿನದ ಹಬ್ಬ, ನಿತ್ಯ ಜೀವನದ ಹೋರಾಟದಲಿ ಗೆಲ್ಲುವ ತವಕದಲಿ ನಾನು ಒಬ್ಬ. ನಿತ್ಯದ...