• ಗೆಲ್ಲೋದ್ರಲ್ಲಿ ಏನಿದೆ ರೀ? ಇರೋದೆಲ್ಲ ಸೋಲೋದ್ರಲ್ಲೇ!!

    ಗೆಲುವೆಂದರೆ ಅಷ್ಟೇ.. ಅದೊಂದು ನಿಂತ ನೀರು. ಹೆಚ್ಚೆಂದರೆ ಗೆದ್ದೆವು ಎನ್ನುವ ನಿಟ್ಟುಸಿರು, ನಾಲ್ಕು ಜನಗಳ ಹೊಗಳಿಕೆ. ಮೂರ್ನಾಲ್ಕು ದಿನಗಳಾದ ಮೇಲೆ ನೀವು ಗೆದ್ದ ಮೂಡಿನಲ್ಲಿ ಯಾರಾದರು ಮುಂದೆ ಹೋದರೆ “ಓವರ್ ಆಗಿ ಬಿಲ್ಡ್ ಅಪ್ ಕೊಡಬೇಡ, ಅಮಿಕೊಂಡು ಸೈಡಿಗ್ ಹೋಗಪ್ಪ!” ಅಂತ ಮುಖಕ್ಕೆ ಉಗಿಯುತ್ತಾರೆ, ಅಂದರೆ ನೀವು ಸತ್ತವರಷ್ಟೇ ಅಪ್ರಸ್ತುತ. ಸಾಧಿಸಿದ್ದು ಆಯ್ತು ಅಂದ ಮೇಲೆ ಮುಂದೆ ಏನಿದೆ? ನಿಮ್ಮ ಕ್ರಿಯಾಶೀಲತೆ ಕೊನೆಗೊಂಡಂತೆ. ಆದರೆ ಸೋಲು ಎಂದರೆ ಹರಿಯುವ ನೀರಿದ್ದಂತೆ....


  • ಸೂರ್ಯ

    ಮಳೆಯಲ್ಲಿ ನಾನು ನೆನಪುಗಳ ಜೊತೆಯಲ್ಲಿ ನೆನೆದಾಗ ತಂಗಾಳಿ ಬೀಸಿದರು ನನ್ನ ಏಕಾಂತ ಬಿಡದಾಗ ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ ಜಗವೆಲ್ಲ ನಿರ್ಜೀವದೆ ನಿತ್ಯ ಇರುಳ ಕಳೆವಾಗ ನೂರಾರು ತಾರೆಗಳ ಜೊತೆ ನನಗೆ ಸಾಲದಾದಾಗ ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ ಜೀವನದಲ್ಲಿ ನನ್ನ ದಾರಿಯು ಕಿರಿದಾಗಿ ಹೋದಾಗ ಸಣ್ಣ ಬೆಳಕೂ ನನ್ನ ಕಣ್ಣಿಗೆ ಕಾಣದೆ ಇದ್ದಾಗ ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ -...


  • ಅಲ್ಪತೃಪ್ತಿ ಮತ್ತು ಸಾಧನೆ

    ತುಂಬಾ ದೊಡ್ಡ ಸಾಧನೆ ಮಾಡಬೇಕಾ ಅಥವಾ ಏನೂ ಮಾಡದೇ ಆರಾಮಾಗಿ ಇರಬೇಕಾ? ದೊಡ್ಡ ಸಾಧನೆ ಎಂದರೆ ಎಷ್ಟು ದೊಡ್ಡ ಸಾಧನೆ. ಎಲ್ಲಿಯವರೆಗೆ ಸಾಧಿಸಬೇಕು? ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಾಂತಿಯಿಂದ ಬದುಕಬೇಕು ಎಂದರೆ ಎಲ್ಲಿಯವರೆಗೆ ಸುಮ್ಮನಿರಬೇಕು, ಎಷ್ಟೂ ಅಂತ ಸುಮ್ಮನಿರಬಹುದು? ಸಾಧನೆ ಮಾಡಲು ಹೋದರೆ ಎಲ್ಲರಿಗೂ ಸಾಧಿಸಲು ಆಗುತ್ತದಾ, ಅಥವಾ ಸುಮ್ಮನೇ ಇದ್ದುಬಿಡುವೆವು ಎನ್ನುವವರು ಆಸೆ ಬಿಟ್ಟು ಸುಮ್ಮನಿರುತ್ತಾರಾ? ಇವೆಲ್ಲ ಪ್ರಶ್ನೆಗಳು ತಲೆಯಲ್ಲಿ ಕೊರೆಯಲಾರಂಭಿಸಿದಾಗ ಜೀವನ ಇನ್ನೂ ಆರಂಭದ ಮೆಟ್ಟಿಲಲ್ಲಿ ನಿಂತಿತ್ತು....


  • ಉಳಿದವರು ಕಂಡಂತೆ

    ಫಿಲ್ಮ್ ರಿಲೀಸ್ ಅಂತೆ..,ಥೀಯೇಟರ್ ಹೌಸ್ಫುಲ್ ಅಂತೆ.. ಜನಾನೋ ಜನ ಅಂತೆ..,ಸಿಕ್ಕಾಪಟ್ಟೆ ಕಲೆಕ್ಷನ್ ಅಂತೆ.. ಓಡ್ತಂತೆ ಓಡ್ತಂತೆ ಓಡ್ತಂತೆ… ಪಾಪ ಪ್ರೊಡ್ಯುಸರ್ ಸಾಲ ತೀರ್ಸೊಕೆ ಆಗದೆ ಓಡೋದ್ನಂತೆ…. ನಂಗೊತ್ತಿಲ್ಲಪ್ಪ.. ಎಲ್ಲಾ ಉಳಿದವರು ಕಂಡಂತೆ…. ಮನೆ ಆಚೆ ಕಟ್ಟಾಕಿದ್ದ ನಾಯಿ ಬೊಗಳುತ್ತ ಇತ್ತಂತೆ.. ಅವನು ಆಚೆ ಬಂದ್ನಂತೆ..ತಿನ್ನೋಕೆನೋ ಹಾಕಿದ್ನಂತೆ.. ನಾಯಿ ಸುಮ್ಮನಾಯ್ತಂತೆ.. ಮನೆ ಒಳಗೆ ಹೋಗ್ತಾನಂತೆ.. ಹೆಂಡತಿ ಯಾವ್ದೋ ವಿಷಯಕ್ಕೆ ಕೂಗಡ್ತಾ ಇದ್ಳಂತೆ.. ಮತ್ತೆ ಅವನು ಆಚೆ ಬಂದು ನಾಯಿಗೆ ಎರಡು ಬಿಟ್ನಂತೆ.....


  • ಹಳ್ಳಿಗಳು ಕರೆದಿವೆ

    ಕರೆದಿವೆ ಈಗ ಕಿರಿದಾದ ದಾರಿಗಳು ಮರಳಿ ಬಾ ಮನುಜ ಹಳ್ಳಿಗಳೆಡೆಗೆ, ನಿನ್ನ ಊರನ್ನು ಬಿಟ್ಟು ಓಡುವೆ ಏಕೆ ಹಣದ ಅಮಲು ಏರಿತೆ ತಲೆಗೆ? ಮುಗಿಯದ ನಮ್ಮ ಆಸೆಗಳ ತೀರಿಸಲು ಹಳ್ಳಿಗಳೇ ಬಲಿಯಾಗಿವೆ, ನಿನ್ನಯ ಬಯಕೆ ತೀರಿದರೂ ನೆಮ್ಮದಿ ನೀಡದ ಪಟ್ಟಣವು ನಿನಗೊಂದು ವರವೇ? ಬಾ ಗೆಳೆಯ ಹೋಗಣ ಮರಳಿ ನಮ್ಮ ಹಳ್ಳಿಗಳಿಗೆ ಈಗ, ಮರಳಿದರೆ ನಾವು ನಮ್ಮ ಗೂಡಿಗೆ ಇನ್ನು ಬಾರದಿರುವುದೇ ಯೋಗ? ಮರಳಿ ಹೋಗೋಣ ಬಾ ಗೆಳೆಯ ನಾವು...