ಸಾವು ಬಳಿ ಬಂದಾಗ ಹೊಯ್ದಾಟ ಜೋರು,
ಒಟ್ಟಾಗಿ ಸೇರಿಕೊಂಡು ನಲಿದಾಡಿದೆ ಊರು;
ಬಿಗಿಯಾಗಿ ಗಾಳಿ ಬೀಸಿದರೆ ಬೆಂಕಿಯೇ ಆರುವುದು,
ನೀರ ಮೇಲಿನ ಜೀವನ ಅದೆಶ್ಟು ದಿನ ಉಳಿವುದು;

ನಲಿದಾಡು ಕುಣಿದಾಡು ಹುಚ್ಚೆದ್ದು ಓಡು,
ಇನ್ಮುಂದೆ ಜಗವೆಲ್ಲ ಮರಣದ ಬೀಡು;
ಎದೆಯಲ್ಲಿ ಉಸಿರೇ ನಿಲ್ಲುತ್ತಿಲ್ಲ ಈಗ,
ಬದುಕಿನ ಕೊನೆಗೆ ಅರ್ಪಣೆ ಈ ಸಂಧ್ಯಾರಾಗ;

ಸಾವಿಂದು ನಡೆಸಿದೆ ಊರಲ್ಲಿ ಜಾತ್ರೆ,
ಜನರೇ ಎಳೆಯುತ್ತಿರುವರು ಅದರ ತೇರು;
ಮುಗಿಯಲು ಜಾತ್ರೆ ಮುಗಿವುದು ಯಾತ್ರೆ,
ಶಾಂತಿಯಿಂದ ಮಲಗಲಿ ಇಡೀ ಊರು.

- ಆದರ್ಶ