• ಹಳ್ಳಿಗಳು ಕರೆದಿವೆ

    ಕರೆದಿವೆ ಈಗ ಕಿರಿದಾದ ದಾರಿಗಳು ಮರಳಿ ಬಾ ಮನುಜ ಹಳ್ಳಿಗಳೆಡೆಗೆ, ನಿನ್ನ ಊರನ್ನು ಬಿಟ್ಟು ಓಡುವೆ ಏಕೆ ಹಣದ ಅಮಲು ಏರಿತೆ ತಲೆಗೆ? ಮುಗಿಯದ ನಮ್ಮ ಆಸೆಗಳ ತೀರಿಸಲು ಹಳ್ಳಿಗಳೇ ಬಲಿಯಾಗಿವೆ, ನಿನ್ನಯ ಬಯಕೆ ತೀರಿದರೂ ನೆಮ್ಮದಿ ನೀಡದ ಪಟ್ಟಣವು ನಿನಗೊಂದು ವರವೇ? ಬಾ ಗೆಳೆಯ ಹೋಗಣ ಮರಳಿ ನಮ್ಮ ಹಳ್ಳಿಗಳಿಗೆ ಈಗ, ಮರಳಿದರೆ ನಾವು ನಮ್ಮ ಗೂಡಿಗೆ ಇನ್ನು ಬಾರದಿರುವುದೇ ಯೋಗ? ಮರಳಿ ಹೋಗೋಣ ಬಾ ಗೆಳೆಯ ನಾವು...


  • ಜೋಪಡಿ – ೨

    (ಜೋಪಡಿ-೧ ರಿಂದ ಮುಂದುವರೆದದ್ದು) ಆಸ್ಪತ್ರೆಯಲ್ಲಿ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ನಾನು ಸಮಸ್ಯೆ ಗಂಭೀರ ಆಗಲಿ ಎಂದು ಕಾಯುತಿದ್ದೆ. ಆದರೆ ಆ ಜನರು ಅದಕ್ಕೆ ಅವಕಾಶ ಕೊಡಲಿಲ್ಲ. ತಮ್ಮ ಬಳಿ ಇದ್ದ ಎಲ್ಲ ಹಣವನ್ನು ಒಟ್ಟು ಮಾಡಿದರು. ಇದ್ದ ಅಲ್ಪ ಸ್ವಲ್ಪ ಚಿನ್ನವನ್ನು ಮಾರಿದರು. ಕೆಲವರು ಅದೇ ಆಸ್ಪತ್ರೆಗೆ ರಕ್ತ ಕೊಟ್ಟು ಹಣ ತಂದರು. ಅಂತೂ ಹಣ ಒಟ್ಟು ಆಯಿತು. ಮಗು ಉಳಿಯಿತು. ಅಂದು ರಾತ್ರಿ ನನಗೆ ನಿದ್ರೆ...


  • ಜೋಪಡಿ – ೧

    ನಾನು ಆರೇಳು ವರ್ಷ ಇದ್ದಾಗಲೇ ಅಮ್ಮ ತೀರಿಕೊಂಡಳು. ಅಪ್ಪ ಕುಡುಕ. ಅಮ್ಮ ತೀರಿಹೋದ ಕೂಡಲೆ ಆತ ಇದ್ದ ಮನೆಯನ್ನು, ಚೂರು ಭೂಮಿಯನ್ನು ಮಾರಿ, ಸಿಕ್ಕಿದ ಹಣದಲ್ಲಿ ಊರು ಬಿಟ್ಟು ಹೋದ. ಮನೆಯನ್ನು ತೆಗೆಧುಕೊಂಡವರು ನನ್ನನ್ನು ಚಿಕ್ಕವನೆಂದು ಕೂಡ ನೋಡದೆ ಆಚೆ ಹಾಕಿದರು. ದುಡಿಯುವಂಥ ವಯಸ್ಸಲ್ಲ ಅದು. ಅಸಲಿಗೆ ಹೊಟ್ಟೆ ಹಸಿವು ಬಿಟ್ಟು ಏನು ತಿಳಿಯದ ವಯಸ್ಸದು. ಹೊಟ್ಟೆಪಾಡಿಗೆ ಬೇರೆಯವರ ಮುಂದೆ ಕೈ ಚಾಚಿದರೆ ಊಟಕ್ಕಿಂತ ಬೈಗುಳವೇ ಸಿಗುತಿತ್ತು. ಆ ರಾತ್ರಿ...


  • ಅನುಭವ : ಗೋಧಿ ಬಣ್ಣ ಸಾಧಾರಣ ಮೈಕಟ್ಟು

    ನನ್ನ ವಿದ್ಯಾಭ್ಯಾಸದ ಬಹುಪಾಲು ಭಾಗ ಕನ್ನಡ ಮಾಧ್ಯಮದಲ್ಲೇ ಆಗಿದ್ದರೂ, ಅತ್ಯಂತ ಕಡಿಮೆ ಅವಧಿಯ ಸಂಗಾತಿ ಇಂಗ್ಲಿಷ್ ನಲ್ಲೇ ಹೆಚ್ಚಾಗಿ fb status ಗಳ ಮೂಲಕ, ದೊಡ್ಡ ದೊಡ್ಡ ಪದಗಳ ರಾಶಿ ಹಾಕಿ, ದೊಡ್ಡ ಚಿತ್ರ ವಿಮರ್ಶಕನೇನೋ ಎಂಬ ಹುಂಬತನದಲ್ಲಿರುತ್ತಿದ್ದ ನನಗೆ ಏಕೋ ಇಂದು ಇಂಗ್ಲಿಷ್ ವಾಂತಿ ಮಾಡಿ ನಾಲ್ಕೈದು ಸಾಲಲ್ಲಿ ಮುಗಿಸಿದರೆ ಢೋಂಗಿಯಾಗುತ್ತೇನೇನೋ ಎಂಬ ಅನುಮಾನ ಕಾಡಹತ್ತಿತು, ಅದಕ್ಕಾಗಿಯೇ ಮಾತೃಭಾಷೆ ಕನ್ನಡದಲ್ಲೇ, ಭಾವನೆಗಳಿಗೆ ಮೋಸ ಮಾಡದೇ ಅನುಭವವನ್ನು ಬಿಚ್ಚಿಡುವ ಯತ್ನ...


  • ಇರದಾಗಲೇ ಇರುವುದು ಖುಷಿ

    ಕಾಲೇಜಿನಲ್ಲಿ ಇರುವಾಗ ಜೇಬಿನಲ್ಲಿ ಒಂದು ಮೊಬೈಲು, ಕಿವಿಯಲ್ಲೊಂದು ಇಯರ್ ಫೋನು ಇದ್ದರೆ ಅದೊಂದು ರೀತಿ ‘ಸ್ಟೈಲ್’ ಆಗಿತ್ತು. ತುಸು ಹೆಚ್ಚೇ ಹಾಡುಗಳ ಕೇಳುವ ಮನಸಿದ್ದರಿಂದ ಸದಾಕಾಲ ನನ್ನ ಕಿವಿಯಲ್ಲಿ ಇಯರ್ ಫೋನು ಇರುತ್ತಿತ್ತು. ಆಗೆಲ್ಲ ನನಗೆ ಮನೆಯಿಂದ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ಹಾಡುಗಳ ಕೇಳುವ ಅಭ್ಯಾಸವಿತ್ತು. ನನ್ನೊಡನೆ ನನ್ನ ಗೆಳೆಯ ಸಹ ಮನೆಯಿಂದ – ಕಾಲೇಜು, ಕಾಲೇಜಿನಿಂದ – ಮನೆಗೆ ಒಟ್ಟಿಗೆ ಓಡಾಡುವ ಪರಿಪಾಟವಿತ್ತು. ನನ್ನ ಗೆಳೆಯನ ಬಳಿಯೂ ಒಂದು...